ಮಿರುಗು ಔಷಧಕ್ಕೆ ಶತಮಾನದ ಇತಿಹಾಸ

ಬುಧವಾರ, ಜೂಲೈ 24, 2019
27 °C

ಮಿರುಗು ಔಷಧಕ್ಕೆ ಶತಮಾನದ ಇತಿಹಾಸ

Published:
Updated:

ಹುಮನಾಬಾದ್: ಇಲ್ಲಿನ ಜೇರಪೇಟ್‌ನಲ್ಲಿ `ಮಿರುಗು~ ಮಳೆ ಪ್ರವೇಶದ ಬಳಿಕ ಕೆಮ್ಮುದಮ್ಮಿನಿಂದ ಬಳಲುವ ರೋಗಿಗಳಿಗೆ  ಮೀನಿನಲ್ಲಿ ಮಿಶ್ರಣ ಮಾಡಿ ನೀಡುವ `ಮಿರುಗು~ ಔಷಧಕ್ಕೆ ಶತಮಾನದ ಇತಿಹಾಸವಿದೆ.ಹುಮನಾಬಾದ್ ಜೇರೆಪೇಟೆ ಓಣಿಯ ಮೌನೇಶ್ವರ ಶಾಲೆ ಪಕ್ಕದ ಓಣಿಯಲ್ಲಿ ಜೋಗದನಕರ್ ಪರಿವಾರ ಈ ಸೇವೆಯನ್ನು ಒಂದು ಶತಮಾನದಿಂದ ಮುಂದುವರಿಸಿಕೊಂಡು ಬರುತ್ತಿದೆ. ಹಿಂದೆ ನಮ್ಮ ಮುತ್ತಜ್ಜ ಈ ಸೇವೆ ಮಾಡುತ್ತ್ದ್ದಿದರಂತೆ. ಅವರ ಬಳಿಕ ನಮ್ಮ ಅಜ್ಜ ಪೀರಾಜಿ ಜೋಗದನಕರ್ ಈ ಸೇವೆಯಲ್ಲಿ ಹಲವು ದಶಕ ಕಾಲ ಮುಂದುವರಿಸಿಕೊಂಡು ಬಂದರು.ಅವರ ಬಳಿಕ ನಮ್ಮ ಚಿಕ್ಕಪ್ಪ ತುಕಾರಾಮ ಕೆಲವರ್ಷ  ಸೇವೆ ಸಲ್ಲಿಸಿದರು. ಅವರು ಮೃತಪಟ್ಟ ನಂತರ ಕಳೆದ 20ವರ್ಷದಿಂದ ಈ ಸೇವೆ ಚಾಚೂ ತಪ್ಪದೇ ಮುಂದುವರಿಸಿಕೊಂಡು ಬರುತ್ತಿರುವದಾಗಿ ಕಾಳಪ್ಪ ಅವರ  ಪುತ್ರ ಝರಣಪ್ಪ ಜೋಗದನಕರ್ ಮುಂದುವರೆಸಿಕೊಂಡು ಬರುತ್ತ್ದ್ದಿದಾರೆ.ತಂದೆಯವರ ಮಾರ್ಗದರ್ಶನದಲ್ಲಿ ಆಯುರ್ವೇದ ಔಷಧ ತಂದು `ಮಿರುಗು~ ಪ್ರವೇಶವಾದ ತಕ್ಷಣ ಔಷಧ ಸಿದ್ಧಪಡಿಸಿ ಇಡುತ್ತೇವೆ.  ಆಂಧ್ರ ಪ್ರದೇಶದ, ಮಹಾರಾಷ್ಟ್ರ, ಗುಜರಾತ ಸೇರಿದಂತೆ ದೇಶದ ಮೂಲೆಮೂಲೆಯಿಂದ ಸಾವಿರರು ಸಂಖ್ಯೆ ಜನ ಔಷಧಕ್ಕಾಗಿ ಸಾಲುಗಟ್ಟಿ ಕಾದು ಕುಳಿತಿರುತ್ತಾರೆ, ಔಷಧ ತುಂಬಿ ಕೊಡುವುದಕ್ಕೆ ಅವಶ್ಯಕವಾದ ಮೀನನ್ನು ಈ ಓಣಿಯ ಬುಡಕಟ್ಟು ಜನ ಬುಟ್ಟಿಯಲ್ಲಿ ಇಟ್ಟುಕೊಂಡು ಕುಳಿತಿರುತ್ತಾರೆ.ಈ ರೀತಿಯಲ್ಲಿ ಸಾಲಾಗಿ ಕುಳಿತುಕೊಳ್ಳುವ ವ್ಯಾಪಾರಿಗಳು ಗುಣಮಟ್ಟದ ಒಂದು ಮೀನು ರೂ. 5ರಿಂದ 10ಕ್ಕೆ ಮಾರಾಟ ಮಾಡುತ್ತಾರೆ. ಇಲ್ಲ ಎಂದರೂ ಕನಿಷ್ಟ ರೂ. 3 ತೆತ್ತಬೇಕು. ಇಲ್ಲಿ ಖರೀದಿ ಮಾಡಲಾದ ಮೀನನ್ನು ಪಕ್ಕದ ಜೋಗದನಕರ್ ಮನೆಗೆ ತೆಗೆದುಕೊಂಡು ಹೋಗಿ ಸಾಲಲ್ಲಿ ನಿಂತುಕೊಳ್ಳಬೇಕು.

 

ಪ್ರತೀತಿಯಂತೆ ಸದ್ಯ ಔಷಧ ನೀಡುತ್ತಿರುವ ಝರಣಪ್ಪ ತಮ್ಮ ತಂದೆ ಲಿಂ.ಕಾಳಪ್ಪ ಜೋಗದನಕರ್ ಅವರ ಭಾವಚಿತ್ರಕ್ಕೆ ಕೋಣೆಯಲ್ಲಿ ಇಟ್ಟು ವಿಶೇಷ ಪೂಜೆಯೊಂದಿಗೆ ಅಲಂಕೃತಗೊಂಡ ಭಾವಚಿತ್ರದ ಎದುರು ಕುಳಿತು ರೋಗಿಗಳಿಗೆ ಮೀನಿನಲ್ಲಿ ಔಷಧ ತುಂಬಿ ನುಂಗಲು ಹೇಳುತ್ತಾರೆ.ಈ ಔಷಧ ತೆಗೆದುಕೊಂಡ ರೋಗಿಗಳು 40 ದಿನಕಾಲ ಎಣ್ಣೆ, ಈರುಳ್ಳಿ, ಹಾಲು, ಮೊಸರು, ತರಕಾರಿ, ಮಾಂಸ, ಮೊಟ್ಟೆ ತಿನ್ನುವುದನ್ನು ಬಿಡಬೇಕು. ಜೋಳದ ರೊಟ್ಟಿ, ಗೋಧಿ ರೊಟ್ಟಿ, ಅನ್ನ, ತುಪ್ಪಾ,ಖಾರಾ, ಉಪ್ಪು, ಬಳ್ಳೊಳ್ಳಿ, ತೊಗರಿ ಬೇಳೆಯಿಂದ ಸಿದ್ಧಪಡಿಸಿದ ಆಹಾರ  ಸೇವಿಸಬೇಕು.ಪುಂಡಿಪಲ್ಯ, ಬದನೆಕಾಯಿ, ಸಾರಾಯಿ ಜೀವನವಿಡೀ ಸೇವಿಸುವಂತಿಲ್ಲ. ಗರ್ಭೀಣಿಯರು ಈ ಗುಳಿಗೆಯನ್ನು ಯಾವುದೇ ಕಾರಣಕ್ಕೂ ಸೇವಿಸಕೂಡದು ಎಂದು ಝರಣಪ್ಪ ಜೋಗದನಕರ್ ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry