ಮಿನುಗು ಮಿಂಚು

7

ಮಿನುಗು ಮಿಂಚು

Published:
Updated:

ರಿತುಪರ್ಣೊ: ಒಂದು ಟಿಪ್ಪಣಿ

ರಿತುಪರ್ಣೊ ಘೋಷ್ ಹುಟ್ಟಿದ್ದು ಎಲ್ಲಿ, ಎಂದು?


ಆಗಸ್ಟ್ 31, 1963ರಲ್ಲಿ ಕೋಲ್ಕತ್ತದಲ್ಲಿ ಹುಟ್ಟಿದರು. ಅವರ ತಂದೆ ಸುನಿಲ್ ಘೋಷ್ ಪೇಂಟರ್ ಆಗಿದ್ದರು. ಸಾಕ್ಷ್ಯಚಿತ್ರಗಳನ್ನೂ ತಯಾರಿಸುತ್ತಿದ್ದರು.

ಅವರು ಚಿತ್ರರಂದಲ್ಲಿ ತೊಡಗಿಸಿಕೊಂಡದ್ದು ಹೇಗೆ?

ಜಾಹೀರಾತು ಸಂಸ್ಥೆಯೊಂದಕ್ಕೆ ಕಾಪಿ ರೈಟರ್ ಆಗಿ 1980ರ ದಶಕದಲ್ಲಿ ಸೇರಿಕೊಂಡರು. ಬಂಗಾಳಿ ಭಾಷೆಯಲ್ಲಿ ಆಕರ್ಷಕವಾದ ಸಾಲುಗಳನ್ನು ಬರೆಯುವುದರಲ್ಲಿ ಅವರು ಪಳಗಿದರು. 1992ರಲ್ಲಿ ‘ಹೀರೇರ್ ಅಂಗ್ಟಿ’ (ವಜ್ರದ ಉಂಗುರ) ಎಂಬ ಮಕ್ಕಳ ಚಿತ್ರದ ಮೂಲಕ ನಿರ್ದೇಶನಕ್ಕೆ ಕಾಲಿಟ್ಟರು. ಅವರ ಎರಡನೇ ಚಿತ್ರ ‘ಉನಿಷೆ ಏಪ್ರಿಲ್’. 1995ರಲ್ಲಿ ಆ ಚಿತ್ರಕ್ಕೆ ಶ್ರೇಷ್ಠ ಚಿತ್ರ ವಿಭಾಗದ ರಾಷ್ಟ್ರಪ್ರಶಸ್ತಿಯೂ ಸಂದಿತು.

ಅವರು ತಮಗೆ ಯಾರು ಸ್ಫೂರ್ತಿ ಎಂದು ಹೇಳುತ್ತಿದ್ದರು?

ಸತ್ಯಜಿತ್ ರೇ ಚಿತ್ರಗಳಿಂದ ಅವರು ಪ್ರಭಾವಿತರಾಗಿದ್ದರು. ರೇ ನಂತರ ಬಂಗಾಳಿ ಚಿತ್ರರಂಗಕ್ಕೆ ಉನ್ನತ ಸ್ಥಾನಮಾನ ದಕ್ಕಿಸಿಕೊಟ್ಟ ಶ್ರೇಯ ರಿತುಪರ್ಣೊ ಅವರಿಗೆ ಸಲ್ಲಬೇಕು.

ಅವರ ಖ್ಯಾತ ಚಿತ್ರಗಳು ಯಾವುವು?

ರಬೀಂದ್ರನಾಥ ಟ್ಯಾಗೋರ್ ಸೇರಿದಂತೆ ಪ್ರಮುಖ ಬಂಗಾಳಿ ಲೇಖಕರು ಸಂಬಂಧಗಳ ಸ್ವರೂಪಗಳನ್ನು ಸಾಹಿತ್ಯಿಕವಾಗಿ ಬಿಂಬಿಸಿರುವ ರೀತಿಯನ್ನು ರಿತುಪರ್ಣೊ ತಮ್ಮ ಚಿತ್ರಗಳಿಗೆ ಸಮರ್ಥವಾಗಿ ಒಗ್ಗಿಸಿದರು. ‘ದಹನ್’, ‘ಉಸ್ತಾಬ್’, ‘ಶೊಭೋ ಮುಹೂರ್ತ್’, ‘ಚೋಕರ್ ಬಾಲಿ’, ‘ದೋಸರ್’ ರಿತುಪರ್ಣೊ ಅವರ ರಾಷ್ಟ್ರ ಪ್ರಶಸ್ತಿ ಪಡೆದ ಚಿತ್ರಗಳು. ಹಿಂದಿಯಲ್ಲಿ ಐಶ್ವರ್ಯಾ ರೈ, ಅಜಯ್ ದೇವಗನ್ ಅಭಿನಯದ ‘ರೇನ್‌ಕೋಟ್’ ಚಿತ್ರವನ್ನು ಅವರು ನಿರ್ದೇಶಿಸಿದರು. ಅಮಿತಾಭ್ ಬಚ್ಚನ್ ಅಭಿನಯಿಸಿದ್ದ ಏಕೈಕ ಇಂಗ್ಲಿಷ್ ಚಿತ್ರ ‘ದಿ ಲಾಸ್ಟ್ ಲಿಯರ್’ ನಿರ್ದೇಶಕರೂ ಅವರೇ. ಆ ಚಿತ್ರಕ್ಕೂ ರಾಷ್ಟ್ರಪ್ರಶಸ್ತಿಯ ಗೌರವ ಸಂದಿತು. 17 ವರ್ಷಗಳ ಸಿನಿಮಾ ವೃತ್ತಿಬದುಕಿನಲ್ಲಿ ಒಟ್ಟು 12 ರಾಷ್ಟ್ರಪ್ರಶಸ್ತಿಗಳು ಅವರಿಗೆ ಸಂದವು.

ಚಿತ್ರ ನಿರ್ದೇಶನ ಅಲ್ಲದೆ ಅವರು ಮತ್ತೆ ಇನ್ಯಾವುದರಲ್ಲಿ ತೊಡಗಿಸಿಕೊಂಡರು?

ಕೆಲವು ಚಿತ್ರಗಳಲ್ಲಿ ಅಭಿನಯಿಸಿದ ಅವರು ಟೀವಿ ಶೋಗಳನ್ನು ಕೂಡ ನಿರ್ವಹಿಸಿದರು. ಇದೇ ವರ್ಷ ಮೇ 30ರಂದು ಅವರು ನಿಧನರಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry