ಗುರುವಾರ , ನವೆಂಬರ್ 21, 2019
22 °C

ಮಿನುಗೆಲೆ ಮಿನುಗೆಲೆ ನಕ್ಷತ್ರ

Published:
Updated:

ಅನೇಕಾ ಸಾಂಸ್ಕೃತಿಕ ಸಂಘಟನೆಯು ಅಂಟಾರಿಸ್ ಟೆಕ್ನಾಲಜಿಸ್ ಸಂಸ್ಥೆಯ ಸಹಯೋಗದೊಂದಿಗೆ ಕಿರಿಯರಿಗಾಗಿ ಏಪ್ರಿಲ್ 20ರಿಂದ ಮೇ 9ರವರೆಗೆ `ಮಿನುಗೆಲೆ ಮಿನುಗೆಲೆ ನಕ್ಷತ್ರ' ಮಕ್ಕಳ ಬೇಸಿಗೆ ಶಿಬಿರ ಆಯೋಜಿಸಿದೆ.ಮಕ್ಕಳ ಮನೋವಿಕಾಸ ಹಾಗೂ ಸುಪ್ತ ಪ್ರತಿಭೆಯ ಅನಾವರಣಕ್ಕೆ ವೇದಿಕೆ ಒದಗಿಸುವ ಉದ್ದೇಶವನ್ನು ಈ ಶಿಬಿರ ಹೊಂದಿದೆ. ನಾಟಕ ಹಾಗೂ ಕಿರು ಚಲನಚಿತ್ರ ನಿರ್ಮಾಣ ಕಲಿಕೆಯನ್ನು ಒಳಗೊಂಡ ಈ ಶಿಬಿರದಲ್ಲಿ ಸಮೂಹ ನೃತ್ಯ, ಸಮೂಹ ಗಾಯನ, ಚಿತ್ರಕಲೆ, ಮೂಕಾಭಿನಯ, ಮುಖವಾಡ ತಯಾರಿ, ಗೊಂಬೆ ತಯಾರಿ, ಭಾಷಣ ಕಲೆ, ಕಥೆ- ಕವಿತೆಗಳ ರಚನೆ, ಇತ್ಯಾದಿ ವಿಷಯಗಳ ಕುರಿತು ತರಬೇತಿ ನೀಡಲಾಗುವುದು ಎಂದು ಸಂಘಟನೆ ಪ್ರಕಟಣೆಯಲ್ಲಿ ತಿಳಿಸಿದೆ.ರಂಗಕರ್ಮಿ ಸುರೇಶ ಆನಗಳ್ಳಿ ಅವರ ಮಾರ್ಗದರ್ಶನದಲ್ಲಿ ನಡೆಯುವ ಈ ಶಿಬಿರದಲ್ಲಿ ನಾಡಿನ ಖ್ಯಾತ ತಜ್ಞರು ತರಬೇತಿ ನೀಡಲಿದ್ದಾರೆ. ಜೆ.ಸಿ.ರಸ್ತೆ, ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿರುವ ತಾಲೀಮು ಕೊಠಡಿಯಲ್ಲಿ ಶಿಬಿರ ನಡೆಯಲಿದೆ. ಸಮಯ ಪ್ರತಿದಿನ ಬೆಳಿಗ್ಗೆ 11ರಿಂದ ಸಂಜೆ 5. ವಯೋಮಿತಿ: 9ರಿಂದ 15 ವರ್ಷ. ನಗರದ ಕೆ.ಎಚ್ ಕಲಾಸೌಧದಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಶಿಬಿರದಲ್ಲಿ ತಯಾರಾದ ನಾಟಕ ಹಾಗೂ ಮಕ್ಕಳೇ ನಿರ್ಮಿಸಿದ ಕಿರುಚಿತ್ರಗಳ ಸಾರ್ವಜನಿಕ ಪ್ರದರ್ಶನವಿರುತ್ತದೆ.ಮಾಹಿತಿಗೆ: 94480 50950, 94480 94492.

 

 

ಪ್ರತಿಕ್ರಿಯಿಸಿ (+)