ಮಿನುಗು ಮಿಂಚು : ಪೆಟ್ರಾ ಪ್ರಪಂಚ

7

ಮಿನುಗು ಮಿಂಚು : ಪೆಟ್ರಾ ಪ್ರಪಂಚ

Published:
Updated:

ಅರೇಬಿಯನ್ ಮರುಭೂಮಿಯ ಅಂಚಿನಲ್ಲಿರುವ ಪ್ರಾಚೀನ ನಗರ ಪೆಟ್ರಾ. ಜೋರ್ಡಾನ್‌ನ ಎತ್ತರದ ಬೆಟ್ಟಸಾಲುಗಳ ನಡುವೆ ಈ ನಗರವಿದೆ. ಬಹಳ ಹಿಂದೆ ಕೆತ್ತಲಾದ ರಚನೆಗಳು ಇಂದಿಗೂ ಕಣ್ಮನ ಸೆಳೆಯುತ್ತವೆ. ಬಂಡೆಗಳ ಮೇಲೆಯೇ ಕೆತ್ತನೆ ಮಾಡಿರುವುದರಿಂದ ಈಗಲೂ ಅವು ಉತ್ತಮ ಪರಿಸ್ಥಿತಿಯಲ್ಲಿವೆ. ಸುಣ್ಣಕಲ್ಲಿನ ಬಂಡೆಗಳ ರಚನೆಗಳು ಇಲ್ಲಿರುವುದರಿಂದ ಪೆಟ್ರಾ ನಗರವನ್ನು `ರೋಸ್ ಸಿಟಿ' ಎಂದೂ ಕರೆಯುತ್ತಾರೆ.ಕ್ರಿ.ಪೂ. ನಾಲ್ಕನೇ ಶತಮಾನದಲ್ಲಿ ನೆಬಾಟಿಯನ್ ಜನರು ತಮ್ಮ ರಾಜಧಾನಿಯಾಗಿ ಪೆಟ್ರಾ ನಗರವನ್ನ ನಿರ್ಮಿಸಿದರು. ಕಾಲಕ್ರಮೇಣ ಅದು ಜನಸಮುದಾಯದಿಂದ ದೂರವೇ ಆಗಿ ಉಳಿಯಿತು. ಶತಮಾನಗಳವರೆಗೆ ಅದರ ಅಸ್ತಿತ್ವವೇ ಗೊತ್ತಿರಲಿಲ್ಲ. ಸ್ವಿಟ್ಜರ‌್ಲೆಂಡ್‌ನ ಯೊಹಾನ್ ಬರ್ಕಾಟ್ 19ನೇ ಶತಮಾನದಲ್ಲಿ ಈ ನಗರವನ್ನು ಪತ್ತೆಹಚ್ಚಿದ.ಅರಬ್ ಮೂಲದ ನೆಬಾಟಿಯನ್ ಜನರು ನೀರಿನ ನಿರ್ವಹಣೆ ಹಾಗೂ ಎಂಜಿನಿಯರಿಂಗ್‌ನಲ್ಲಿ ಪಳಗಿದವರು. ಕಲಾವಂತಿಕೆಯೂ ಅವರ ರಕ್ತದಲ್ಲಿತ್ತು. ಕುಡಿಯುವ ನೀರು ಮೂಲೆಮೂಲೆಗೂ ತಲುಪುವಂಥ ದೊಡ್ಡ ಕಾಲುವೆಗಳನ್ನು ಪೆಟ್ರಾ ನಗರದಲ್ಲಿ ಅವರು ನಿರ್ಮಿಸಿದ್ದಾರೆ.ಈ ಅದ್ಭುತವಾದ ನಗರಿಯನ್ನು ತಲುಪಲು ಸಿಕ್ ಎಂಬ ಸ್ಥಳದಿಂದ 1 ಕಿ.ಮೀ. ಕಿರುಹಾದಿಯಲ್ಲಿ ಪಯಣಿಸಬೇಕು. ಆ ಹಾದಿಯಲ್ಲಿ ಹೋದರೆ ಚೌಕಾಕಾರದ ಸ್ಥಳ ಅನಾವರಣಗೊಳ್ಳುತ್ತದೆ. ಪೆಟ್ರಾದ ಸುಂದರ ಕೆತ್ತನೆಗಳ ರಚನೆಗಳಿರುವ ಸ್ಥಳ ಅದು. `ಖಜಾನೆ' (ಏಕ್-ಖಜನೆ) ಹೆಸರಿನ ರಚನೆಯು 40 ಮೀಟರ್ ಉದ್ದವಿದೆ. ಮೂಲತಃ ಅದು ಪ್ರತಿಷ್ಠಿತ ಗೋಪುರ.ಸ್ಥಳೀಯರ ಪ್ರಕಾರ ಕಳ್ಳರು ಇಲ್ಲಿ ಕದ್ದಮಾಲನ್ನು ಬಚ್ಚಿಡುತ್ತಿದ್ದರಂತೆ. ಹಾಗಾಗಿ ಇದನ್ನು ಖಜಾನೆ ಎಂದು ಕರೆಯಲಾಗುತ್ತಿದೆ. ಗ್ರೀಕ್-ರೋಮನ್ ಶೈಲಿಯ ರಂಗಮಂದಿರ ಕೂಡ ಇದ್ದು, ಅದೂ ಪ್ರಸಿದ್ಧಿಯಾಗಿದೆ. ನಾಲ್ಕು ಸಾವಿರ ಪ್ರೇಕ್ಷಕರು ಇಲ್ಲಿ ಆಸೀನರಾಗಬಹುದು.ಅರಬರ ಮೂಲ ದೇವರು ದುಶಾರಾ. ಆಯತಾಕಾರದ ಕಪ್ಪು ಕಲ್ಲು ಈ ದೇವರ ಮೂರ್ತಿರೂಪ. ಅಲತ್ ದೇವಿಯ ರಚನೆಯೂ ಈ ಆಕಾರದಲ್ಲಿ ಮಿಳಿತಗೊಂಡಿದೆ. ಪೆಟ್ರಾದಲ್ಲಿ ಪ್ರಾರ್ಥನೆ ಸಲ್ಲಿಸಲು ವಿಶಾಲ ಸ್ಥಳಗಳಿದ್ದು, ನೈವೇದ್ಯ ಅಥವಾ ಬಲಿ ನೀಡಲೂ ಹೊರಭಾಗದಲ್ಲಿ ಅವಕಾಶವಿದೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry