ಶನಿವಾರ, ಜನವರಿ 18, 2020
20 °C

ಮಿನುಗು ಮಿಂಚು – ಉಲ್ಕಾಶಿಲೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಿನುಗು ಮಿಂಚು – ಉಲ್ಕಾಶಿಲೆಗಳು

ಉಲ್ಕಾಶಿಲೆ ಎಂದರೇನು?

ಭೂಮಿಯ ಪರಿಧಿಯಿಂದ ಆಚೆಗಿನ ಪ್ರದೇಶದ ಯಾವುದಾದರೂ ಒಂದು ವಸ್ತು ಇಲ್ಲಿ ಉರಿದುಬಿದ್ದಾಗ ಉಂಟಾಗುವುದೇ ಉಲ್ಕಾಶಿಲೆ.

ಭೂಮಿಯ ಮೇಲೆ ಹಲವು ಉಲ್ಕಾಶಿಲೆಗಳು ಬೀಳುತ್ತಿವೆಯೇ?

ಅದನ್ನು ಹೇಳುವುದು ಕಷ್ಟ. ಭೂಮಿಯನ್ನು ತಲುಪುವ ಮೊದಲೇ ಅನೇಕ ಉಲ್ಕಾಶಿಲೆಗಳು ಉರಿದುಹೋಗುತ್ತವೆ. ಉರಿದ ನಂತರವೂ ಅವುಗಳ ಒಂದಿಷ್ಟು ಭಾಗ ಭೂಮಿಯನ್ನು ತಲುಪಲು ಸಾಧ್ಯವಾದರೆ, ಅವು ಮಾತ್ರ ಕಣ್ಣಿಗೆ ಕಾಣುತ್ತವೆ. ಭೂವಿಜ್ಞಾನಿಗಳ ಪ್ರಕಾರ ವರ್ಷಕ್ಕೆ ಐದರಿಂದ ಹತ್ತು ಬಾರಿ ಅಂಥ ಉಲ್ಕಾಪಾತಗಳು ಆಗುತ್ತವೆ.

ಉಲ್ಕಾಪಾತಗಳು ಆದಾಗ ಶಬ್ದವೇ ಆಗುವುದಿಲ್ಲವೇ?

ಗುಡುಗಿನ ಸದ್ದು ಮೂಡುವುದಲ್ಲದೆ ಮೋಡದಂಥ ದೊಡ್ಡ ಹೊಗೆಯೂ ಉಂಟಾಗುತ್ತದೆ.

ಹಲವು ಲಕ್ಷ ವರ್ಷಗಳಿಗೊಮ್ಮೆ ದೊಡ್ಡ ಉಲ್ಕಾಪಾತ ಆಗುತ್ತದೆ. ಆಗ ಭೂಮಿಯ ಮೇಲೆ ಬೀಳುವ ಉಲ್ಕಾಶಿಲೆಯಿಂದ ಭೂಮಿಯ ಮೇಲ್ಮೈನಲ್ಲಿ ದೊಡ್ಡ ಹಳ್ಳವಾಗುತ್ತದೆ. ಅದನ್ನು ಕೆಲವರು ‘ಗಾಯ’ ಎಂದೇ ಕರೆಯುತ್ತಾರೆ. ‘ಡೆವಿಲ್ಸ್‌ ಕ್ಯಾನನ್‌’ ಎಂಬುದು ಅಂಥ ಒಂದು ಗಾಯ. ಮಹಾರಾಷ್ಟ್ರದ ಲೋನಾರ್‌ ಸರೋವರ ಉಂಟಾದದ್ದೂ ಉಲ್ಕಾಪಾತದಿಂದಲೇ ಎಂಬ ಅಭಿಪ್ರಾಯವಿದೆ.

ಅತಿ ದೊಡ್ಡ ಉಲ್ಕಾಶಿಲೆ ಎಲ್ಲಿ ಪತ್ತೆಯಾಯಿತು?

ದಕ್ಷಿಣ ಆಫ್ರಿಕಾದ ಗ್ರೂಟ್‌ಫಂಟೀನ್‌ನಲ್ಲಿ 1920ರಲ್ಲಿ ಪತ್ತೆಯಾಯಿತು. ಅದರ ತೂಕ 60 ಟನ್‌ಗಿಂತ ಹೆಚ್ಚು.

ಭಾರತದ ಅತಿ ಹಳೆಯ, ಈಗಲೂ ಸಂರಕ್ಷಿಸಲಾದ ಉಲ್ಕಾಶಿಲೆ ಯಾವುದು?

19 ಡಿಸೆಂಬರ್‌ 1798ರಲ್ಲಿ ವಾರಣಾಸಿಯಲ್ಲಿ ಬಿದ್ದ ಉಲ್ಕಾಶಿಲೆ. ಅದರ 2 ಕೆ.ಜಿ.ಗಿಂತಲೂ ಹೆಚ್ಚು ಭಾಗವನ್ನು ವಶಪಡಿಸಿಕೊಂಡು, ಸಂರಕ್ಷಿಸಿ ಇಡಲಾಗಿದೆ.

ಪ್ರತಿಕ್ರಿಯಿಸಿ (+)