ಮಿನುಗು ಮಿಂಚು

7
ಮಿನುಗು ಮಿಂಚು

ಮಿನುಗು ಮಿಂಚು

Published:
Updated:
ಮಿನುಗು ಮಿಂಚು

ರೋಸೆಟ್ಟಾ ಕಲ್ಲು ಎಂದರೇನು?

ಮೂರು ಬಗೆಯ ಲಿಪಿಗಳ ಬರಹಗಳನ್ನೊಳಗೊಂಡ ಕಪ್ಪು ಕಲ್ಲು ರೋಸೆಟ್ಟಾ.

ಅದರಲ್ಲಿ ಕೆತ್ತಲಾದ ಮೂರು ಲಿಪಿಗಳು ಯಾವುವು?

ಗ್ರೀಕ್, ಪ್ರಾಚೀನ ಈಜಿಪ್ಟ್‌ನ ಆಡುಭಾಷೆಯಾಗಿದ್ದ `ಡೆಮಾಟಿಕ್' ಹಾಗೂ ಹೇರೋಗ್ಲಿಫಿಕ್ಸ್ ಲಿಪಿಗಳು ಅದರಲ್ಲಿವೆ.

ಅದು ಸಿಕ್ಕಿದ್ದೆಲ್ಲಿ?

ಫ್ರೆಂಚ್ ಆರ್ಮಿ ಎಂಜಿನಿಯರ್ ಅದನ್ನು ಪತ್ತೆಹಚ್ಚಿ, 1799ರಲ್ಲಿ ಈಜಿಪ್ಟ್‌ನ ರೋಸೆಟ್ಟಾದಲ್ಲಿ ಇರಿಸಿದರು.

ರೋಸೆಟ್ಟಾ ಕಲ್ಲು ಯಾಕೆ ಮುಖ್ಯ?

ದಶಕಗಳಿಂದ ಪ್ರಾಚ್ಯವಸ್ತು ಶಾಸ್ತ್ರಜ್ಞರು ಈಜಿಪ್ಟ್‌ನ ಹೇರೋಗ್ಲಿಫಿಕ್ಸ್‌ಗಳನ್ನು ಅಧ್ಯಯನ ಮಾಡುತ್ತಿದ್ದಾರೆ. ಅದರಲ್ಲಿ ಇರುವ ಕೆಲವು ಚಿತ್ರಗಳು ಶಬ್ದ ಅಥವಾ ಧ್ವನಿಯನ್ನು ಸಂಕೇತಿಸುತ್ತವೆ. ಅವು ನಿಜಕ್ಕೂ ಏನನ್ನು ತಿಳಿಸುತ್ತಿವೆ ಎಂಬುದು 1799ರವರೆಗೆ ಸ್ವಲ್ಪವೂ ಗೊತ್ತಿರಲಿಲ್ಲ. ರೋಸೆಟ್ಟಾ ಕಲ್ಲು ಸಿಕ್ಕ ಮೇಲೆ ಮೂರು ಲಿಪಿಗಳಲ್ಲಿ ಒಂದೇ ವಿಷಯವನ್ನು ಬರೆದಿರುವುದು ಸ್ಪಷ್ಟವಾಯಿತು. ಪ್ರಾಚ್ಯವಸ್ತು ಶಾಸ್ತ್ರಜ್ಞರಿಗೆ ಗ್ರೀಕ್ ಓದಲು ಬರುತ್ತಿದ್ದುದರಿಂದ ಹೇರೋಗ್ಲಿಫಿಕ್ಸ್‌ಗಳನ್ನು ಓದುವುದು ಹೇಗೆ ಎಂಬ ಸುಳಿವು ಸಿಕ್ಕಿತು.

ಈಗ ರೋಸೆಟ್ಟಾ ಕಲ್ಲು ಎಲ್ಲಿದೆ?

ಲಂಡನ್‌ನ ಬ್ರಿಟಿಷ್ ಮ್ಯೂಸಿಯಂನಲ್ಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry