ಮಿರಜ್- ಯಶವಂತಪುರ ರೈಲಿಗೆ ಸ್ವಾಗತ

7

ಮಿರಜ್- ಯಶವಂತಪುರ ರೈಲಿಗೆ ಸ್ವಾಗತ

Published:
Updated:

ಕುಡಚಿ (ರಾಯಬಾಗ): ವಾರದಲ್ಲಿ ಮೂರು ದಿನ ಸಂಚರಿಸುವ ಮಿರಜ್- ಯಶವಂತಪುರ ರೈಲು ಕುಡಚಿ ನಿಲ್ದಾಣದಲ್ಲಿ ನಿಲುಗಡೆಯಾಗಲಿದೆ. ಅದೇ ರೀತಿ ಸದರಿ ರೈಲನ್ನು ರಾಯಬಾಗ ಹಾಗೂ ಉಗಾರದಲ್ಲಿ ಸಹ ನಿಲುಗಡೆ ಮಾಡಲು ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಮಾಡುವುದಾಗಿ ಶಾಸಕ ಎಸ್. ಬಿ. ಘಾಟಗೆ ಹೇಳಿದರು.

ಸೋಮವಾರ ಕುಡಚಿ ರೈಲ್ವೆ ನಿಲ್ದಾಣದಲ್ಲಿ ನೂತನ ಮೀರಜ್- ಯಶವಂತಪುರ - ಮಿರಜ್ ರೈಲಿಗೆ ಪೂಜೆ ನೆರವೇರಿಸಿ ಬರಮಾಡಿಕೊಂಡು, ಬೀಳ್ಕೊಟ್ಟು ಅವರು ಮಾತನಾಡಿದರು.ಬೆಂಗಳೂರಿನಿಂದ ಬರುವಾಗ ರಾತ್ರಿ ಸಾಧ್ಯವಾದಷ್ಟು ಬೇಗ ಯಶವಂತಪುರ ಬಿಡುವಂತೆ ಸಹ ಮನವಿ ಮಾಡಲಾಗುವುದು ಎಂದು ಶಾಸಕರಾದ ಪ್ರಕಾಶ ಹುಕ್ಕೇರಿ, ದುರ್ಯೋಧನ ಐಹೊಳೆ, ರಾಜು ಕಾಗೆ ಹೇಳಿದರು.ವಿಧಾನಪರಿಷತ್ ಸದಸ್ಯ ವೀರಕುಮಾರ ಪಾಟೀಲ, ಸಾಹೇಬಲಾಲ ರೋಹಿಲೆ, ಮಹೇಶ ಕೊರವಿ, ರಾಜು ಶಿರಗಾವಿ, ಸುಭಾಷ ಪೂಜಾರಿ, ಪರಮೇಶ್ವರ ಮುಳ್ಳೂರ, ಮುರಾರಿ ಬಾನೆ. ಈರಗೌಡ ಪಾಟೀಲ ಅರ್ಜುನ ಬಂಡಗಾರ, ದಿಲೀಪ ಜಮಾದಾರ, ಶ್ರೀನಿವಾಸ ಭಟ್, ಎ. ಎ. ಬಾಗೆ, ಸುಕುಮಾರ ಪಾಟೀಲ, ಎಸ್. ಎಸ್. ಬಾಗೇವಾಡಿ, ಸಾದಿಕ ಸಜ್ಜನ ಮತ್ತಿತರರು ಈ ಸಂದರ್ಭಲ್ಲಿ ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry