ಬುಧವಾರ, ನವೆಂಬರ್ 13, 2019
28 °C

ಮಿಯಾಮಿ ಎಟಿಪಿ ಟೆನಿಸ್: ಮರ್ರೆಗೆ ಪ್ರಶಸ್ತಿ

Published:
Updated:

ಮಿಯಾಮಿ: ಬ್ರಿಟನ್‌ನ ಆ್ಯಂಡಿ ಮರ‌್ರೆ ಮಿಯಾಮಿ ಎಟಿಪಿ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಆದರು.ಭಾನುವಾರ ರಾತ್ರಿ ನಡೆದ ಫೈನಲ್‌ನಲ್ಲಿ ಅವರು 2-6, 6-4, 7-6 ಸೆಟ್‌ಗಳಿಂದ ಸ್ಪೇನ್‌ನ ಡೇವಿಡ್ ಫೆರರ್ ವಿರುದ್ಧ ಜಯ ಸಾಧಿಸಿದರು. ಇದು ಆಂಡಿ ಮರ‌್ರೆ ವೃತ್ತಿ ಜೀವನದ 26ನೇ ಎಟಿಪಿ ಪ್ರಶಸ್ತಿಯಾಗಿದೆ.ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಮರ್ರೆ, `ಫೆರರ್ ವಿರುದ್ಧ ಜಯಿಸಲು ಹೆಚ್ಚಿನ ಶ್ರಮ ಪಡಬೇಕಾಯಿತು. ಅವರು ಉತ್ತಮ ಹೋರಾಟಗಾರ. ಮುಂದಿನ ದಿನಗಳಲ್ಲಿ ಅವರ ಜೊತೆ ಮತ್ತಷ್ಟು ಹೋರಾಟಕ್ಕೆ ಎದುರು ನೋಡುತ್ತೇನೆ' ಎಂದರು. ಈ ಗೆಲುವಿನೊಂದಿಗೆ ಆ್ಯಂಡಿ ಮರ್ರೆ ರ‌್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನ ಪಡೆದರು.

ಪ್ರತಿಕ್ರಿಯಿಸಿ (+)