ಮಂಗಳವಾರ, ಮೇ 11, 2021
24 °C

ಮಿನಿ ಎಸ್‌ಯುವಿ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು!

ನೇಸರ ಕಾಡನಕುಪ್ಪೆ Updated:

ಅಕ್ಷರ ಗಾತ್ರ : | |
ಕಾರು ಕೊಳ್ಳುವುದು ಈಗ ಪ್ರತಿಷ್ಠೆಯ ವಿಚಾರವಂತೂ ಅಲ್ಲ. ಆಕರ್ಷಕ ಸಾಲ ಸೌಲಭ್ಯಗಳಿರುವುದರಿಂದ ಯಾರು ಬೇಕಾದರೂ ಕಾರು ಕೊಳ್ಳಬಹುದು ಎಂಬ ಪರಿಸ್ಥಿತಿಯಿದೆ.ಜನರ ಆರ್ಥಿಕ ಮಟ್ಟವೂ ಹೆಚ್ಚಿದೆ. ಕಡಿಮೆ ಬೆಲೆಯ ಎಕಾನಮಿ ಕಾರು ಹೊಂದಿದ್ದವರು, ಕೊಂಚ ಹೆಚ್ಚು ಬೆಲೆಯ ಎಕ್ಸಿಕ್ಯುಟಿವ್ ಅಥವಾ ಪ್ರೀಮಿಯಂ ಕಾರು ಕೊಳ್ಳಲು ಸಿದ್ಧತೆ ನಡೆಸುತ್ತಿರುತ್ತಾರೆ. ಕಾರು ಎಂದರೆ ಕೇವಲ ಪ್ರಯಾಣವಲ್ಲ. ಅದು ಇಡೀ ಕುಟುಂಬಕ್ಕೇ ಊರುಗೋಲಿದ್ದಂತೆ. ಪ್ರಯಾಣಿಕರನ್ನು ಕರೆದೊಯ್ಯುವ ಜತೆಗೆ ಅನೇಕ ಸಾಮಗ್ರಿ, ಲಗ್ಗೇಜ್‌ಗಳನ್ನೂ ಹೊತ್ತಯ್ಯಬೇಕಾದದು ಕಾರ್‌ನ ಕೆಲಸ! ಆದರೆ ಸಣ್ಣ ಕಾರುಗಳಲ್ಲಿ ಇದಕ್ಕೆ ಅನೇಕ ಮಿತಿಗಳಿವೆ.ಪ್ರಯಾಣಿಕರ ಸೀಟುಗಳೇ ಕಾರ್‌ನ ಪ್ರಮುಖ ಜಾಗ ಆಕ್ರಮಿಸುತ್ತವೆ. ಲಗ್ಗೇಜ್ ಇಡುವ ಬೂಟ್ ಸಾಮಾನ್ಯವಾಗಿ ಸಣ್ಣದಿರುತ್ತದೆ. ಇದಕ್ಕೆ ಪರಿಹಾರ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ (ಎಸ್‌ಯುವಿ) ಕೊಳ್ಳುವುದು. ಇದರಲ್ಲಿ ಪ್ರಯಾಣಿಕರು, ಅವರ ಲಗ್ಗೇಜುಗಳಿಗೆ ಸಮಾನ ಜಾಗವುಂಟು. ಆದರೆ ಎಸ್‌ಯುವಿ ಎಂದರೆ ಸಾಮಾನ್ಯವಾಗಿ ಪ್ರೀಮಿಯಂ ವಾಹನಗಳೇ. ಬೆಲೆ ರೂ. 10 ಲಕ್ಷ ಮೀರುತ್ತದೆ. ಇದು ದುಬಾರಿಯೇ ಸರಿ.ಈ ದುಬಾರಿ ಮೊತ್ತ ಕೊಡಲಾಗದವರಿಗೆ ಭಾರತದಲ್ಲಿ ಮಿನಿ ಎಸ್‌ಯುವಿಗಳಿವೆ. ಇವುಗಳ ಬೆಲೆಯೂ ಕಡಿಮೆ, ಸೌಲಭ್ಯವೂ ಹೆಚ್ಚು!


 

ರಿಯೋ: ಮೊದಲ ಮಿನಿ ಎಸ್‌ಯುವಿ!

ಪ್ರೀಮಿಯರ್ ಹೆಸರನ್ನು ಯಾರು ತಾನೇ ಕೇಳಿಲ್ಲ. ಫಿಯೆಟ್ ಕಾರುಗಳನ್ನು ಭಾರತದಲ್ಲಿ ಮಾರಾಟ ಮಾಡುತ್ತಿದ್ದ ಕಂಪೆನಿಯಿದು. ಫಿಯೆಟ್- ಪ್ರೀಮಿಯರ್ ಪದ್ಮಿನಿ ಕಾರ್‌ಗಳು ಇಂದಿಗೂ ರಸ್ತೆಗಳಲ್ಲಿ ಸಂಚರಿಸುತ್ತ ಪ್ರೀಮಿಯರ್‌ನ ಹೆಸರನ್ನು ಚಿರಸ್ಥಾಯಿಯಾಗಿಸಿವೆ. ಎಸ್‌ಯುವಿ ಎಂದರೆ ಟೊಯೋಟಾ ಇನ್ನೋವಾ, ಮಹಿಂದ್ರಾ ಮತ್ತು ಮಹಿಂದ್ರಾದ ಸ್ಕಾರ್ಪಿಯೋ, ಕ್ಸೈಲೋ, ಟಾಟಾ ಸಫಾರಿ ಎನ್ನುತ್ತಿದ್ದ ಕಾಲದಲ್ಲಿ ದೇಶದ ಪ್ರಪ್ರಥಮ ಮಿನಿ ಎಸ್‌ಯುವಿ ಹೊರಬಿಡುವ ಮೂಲಕ ಪ್ರಯಾಣಿಕರ ವಾಹನ ಕ್ಷೇತ್ರಕ್ಕೆ ಪುನರ್ ಪ್ರವೇಶ ನೀಡಿದ್ದು ಪ್ರೀಮಿಯರ್‌ನ ಹೆಗ್ಗಳಿಕೆ. ಪ್ರೀಮಿಯರ್ ರಿಯೋ ಈ ಹೊಸ ಮಿನಿ ಎಸ್‌ಯುವಿ.ಯಾವುದೇ ಎಸ್‌ಯುವಿಯ ಮೂಲ ಸೌಕರ್ಯ- ಅದಕ್ಕೆ 4 ವೀಲ್ ಡ್ರೈವ್ ಇರಬೇಕು. ಅಂದರೆ ವಾಹನದ ನಾಲ್ಕೂ ಚಕ್ರಗಳಿಗೆ ಎಂಜಿನ್ ಸಂಪರ್ಕ ಇರಬೇಕು. ವಿಶಾಲವಾದ ಸೀಟ್‌ಗಳು, ಅಗಲವಾದ ಲಗ್ಗೇಜ್ ಕ್ಯಾಬಿನ್, ದಪ್ಪನಾದ ಟಯರ್, ಅಗಲವಾದ ಚಕ್ರ ಇರಬೇಕು. ಈ ಎಲ್ಲ ಸೌಲಭ್ಯಗಳನ್ನೂ ಒಳಗೊಂಡ, 2010 ರಲ್ಲಿ ಬಿಡುಗಡೆಯಾದ ಎಕಾನಮಿ ವಿಭಾಗಕ್ಕೆ ಸೇರುವ ವಿಶೇಷ ಎಸ್‌ಯುವಿ ಇದು.ಎಂಜಿನ್ ವಿಶೇಷ: ರಿಯೋ ಡೀಸೆಲ್ ಹಾಗೂ ಪೆಟ್ರೋಲ್ ಎಂಜಿನ್ ಉಳ್ಳ ಶಕ್ತಿಶಾಲಿ ಎಸ್‌ಯುವಿ. ಡೀಸೆಲ್ ಹೆಚ್ಚು ಮೈಲೇಜ್ ಕೊಡುವುದಾದರೆ, ಪೆಟ್ರೋಲ್ ನಯವಾದ, ಹೆಚ್ಚು ಶಕ್ತಿಶಾಲಿ ಚಾಲನೆಯನ್ನು ನೀಡುತ್ತದೆ. ಮಾರುತಿ ಸುಜುಕಿಯ ಜಿಪ್ಸಿ ಎಸ್‌ಯುವಿಯನ್ನು ಬಿಟ್ಟರೆ, ಪೆಟ್ರೋಲ್ ಎಂಜಿನ್ ಉಳ್ಳ ಏಕೈಕ ಮಿನಿ ಎಸ್‌ಯುವಿ ಇದು. 4 ಸಿಲಿಂಡರ್ ಡೀಸೆಲ್ ಎಂಜಿನ್, 64.8 ಬಿಎಚ್‌ಪಿ ಶಕ್ತಿ, 152 ಎನ್‌ಎಂ (ನ್ಯೂಟನ್ ಮೀಟರ್) ಟಾರ್ಕ್ ಹೊಂದಿದೆ. ಪೆಟ್ರೋಲ್ ಎಂಜಿನ್ ಪೈಕಿ 4 ಸಿಲಿಂಡರ್ 1173 ಸಿಸಿ, 76.6 ಬಿಎಚ್‌ಪಿ ಶಕ್ತಿ, 103.9 ಎನ್‌ಎಂ ಟಾರ್ಕ್ ಹೊಂದಿರುವುದು ವಿಶೇಷ. ರಿಯೋ ಗರಿಷ್ಟ 130 ಕಿಲೋ ಮೀಟರ್ ವೇಗವನ್ನು ಸುಲಭವಾಗಿ ಮುಟ್ಟುವ ಶಕ್ತಿ ಹೊಂದಿದೆ.

ಸದೃಢ ದೇಹ

 
ವಾಹನ ಸದೃಢವಾಗಿ ನಿರ್ಮಾಣಗೊಂಡಿದೆ. ಸಂಪೂರ್ಣ ಉಕ್ಕಿನ ಮೇಲ್ಮೈ ಇದ್ದು, 3970 ಮಿಲಿ ಮೀಟರ್ ಉದ್ದ, 1570 ಎಂಎಂ ಅಗಲ, 1730 ಎಂಎಂ ಇತ್ತರ, 2420 ಎಂಎಂ ವೀಲ್‌ಬೇಸ್ (ಮುಂದಿನ- ಹಿಂದಿನ ಚಕ್ರಗಳ ನಡುವಿನ ಅಂತರ) ಹೊಂದಿದೆ. 200 ಎಂಎಂ ಗ್ರೌಂಡ್ ಕ್ಲಿಯರೆನ್ಸ್ (ನೆಲ ಮತ್ತು ವಾಹನದ ತಳ ಭಾಗದ ನಡುವಣ ಅಂತರ) ಇದೆ. ಇಡೀ ವಾಹನ ಕೇವಲ 4.7 ಮೀಟರ್ ಜಾಗದಲ್ಲಿ ತಿರುಗ ಬಲ್ಲದು. ಈ ಮೂಲಕ ಯಾವುದೇ ಎಸ್‌ಯುವಿ ಎಂತಹುದೇ ಕಠಿಣ ರಸ್ತೆ (ಟೆರೈನ್)ಯಲ್ಲಿ ಸಂಚರಿಸಲು ಬೇಕಾದ ಎಲ್ಲಾ ಅರ್ಹತೆಗಳನ್ನೂ ರಿಯೋ ಹೊಂದಿದೆ. 1145 ಕಿಲೋ ಗ್ರಾಂ ತೂಕ ಇರುವ ಕಾರಣ, ಒಳ್ಳೆಯ ರಸ್ತೆ ಹಿಡಿತ ಇದೆ. 15 ಇಂಚ್‌ನ ಅಲಾಯ್ ಚಕ್ರ, ಟ್ಯೂಬ್‌ಲೆಸ್ ಟಯರ್ ಹೊಂದಿದೆ.ಇದು ಪರಿಸರ ಪ್ರೇಮಿಯೂ ಹೌದು. ಬಿಎಸ್3 ಮತ್ತು ಬಿಎಸ್4 ನಿಯಮಬದ್ಧವಾಗಿದ್ದು, ಲೀಟರ್ ಡೀಸೆಲ್‌ಗೆ 12 ಕಿಲೋ ಮೀಟರ್, ಲೀಟರ್ ಪೆಟ್ರೋಲ್‌ಗೆ 10 ಕಿಲೋ ಮೀಟರ್ ಮೈಲೇಜ್ ನೀಡುತ್ತದೆ. ಎಸಿ ಬಳಕೆಯಾದರೆ 1 ಕಿಲೋ ಮೀಟರ್ ಮೈಲೇಜ್ ನಷ್ಟವಾಗುತ್ತದೆ. 46 ಲೀಟರ್ ಇಂಧನ ತುಂಬುವ ಟ್ಯಾಂಕ್ ಇದೆ.ಎಸ್‌ಯುವಿಗೆ ಬೇಕಾದ ಗರಿಷ್ಟ 1158 ಲೀಟರ್ ಲಗ್ಗೇಜ್ ಶೇಖರಣಾ ಸಾಮರ್ಥ್ಯ ಇರುವುದು ಇದನ್ನು ಸಮರ್ಥ ಎಸ್‌ಯುವಿಯನ್ನಾಗಿ ಮಾಡುತ್ತದೆ. ರಿಯೋ ಪೆಟ್ರೋಲ್ ಅವತರಣಿಕೆಯ ಬೆಲೆ (ಬೆಂಗಳೂರು ಎಕ್ಸ್ ಶೋರೂಂ) ಜಿಎಕ್ಸ್ ರೂ. 4.87 ಲಕ್ಷ, ಜಿಎಲ್‌ಎಕ್ಸ್ ರೂ.5.33 ಲಕ್ಷ, ನ್ಯೂ ಲುಕ್ ಜಿಎಕ್ಸ್ ರೂ. 6.15 ಲಕ್ಷ, ನ್ಯೂ ಲುಕ್ ಜಿಎಲ್‌ಎಕ್ಸ್ ರೂ. 6.42 ಲಕ್ಷ. ಡೀಸೆಲ್ ಕಾರು ಇನ್ನೂ ಬಿಡುಗಡೆಯಾಗಿಲ್ಲ.

 


ಟಾಟಾ ಸುಮೋ ಗ್ರಾಂಡಿ ಡೈಕರ್

ಟಾಟಾ ಎಂದರೆ ಕೇವಲ ಲಾರಿ, ಬಸ್ ಎಂದು ಹೇಳುವ ಕಾಲದಲ್ಲಿ ಪ್ಯಾಸೆಂಜರ್ ವಾಹನ ಕ್ಷೇತ್ರಕ್ಕೆ ದಾರಿ ತೋರಿಸಿದ ಎಸ್‌ಯುವಿ ಟಾಟಾ ಸುಮೋ. 1994 ರಲ್ಲಿ ಬಿಡುಗಡೆಗೊಂಡ, ಅತ್ಯಂತ ಯಶಸ್ಸು ಕಂಡ ವಾಹನವಿದು. ಭಾರತದಲ್ಲಿ ಪರಿಪೂರ್ಣವಾದ ಎಸ್‌ಯುವಿ ಇಲ್ಲದೇ ಇದ್ದ ಕಾಲದಲ್ಲಿ, ಜೀಪ್ ಮಾದರಿಯಲ್ಲೆೀ, ಎಸ್‌ಯುವಿಯ ಕೆಲವು ಲಕ್ಷಣಗಳನ್ನು ಹೊತ್ತು ಬಂದ ವಾಹನವಿದು. ಆರಂಭದಲ್ಲಿ ಕೇವಲ ಟಾಟಾ ಸುಮೋ ಆಗಿ, ನಂತರ ಟಾಟಾ ಸುಮೋ ವಿಕ್ಟಾ, ಟಾಟಾ ಸ್ಪೇಷಿಯೋ, ಟಾಟಾ ಸುಮೋ ವಿಕ್ಟಾ ಆಗಿ ವಿವಿಧ ಅವತರಣಿಕೆಗಳಲ್ಲಿ ಹೊರಬಂದ ಸುಮೋ, ಈಗ ಟಾಟಾ ಸುಮೋ ಗ್ರಾಂಡಿ ಡೈಕರ್ ಮೂಲಕ ಪರಿಪೂರ್ಣ ಎಸ್‌ಯುವಿ ಆಗಿ ರೂಪಾಂತರಗೊಂಡಿದೆ. ಮಹಿಂದ್ರಾದ ಸ್ಕಾರ್ಪಿಯೋಗೆ ಪ್ರತಿಸ್ಪರ್ಧಿಯಾಗಿ ಹೊರಬಂದ ಗ್ರಾಂಡಿ, ಎಲ್ಲ ರೀತಿಯಲ್ಲೂ ವಿಶೇಷ ಸೌಲಭ್ಯ ಹೊಂದಿರುವುದು ವಿಶೇಷ.
ಶಕ್ತಿ, ಸೌಲಭ್ಯದಲ್ಲಿ ಅತ್ಯುತ್ತಮ

ಶಕ್ತಿ ಹಾಗೂ ಸೌಲಭ್ಯದಲ್ಲಿ ಗ್ರಾಂಡಿ ಅತ್ಯುತ್ತಮ ಎಂದೇ ಹೇಳಬಹುದು. 2179 ಸಿಸಿ ಡೀಸೆಲ್ ಎಂಜಿನ್, 120 ಬಿಎಚ್‌ಪಿ ಶಕ್ತಿ, 250 ಎನ್‌ಎಂ ಟಾರ್ಕ್ ಇದ್ದು, 5 ಸ್ಪೀಡ್ ಗಿಯರ್ ಇವೆ. ಗರಿಷ್ಟ 150 ಕಿಲೋ ಮೀಟರ್ ವೇಗ ಸಾಧಿಸಬಲ್ಲದು. 16 ಇಂಚ್‌ನ ಅಲಾಯ್ ಚಕ್ರಗಳಿದ್ದು, ಉತ್ತಮ ರಸ್ತೆ ಹಿಡಿತವಿದೆ. ಪವರ್ ಸ್ಟೀರಿಂಗ್ ಜತೆಗೆ ಟಿಲ್ಟಬಲ್ (ಎತ್ತರ ಹೊಂದಿಸಬಹುದಾದ) ಸ್ಟೀರಿಂಗ್ ಇದೆ. ಅಲ್ಲದೇ ಟಾಟಾ ಸುಮೋದ ವೈಶಿಷ್ಟ್ಯ ಎಂಬಂತೆ 9 ಮಂದಿ ಕೂರುವ ಸೌಲಭ್ಯವಿದೆ. ಆದರೆ ಆರಾಮಾಗಿ 6 ಮಂದಿ ಕೂರಬಹುದು.ಎಕಾನಮಿ ಎಸ್‌ಯುವಿಗಳ ಪೈಕಿ ಅತ್ಯುತ್ತಮ ಎಸಿ ಸೌಲಭ್ಯವಿರುವುದು ವಿಶೇಷ. ಎಂತಹ ಬೇಸಿಗೆಯಲ್ಲೂ ಉತ್ತಮವಾಗಿ ಪ್ರಯಾಣಿಕರ ಕ್ಯಾಬಿನ್‌ನ್ನು ತಂಪಾಗಿರಿಸುತ್ತದೆ. ಜತೆಗೆ ವಾಹನದ ಜತೆಗೆ ಕಂಪೆನಿಯಿಂದ ಬರುವ ಆಡಿಯೋ ಸಿಸ್ಟಂ ಇದೆ. ಪವರ್ ವಿಂಡೋಸ್, ಎತ್ತರ ಹೊಂದಿಸಿಕೊಳ್ಳಬಹುದಾದ ಚಾಲಕನ ಸೀಟ್ ಇದೆ.4421 ಎಂಎಂ ಉದ್ದ, 1780 ಎಂಎಂ ಅಗಲ, 1940 ಎಂಎಂ ಎತ್ತರವಿದ್ದು, ಅತ್ಯುತ್ತಮ ಚಾಲನೆಯ ಅನುಭವವಾಗುತ್ತದೆ. 180 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಇರುವುದು ಅನಾನುಕೂಲ. 65 ಲೀಟರ್ ಡೀಸೆಲ್ ಶೇಖರಿಸಬಹುದಾದ ಸೌಲಭ್ಯವಿದ್ದು, ಲೀಟರ್ ಡೀಸೆಲ್‌ಗೆ ಗರಿಷ್ಟ 12 ಕಿಲೋ ಮೀಟರ್ ಮೈಲೇಜ್ ನೀಡುತ್ತದೆ. ಗ್ರಾಂಡಿಯ ಬೆಲೆ ರೂ 777172 ಲಕ್ಷದಿಂದ 819854 ಲಕ್ಷ.

 


 

ಟಾಟಾ ಸುಮೋ ಗ್ರಾಂಡಿ ಡೈಕರ್

ಟಾಟಾ ಎಂದರೆ ಕೇವಲ ಲಾರಿ, ಬಸ್ ಎಂದು ಹೇಳುವ ಕಾಲದಲ್ಲಿ ಪ್ಯಾಸೆಂಜರ್ ವಾಹನ ಕ್ಷೇತ್ರಕ್ಕೆ ದಾರಿ ತೋರಿಸಿದ ಎಸ್‌ಯುವಿ ಟಾಟಾ ಸುಮೋ. 1994 ರಲ್ಲಿ ಬಿಡುಗಡೆಗೊಂಡ, ಅತ್ಯಂತ ಯಶಸ್ಸು ಕಂಡ ವಾಹನವಿದು. ಭಾರತದಲ್ಲಿ ಪರಿಪೂರ್ಣವಾದ ಎಸ್‌ಯುವಿ ಇಲ್ಲದೇ ಇದ್ದ ಕಾಲದಲ್ಲಿ, ಜೀಪ್ ಮಾದರಿಯಲ್ಲೆೀ, ಎಸ್‌ಯುವಿಯ ಕೆಲವು ಲಕ್ಷಣಗಳನ್ನು ಹೊತ್ತು ಬಂದ ವಾಹನವಿದು. ಆರಂಭದಲ್ಲಿ ಕೇವಲ ಟಾಟಾ ಸುಮೋ ಆಗಿ, ನಂತರ ಟಾಟಾ ಸುಮೋ ವಿಕ್ಟಾ, ಟಾಟಾ ಸ್ಪೇಷಿಯೋ, ಟಾಟಾ ಸುಮೋ ವಿಕ್ಟಾ ಆಗಿ ವಿವಿಧ ಅವತರಣಿಕೆಗಳಲ್ಲಿ ಹೊರಬಂದ ಸುಮೋ, ಈಗ ಟಾಟಾ ಸುಮೋ ಗ್ರಾಂಡಿ ಡೈಕರ್ ಮೂಲಕ ಪರಿಪೂರ್ಣ ಎಸ್‌ಯುವಿ ಆಗಿ ರೂಪಾಂತರಗೊಂಡಿದೆ. ಮಹಿಂದ್ರಾದ ಸ್ಕಾರ್ಪಿಯೋಗೆ ಪ್ರತಿಸ್ಪರ್ಧಿಯಾಗಿ ಹೊರಬಂದ ಗ್ರಾಂಡಿ, ಎಲ್ಲ ರೀತಿಯಲ್ಲೂ ವಿಶೇಷ ಸೌಲಭ್ಯ ಹೊಂದಿರುವುದು ವಿಶೇಷ.
ಶಕ್ತಿ, ಸೌಲಭ್ಯದಲ್ಲಿ ಅತ್ಯುತ್ತಮ

ಶಕ್ತಿ ಹಾಗೂ ಸೌಲಭ್ಯದಲ್ಲಿ ಗ್ರಾಂಡಿ ಅತ್ಯುತ್ತಮ ಎಂದೇ ಹೇಳಬಹುದು. 2179 ಸಿಸಿ ಡೀಸೆಲ್ ಎಂಜಿನ್, 120 ಬಿಎಚ್‌ಪಿ ಶಕ್ತಿ, 250 ಎನ್‌ಎಂ ಟಾರ್ಕ್ ಇದ್ದು, 5 ಸ್ಪೀಡ್ ಗಿಯರ್ ಇವೆ. ಗರಿಷ್ಟ 150 ಕಿಲೋ ಮೀಟರ್ ವೇಗ ಸಾಧಿಸಬಲ್ಲದು. 16 ಇಂಚ್‌ನ ಅಲಾಯ್ ಚಕ್ರಗಳಿದ್ದು, ಉತ್ತಮ ರಸ್ತೆ ಹಿಡಿತವಿದೆ. ಪವರ್ ಸ್ಟೀರಿಂಗ್ ಜತೆಗೆ ಟಿಲ್ಟಬಲ್ (ಎತ್ತರ ಹೊಂದಿಸಬಹುದಾದ) ಸ್ಟೀರಿಂಗ್ ಇದೆ. ಅಲ್ಲದೇ ಟಾಟಾ ಸುಮೋದ ವೈಶಿಷ್ಟ್ಯ ಎಂಬಂತೆ 9 ಮಂದಿ ಕೂರುವ ಸೌಲಭ್ಯವಿದೆ. ಆದರೆ ಆರಾಮಾಗಿ 6 ಮಂದಿ ಕೂರಬಹುದು.ಎಕಾನಮಿ ಎಸ್‌ಯುವಿಗಳ ಪೈಕಿ ಅತ್ಯುತ್ತಮ ಎಸಿ ಸೌಲಭ್ಯವಿರುವುದು ವಿಶೇಷ. ಎಂತಹ ಬೇಸಿಗೆಯಲ್ಲೂ ಉತ್ತಮವಾಗಿ ಪ್ರಯಾಣಿಕರ ಕ್ಯಾಬಿನ್‌ನ್ನು ತಂಪಾಗಿರಿಸುತ್ತದೆ. ಜತೆಗೆ ವಾಹನದ ಜತೆಗೆ ಕಂಪೆನಿಯಿಂದ ಬರುವ ಆಡಿಯೋ ಸಿಸ್ಟಂ ಇದೆ. ಪವರ್ ವಿಂಡೋಸ್, ಎತ್ತರ ಹೊಂದಿಸಿಕೊಳ್ಳಬಹುದಾದ ಚಾಲಕನ ಸೀಟ್ ಇದೆ.4421 ಎಂಎಂ ಉದ್ದ, 1780 ಎಂಎಂ ಅಗಲ, 1940 ಎಂಎಂ ಎತ್ತರವಿದ್ದು, ಅತ್ಯುತ್ತಮ ಚಾಲನೆಯ ಅನುಭವವಾಗುತ್ತದೆ. 180 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಇರುವುದು ಅನಾನುಕೂಲ. 65 ಲೀಟರ್ ಡೀಸೆಲ್ ಶೇಖರಿಸಬಹುದಾದ ಸೌಲಭ್ಯವಿದ್ದು, ಲೀಟರ್ ಡೀಸೆಲ್‌ಗೆ ಗರಿಷ್ಟ 12 ಕಿಲೋ ಮೀಟರ್ ಮೈಲೇಜ್ ನೀಡುತ್ತದೆ. ಗ್ರಾಂಡಿಯ ಬೆಲೆ ರೂ 777172 ಲಕ್ಷದಿಂದ 819854 ಲಕ್ಷ.

 
 

 

ಮಹಿಂದ್ರಾ ಥಾರ್

ಹಿಂದೆ ಜೀಪ್‌ಗಳೆಂದು ಕರೆಯಲ್ಪಡುತ್ತಿದ್ದ ವಾಹನಗಳನ್ನು ಈಗ ಎಸ್‌ಯುವಿಗಳೆಂದೇ ಕರೆಯಲಾಗುತ್ತಿದೆ. ಹಾಗಾಗಿ ಮಹಿಂದ್ರಾ ಅಂಡ್ ಮಹಿಂದ್ರಾದ ಥಾರ್ ಹೊಸ ಎಸ್‌ಯುವಿಗಳಲ್ಲಿ ಒಂದಾಗಿದೆ. 2011ರಲ್ಲಿ ಬಿಡುಗಡೆಯಾದ ಹೊಚ್ಚ ಹೊಸ ಎಸ್‌ಯುವಿ ಇದು. ಮಹಿಂದ್ರಾ ಕಂಪೆನಿ ಜೀಪ್‌ಗಳನ್ನು ತಯಾರಿಸುವುದರಲ್ಲಿ ನಿಸ್ಸೀಮ.ಪೊಲೀಸ್ ಇಲಾಖೆಯ ಬಹುತೇಕ ಜೀಪ್‌ಗಳು ಮಹಿಂದ್ರಾದ್ದೇ. ಅಲ್ಲದೇ ಜೀಪ್‌ಗಳನ್ನು ತಯಾರಿಸುವ ಭಾರತದ ಏಕೈಕ ಕಂಪೆನಿಯೂ ಹೌದು. ಆದರೆ ತನ್ನ ಬೊಲೆರೋ ಹಾಗೂ ಸ್ಕಾರ್ಪಿಯೋ ಮೂಲಕ ಎಸ್‌ಯುವಿ ಕ್ಷೇತ್ರಕ್ಕೆ ಕಾಲಿಟ್ಟ ಮಹಿಂದ್ರಾ ಎಸ್‌ಯುವಿ ಕ್ಷೇತ್ರದಲ್ಲಿ ಇಂದು ಹಿಡಿತ ಸಾಧಿಸಿರುವುದು ಹೆಗ್ಗಳಿಕೆ. ಭಾರತದಲ್ಲಿ ಎಸ್‌ಯುವಿ ಎಂದರೆ ಮಹಿಂದ್ರಾವನ್ನು ಬಿಟ್ಟು ಮಾತನಾಡಲಿಕ್ಕೇ ಆಗದು. 
ಥಾರ್ ಮಹಿಂದ್ರಾದ ಅತ್ಯುತ್ತಮ ಮಿನಿ ಎಸ್‌ಯುವಿ ಎನ್ನಬಹುದು. ಮಹಿಂದ್ರಾದ ಬೊಲೆರೋ ಹಾಗೂ ಸ್ಕಾರ್ಪಿಯೋ ಶ್ರೇಷ್ಠ ಎಸ್‌ಯುವಿಗಳೇ ಆದರೂ, ಬೆಲೆಯಲ್ಲೆ ಹೆಚ್ಚೇ ಇವೆ. ಬೆಲೆಯಲ್ಲಿ ಕಡಿಮೆಯಿರುವ, ಪರಿಪೂರ್ಣ ಸ್ಪೋರ್ಟ್ಸ್ ಲಕ್ಷಣಗಳನ್ನು ಹೊಂದಿರುವ, ಪರಿಪೂರ್ಣ ಆಫ್ ರೋಡ್ (ಕಚ್ಚಾ ರಸ್ತೆ) ಎಸ್‌ಯುವಿ ಥಾರ್. ಇದು ನಗರದ ರಸ್ತೆಗಳು, ಮರಳು, ನೀರು, ಕಲ್ಲು ಮಿಶ್ರಿತ ರಸ್ತೆಗಳಲ್ಲಿ ಸರಾಗವಾಗಿ ಸಾಗಬಲ್ಲ ಎಸ್‌ಯುವಿ.

ಮಹಿಂದ್ರಾ ಥಾರ್ ಏಕೆ?

ಥಾರ್ ಇನ್ನಿತರ ಎಸ್‌ಯುವಿಗಳ ಮಧ್ಯೆ ಪ್ರತ್ಯೇಕವಾಗಿ, ವಿಶಿಷ್ಟ ಸ್ಥಾನ ಪಡೆಯಬೇಕಾದರೆ ಅದಕ್ಕಿರುವ ವಿಶೇಷ ಲಕ್ಷಣಗಳೇ ಕಾರಣ. ಇದು ದೇಶದ ಪ್ರಪ್ರಥಮ ಬಿಎಸ್4 ಕಾಮನ್ ರೇಲ್ ಡೈರೆಕ್ಟ್ ಡೀಸೆಲ್ ಎಂಜಿನ್ ಉಳ್ಳ ಸಾಫ್ಟ್ ಟಾಪ್ ಎಸ್‌ಯುವಿ. ಅತ್ಯಧಿಕ ಶಕ್ತಿಯುಳ್ಳ 105 ಬಿಎಸ್‌ಪಿ, 247 ಎನ್‌ಎಂ ಟಾರ್ಕ್ ಎಂಜಿನ್ ಹೊಂದಿದ್ದು, ಬಲಶಾಲಿ ರೈಡಿಂಗ್ ಸಿಗಲಿದೆ. ಪವರ್ ಸ್ಟೀರಿಂಗ್ ಜತೆಗೆ 5.25 ಮೀಟರ್ ಟರ್ನಿಂಗ್ ರೇಡಿಯಸ್, ಸ್ವತಂತ್ರ ಮುಂಭಾಗದ ಸಸ್ಪೆನ್ಷನ್ ಇದ್ದು ಸರಾಗವಾದ ಚಾಲನೆ ಸಿಗುತ್ತದೆ.ಆರಂಭದಲ್ಲಿ ಥಾರ್‌ಗೆ ಎಸಿ ಸೌಲಭ್ಯ ಇರಲಿಲ್ಲ. ಈ ಕೊರತೆಯಿಂದ ವಾಹನ ಮಾರಾಟ ಕುಸಿತಗೊಂಡ ಕಾರಣ, ಈಗ ಎಸಿ ಸೌಲಭ್ಯ ನೀಡಲಾಗಿದೆ. ಚಳಿಗಾಲಕ್ಕಾಗಿ ಏರ್ ಹೀಟರ್ ವ್ಯವಸ್ಥೆಯೂ ಇದೆ. ಇದರ ಜತೆಗೆ ಮಹಿಂದ್ರಾದ ಸಾಬೀತಾದ 4 ವೀಲ್ ಡ್ರೈವ್ ಸಿಸ್ಟಂ ಇದ್ದು, ಎಂತಹ ಕಡು ಕಷ್ಟ ರಸ್ತೆ, ದಿಣ್ಣೆಗಳನ್ನು ಸರಾಗವಾಗಿ ಹತ್ತಿಳಿಯುತ್ತದೆ. ಇದರ ಜತೆಗೆ ಎಂಜಿನ್ ಇಮ್ಮಬಲೈಸರ್ ಇದ್ದು, ಗರಿಷ್ಟ ವೇಗ ಮಿತಿ ಮೀರಿದಾಗ ಎಂಜಿನ್ ಆಫ್ ಆಗಿ, ಹಾನಿಯಾಗದಂತೆ ಕಾಪಾಡುತ್ತದೆ.ಥಾರ್‌ನಲ್ಲಿ ಆರು ಪ್ರಯಾಣಿಕರು ಆರಾಮಾಗಿ ಕೂರಬಹುದು. ಆದರೆ ಮುಂಭಾಗದ ಸೀಟುಗಳ ಪ್ರಯಾಣಿಕರಿಗೆ ಸುಖಕರ ಪ್ರಯಾಣ ಸಿಗುತ್ತದೆ. ಹಿಂಬದಿಯ ಸೀಟುಗಳು ಎದುರು- ಬದುರಾಗಿದ್ದು ನಾಲ್ವರು ಕೂರಬಹುದು. ಬರೋಬ್ಬರಿ 2498 ಸಿಸಿ ಸಾಮರ್ಥ್ಯದ 5 ಗಿಯರ್‌ಗಳುಳ್ಳ ಡೀಸೆಲ್ ಎಂಜಿನ್ ಇದೆ. ಸಂಪೂರ್ಣ ಉಕ್ಕಿನ ಬಲಶಾಲಿ ದೇಹವಿದೆ. 3920 ಎಂಎಂ ಉದ್ದ, 1710 ಎಂಎಂ ಅಗಲ, 1930 ಎಂಎಂ ಎತ್ತರದ ದೇಹವಿದೆ. 2430 ಎಂಎಂ ವೀಲ್‌ಬೇಸ್ ಹಾಗೂ 200 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಇರುವ ಕಾರಣ ಅತ್ಯದ್ಭುತ ರಸ್ತೆ ಹಿಡಿತ ಸಾಧ್ಯ. 16 ಇಂಚ್‌ನ ಟ್ಯೂಬ್‌ಲೆಸ್ ಟಯರ್ ಇದೆ.ಜತೆಗೆ ಹಿಂದಿನ ಸೀಟ್‌ಗಳನ್ನು ಕಳಚಿಟ್ಟು, ಸಂಪೂರ್ಣವಾಗಿ ಲಗ್ಗೇಜ್ ಕೊಂಡೊಯ್ಯುವಂತೆ ಮಾರ್ಪಾಟು ಮಾಡಿಕೊಳ್ಳಬಹುದಾದ ಸೌಲಭ್ಯ ಥಾರ್‌ನಲ್ಲಿದೆ. ಹಾಗಾಗಿ ಗರಿಷ್ಟ 3000 ಲೀಟರ್ ಲಗ್ಗೇಜ್ ಕೊಂಡೊಯ್ಯಬಹುದಾದ ಅನುಕೂಲ ಥಾರ್‌ನಲ್ಲಿದೆ.ಅಲ್ಲದೇ ಗರಿಷ್ಟ 130 ಕಿಲೋ ಮೀಟರ್ ವೇಗ ಹೊಂದಲಿದ್ದು, ಎಸ್‌ಯುವಿಯ ನಿಜವಾದ ಮಜಾ ಅನುಭವಿಸುವ ಅವಕಾಶವೂ ಸಿಗಲಿದೆ. ಥಾರ್‌ನ ಬೆಲೆ (ಬೆಂಗಳೂರು ಎಕ್ಸ್ ಶೋರೂಂ) ರೂ. 782700 ಲಕ್ಷ. ಆದರೆ ಹಣಕ್ಕೆ ತಕ್ಕ ಮೌಲ್ಯವಿದೆ. ಮಹಿಂದ್ರಾ ಬ್ರ್ಯಾಂಡ್ ನೇಮ್ ಈ ಹಣಕ್ಕೆ ಬೆಲೆ ಕೊಡುತ್ತದೆ. ಅಷ್ಟೇ ಅನುಕೂಲಗಳೂ ಇದ್ದು, ಮಾಲೀಕನ ಮುಖದಲ್ಲಿ ನಗೆಮೂಡಿಸುವುದರಲ್ಲಿ ಥಾರ್ ಯಶಸ್ವಿಯಾಗುತ್ತದೆ. 
 

ಮಾರುತಿ- ಸುಜುಕಿ ಜಿಪ್ಸಿ

ಭಾರತದಲ್ಲಿ ವಿಲ್ಲೆಸ್ ಬಿಟ್ಟರೆ, ದೇಸೀಯ ನಿರ್ಮಾಣದ ಪ್ರಪ್ರಥಮ ಪೆಟ್ರೋಲ್ ಎಂಜಿನ್ ಎಸ್‌ಯುವಿ ಮಾರುತಿ ಸುಜುಕಿಯ ಜಿಪ್ಸಿ. ಜಿಪ್ಸಿ ತನ್ನದೇ ಆದ ಕೆಲವು ವೈಶಿಷ್ಟ್ಯಗಳನ್ನು ಹೊಂದಿದ್ದು, ಜಿಪ್ಸಿಗೆ ಸರಿಸಮಾನವಾದ ಎಸ್‌ಯುವಿ ಇಲ್ಲವೇ ಇಲ್ಲ ಎನ್ನಬಹುದು. ಜಿಪ್ಸಿಯ ಹಗುರವಾದ ದೇಹ, ಚುರುಕುತನದಿಂದ ಕೂಡಿದ ಎಂಜಿನ್, ಅತ್ಯದ್ಭುತ ನೋಟ ಜಿಪ್ಸಿಗೆ ವಿಶೇಷ ಸ್ಥಾನವನ್ನು ತಂದುಕೊಟ್ಟಿದೆ. 
ಭಾರತದಲ್ಲಿ ಮಹಿಂದ್ರಾ ಅಂಡ್ ಮಹಿಂದ್ರಾ ಜೀಪ್‌ಗಳನ್ನು ಹೊರಬಿಡುತ್ತಿದ್ದಾಗ, ಪೆಟ್ರೋಲ್ ಎಂಜಿನ್‌ನ ಎಸ್‌ಯುವಿ ಹೊರಬಿಟ್ಟು ಮಾರುತಿ ಯಶಸ್ಸು ಸಾಧಿಸಿತ್ತು. ಮಾರುತಿ ಹೊರಬಿಟ್ಟ 800, ಓಮ್ನಿಗಳ ಜತೆಗೆ, ಇಂದಿಗೂ ಆರಂಭದಿಂದಲೂ ಉತ್ಪಾದನೆಯಲ್ಲಿರುವ ವಾಹನವಿದು. ಅಚ್ಚರಿಯ ಸಂಗತಿಯೆಂದರೆ ಆರಂಭದಲ್ಲಿ ಹೊರಬಂದ ಜಿಪ್ಸಿ ಕೇವಲ 850 ಸಿಸಿ ಪೆಟ್ರೋಲ್ ಎಂಜಿನ್ ಹೊಂದಿತ್ತು. ಅತಿ ಹಗುರವಾದ ವಾಹನವಾಗಿದ್ದ ಕಾರಣ, ಚುರುಕುತನದಿಂದ ಕೂಡಿದ್ದು, ರೇಸ್ ಮಾಡುವವರ ಸ್ವರ್ಗವೆಂದೇ ಜಿಪ್ಸಿ ಈಗಲೂ ಹೆಸರು ಮಾಡಿದೆ.

ಜಿಪ್ಸಿಯ ವೈಶಿಷ್ಟ್ಯಗಳು

ಜಿಪ್ಸಿ ಈಗ ಜಿಪ್ಸಿ ಕಿಂಗ್ ಹೆಸರಲ್ಲಿ ಬರುತ್ತಿದೆ. 1298 ಸಿಸಿ ಎಂಪಿಎಫ್‌ಐ (ಮಲ್ಟಿ ಪಾಯಿಂಟ್ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ) ಪೆಟ್ರೋಲ್ ಎಂಜಿನ್ ಇದೆ. 80 ಬಿಎಚ್‌ಪಿ ಎಂಜಿನ್, 103 ಎನ್‌ಎಂ ಟಾರ್ಕ್ ಇದ್ದು, ಅತ್ಯುತ್ತಮ ಶಕ್ತಿಯಿದೆ. 4010 ಎಂಎಂ ಉದ್ದ, 1540 ಎಂಎಂ ಅಗಲ, 1845 ಎಂಎಂ ಎತ್ತರದ ದೇಹವಿದೆ. 2375 ಎಂಎಂ ವೀಲ್‌ಬೇಸ್ ಹಾಗೂ ಬರೋಬ್ಬರಿ 210 ಎಂಎಂ ಎತ್ತರದ ಗ್ರೌಂಡ್ ಕ್ಲಿಯರೆನ್ಸ್ ಇದೆ.ಅಲ್ಲದೇ ಯಾವುದೇ ರೀತಿಯ ರಸ್ತೆಯಲ್ಲಿ ಸಾಗಬಲ್ಲ ಸಾಮರ್ಥ್ಯ ಜಿಪ್ಸಿಗೆ ಇದೆ. ಇದರ 4 ವೀಲ್ ಡ್ರೈವ್ ಅತ್ಯುತ್ತಮವಾಗಿದೆ. ಅಲ್ಲದೇ ಕಡು ಬಿಸಿಲು, ಕೊರವ ಚಳಿಯಲ್ಲೂ ಹಾಳಾಗದ ವಿಶೇಷ ಎಂಜಿನ್ ಇದೆ. ಲೀಫ್ ಸ್ಪ್ರಿಂಗ್ ಸಸ್ಪೆನ್ಷನ್ ಇದ್ದು, ಕೊಂಚವೂ ಕುಲುಕಾಡದ ಚಾಲನೆ ನೀಡುತ್ತದೆ. ಇದರ ಜತೆಗೆ ಸಾಫ್ಟ್ ಟಾಪ್, ಹಾರ್ಡ್ ಟಾಪ್ ಅವಕಾಶವಿದ್ದು, ಇವೆರಡೂ ಅತ್ಯುತ್ತಮ ನೋಟ ಹೊಂದಿವೆ. ಆಸ್ಪತ್ರೆಗಳಿಗೆಂದೇ ವಿಶೇಷ ಸೌಲಭ್ಯವುಳ್ಳ ಅಂಬುಲೆನ್ಸ್ ಸಹ ಲಭ್ಯವಿದೆ.ಆದರೆ ಇಂಟೀರಿಯರ್ಸ್‌ನಲ್ಲಿ ವಿಶೇಷ ಸೌಲಭ್ಯವೇನಿಲ್ಲ. 6 ಮಂದಿ ಆರಾಮಾಗಿ ಕೂರಬಹುದು. ಎಸಿ ಸೌಲಭ್ಯವಿಲ್ಲ. ಪವರ್ ಸ್ಟೀರಿಂಗ್ ಇದೆ. ಪೆಟ್ರೋಲ್ ಎಂಜಿನ್ ಆದರೂ ಗರಿಷ್ಟ 10 ರಿಂದ 12 ಕಿಲೋ ಮೀಟರ್ ಮೈಲೇಜ್ ನೀಡಬಲ್ಲದಷ್ಟೇ. ಆದರೆ 15 ಇಂಚ್‌ನ ಚಕ್ರಗಳಿದ್ದು, ಉತ್ತಮ ರಸ್ತೆ ಹಿಡಿತ, ವೇಗ ಸಾಧನೆ ಮಾಡಬಲ್ಲದು. ಜಿಪ್ಸಿಯನ್ನು ಬುಕ್ ಮಾಡಿದ ನಂತರವಷ್ಟೇ ತಯಾರು ಮಾಡಲಾಗುತ್ತದೆ. ಬೆಲೆ (ಬೆಂಗಳೂರು ಎಕ್ಸ್ ಶೋರೂಂ) ಸಾಫ್ಟ್ ಟಾಪ್ ರೂ. 5,89,039 ಲಕ್ಷ ರೂ., ಹಾರ್ಡ್ ಟಾಪ್ ರೂ. 6,08,446 ಲಕ್ಷ ರೂ., ಆಂಬ್ಯುಲೆನ್ಸ್ ರೂ. 5,56, 461 ಲಕ್ಷ ರೂ.
 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.