ಮಿಲಿಟರಿ ಕಾಲೇಜು ಪ್ರವೇಶಕ್ಕೆ ಅರ್ಜಿ ಆಹ್ವಾನ

7

ಮಿಲಿಟರಿ ಕಾಲೇಜು ಪ್ರವೇಶಕ್ಕೆ ಅರ್ಜಿ ಆಹ್ವಾನ

Published:
Updated:

ಚಿತ್ರದುರ್ಗ: ಡೆಹರಾಡೂನ್‌ನಲ್ಲಿರುವ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜಿನಲ್ಲಿ 2012ನೇ ಸಾಲಿಗೆ 8ನೇ ತರಗತಿ ಪ್ರವೇಶ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.ಪ್ರವೇಶ ಪಡೆಯುವ ಬಾಲಕರಿಗೆ ಬರುವ ಜೂನ್‌ನಲ್ಲಿ 1ಮತ್ತು 2ರಂದು ಬೆಂಗಳೂರಿನಲ್ಲಿ ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ. ಪ್ರಸಕ್ತ ವರ್ಷ 7ನೇ ತರಗತಿ ವ್ಯಾಸಂಗ ಮಾಡುತ್ತಿರುವ ಮತ್ತು ಉತ್ತೀರ್ಣರಾಗಿ 1999ರ ಜನವರಿ 2ರಿಂದ 2000ರ ಜುಲೈ 1ರ ಒಳಗೆ ಜನಿಸಿರುವ ಬಾಲಕರು ಅರ್ಹರಿರುತ್ತಾರೆ.ಸೈನಿಕ್ ವೆಲ್‌ಫೇರ್ ಫಂಡ್ ಅಕೌಂಟ್, ಡಿಫಾರ್ಟ್‌ಮೆಂಟ್ ಆಫ್ ಸೈನಿಕ್ ವೆಲ್‌ಫೇರ್ ಅಂಡ್ ರೀಸೆಟೆಲ್‌ಮೆಂಟ್‌ರವರ ಹೆಸರಿಗೆ ` 250 ಡಿ.ಡಿ. ತೆಗೆದು ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ರಸ್ತೆ, ಬೆಂಗಳೂರು. ಇಲ್ಲಿಗೆ ಕಳುಹಿಸಿ ಅರ್ಜಿ ಪಡೆದು ಮಾರ್ಚ್ 31ರ ಒಳಗೆ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗೆ ದೂರವಾಣಿ 080 25589459ಗೆ ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry