ಮಿನಿ ವಿಧಾನಸೌಧ ನಿರ್ಮಾಣಕ್ಕೆ ಟೆಂಡರ್

7

ಮಿನಿ ವಿಧಾನಸೌಧ ನಿರ್ಮಾಣಕ್ಕೆ ಟೆಂಡರ್

Published:
Updated:

ಸಿಂಧನೂರು:  ಸಾರ್ವಜನಿಕರ ಹಲವು ದಿನದ ಬೇಡಿಕೆಯಾದ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಕಾಲ ಕೂಡಿ ಬಂದಿದೆ. ಇದಕ್ಕಾಗಿ ಬರುವ ತಿಂಗಳಿನಲ್ಲಿ ಟೆಂಡರ್ ಕರೆಯಲಾಗುವುದು ಎಂದು ಶಾಸಕ ವೆಂಕಟರಾವ್ ನಾಡಗೌಡ ತಿಳಿಸಿದರು.ಅವರು ಭಾನುವಾರ ತಮ್ಮ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2.50ಕೋಟಿ ವೆಚ್ಚದಲ್ಲಿ ಮಿನಿ ವಿಧಾನಸೌಧ ನಿರ್ಮಿಸಲಾಗುವುದು. ಉಪ ನೊಂದಣಾಧಿಕಾರಿಗಳ, ತಹಸೀಲ್, ಅಂಗವಿಕಲರ ಹಾಗೂ ಖಜಾನೆ ಇಲಾಖೆ ಕಾರ್ಯಾಲಯ ಒಂದೇ ಕಡೆ ಕಾರ್ಯನಿರ್ವಹಿಸುವುದರಿಂದ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಿದೆ ಎಂದು ಹೇಳಿದರು.ರಾಜ್ಯ ಸರ್ಕಾರ ವಿರೋಧ ಪಕ್ಷದ ಅಭ್ಯರ್ಥಿಗಳ ಕ್ಷೇತ್ರಗಳಿಗೆ ಅನುದಾನ ನೀಡುತ್ತಿಲ್ಲ. ಇದರಿಂದ ಹಲವು ಯೋಜನೆಗಳು ನೆನೆಗುದಿಗೆ ಬಿದ್ದಿವೆ ಎಂದು ಆಪಾದಿಸಿದರು. ನಗರದ ಮುಖ್ಯ ರಸ್ತೆ, ಒಳಚರಂಡಿ ಹಾಗೂ ಫುಟ್‌ಬಾತ್ ನಿರ್ಮಾಣಕ್ಕೆ ಅಧಿವೇಶನದಲ್ಲಿ 6.50ಕೋಟಿ ಹಣಕ್ಕೆ ಒಪ್ಪಿಗೆ ನೀಡಲಾಗಿದ್ದರೂ ತಾಂತ್ರಿಕ ಕಾರಣದಿಂದ ಕೆಲಸ ನಡೆದಿಲ್ಲ. ಕಳೆದ 19 ವರ್ಷಗಳಿಂದ ಒಳ ಬಳ್ಳಾರಿ ಏತ ನೀರಾವರಿ ಯೋಜನೆ ನೆನೆಗುದಿಗೆ ಬಿದ್ದಿದೆ. ಈ ಬಗ್ಗೆ ಸರ್ಕಾರಕ್ಕೆ ಒತ್ತಾಯಿಸಿದರೂ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಎಂ.ಲಿಂಗಪ್ಪ, ನಗರಸಭೆ ಸದಸ್ಯ ಕೆ.ಜಿಲಾನಿಪಾಷಾ, ವೀರಶೈವ ಸಮಾಜದ ತಾಲ್ಲೂಕು ಅಧ್ಯಕ್ಷ ಅಶೋಕಗೌಡ ಗದ್ರಟಗಿ, ದೇವರಾಜು ಅರಸು ನಿಗಮದ ವೆಂಕಟೇಶ, ವೀರೇಶಪ್ಪ ಮಾಡಶಿರವಾರ, ರೈತ ಘಟಕದ ಅಧ್ಯಕ್ಷ ಮಲ್ಲನಗೌಡ ಮಾವಿನಮಡು ಇದ್ದರು.ವಿಜ್ಞಾನ ಪ್ರಯೋಗ ಪ್ರದರ್ಶನ ಉದ್ಘಾಟನೆ

ರಾಯಚೂರು:
ಮಕ್ಕಳು ಕನಸುಗಳನ್ನು ಕಂಡು ಅದರ ಸಿದ್ಧಿಗಾಗಿ ನಿರಂತರ ಪ್ರಯತ್ನ ಪಡಬೇಕು ಎಂಬ ಮಾಜಿ ರಾಷ್ಟ್ರಪತಿ, ವಿಜ್ಞಾನಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರ ಆಶಯವನ್ನು ಮಕ್ಕಳು ಸಾಕಾರಗೊಳಿಸಬೇಕು ಎಂದು ವಿಜ್ಞಾನ ಕೇಂದ್ರದ ಕಾರ್ಯದರ್ಶಿ ಪ್ರೊ ಸಿ.ಡಿ ಪಾಟೀಲ ಹೇಳಿದರು.ಇಲ್ಲಿನ ಮುನ್ನೂರು ಕಾಪು ಶಿಕ್ಷಣ ಸಂಸ್ಥೆ ಶಾಲೆಯಲ್ಲಿ ಸೋಮವಾರ ಏರ್ಪಡಿಸಿದ್ದ ವಿಜ್ಞಾನ ಪ್ರಯೋಗ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬಿಇಓ ಜಿ ಮಲ್ಲಿಕಾರ್ಜುನ ಮಾತನಾಡಿ, ಎಲ್ಲ ಶಾಲೆಗಳಲ್ಲಿ ವಿಜ್ಞಾನ ಪ್ರಯೋಗ ಪ್ರದರ್ಶನ ನಡೆಸುವಂತಾಗಲಿ ಎಂದರು.ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಎ ಪಾಪಾರೆಡ್ಡಿ ಮಾತನಾಡಿ, ಮಕ್ಕಳ ಸೃಜನಶೀಲತೆಗೆ ವಿಜ್ಞಾನ ಇಂಬು ಕೊಡುತ್ತದೆ. ಹೊಸ ತನವನ್ನು ಮಕ್ಕಳು ಅರಿಯಬೇಕು. ಶಾಲೆ ಎಂಬುದು ಕೇವಲ ಪಾಠದ ಮಂದಿರವಾಗಬಾರದು. ಪ್ರಯೋಗ ಶಾಲೆಯಾಗಬೇಕು ಎಂದು ತಿಳಿಸಿದರು.ವಿಷಯ ಪರಿವೀಕ್ಷಕಣಾಧಿಕಾರಿ ಮಲ್ಲಯ್ಯ ನಾಗೋಲಿ, ಪೀರಜಾದೆ ಉಪಸ್ಥಿತರಿದ್ದರು. ಆಡಳಿತಾಧಿಕಾರಿ ರಾಮಣ್ಣ ಹವಳೆ ಸ್ವಾಗತಿಸಿದರು. ಶಿಕ್ಷಕಿ ಶೈಲಜಾ ನಿರೂಪಿಸಿದರು. ಶಿಕ್ಷಕಿ ಬಸವರಾಜೇಶ್ವರಿ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry