`ಮಿಲ್ಕ್‌ರೂಟ್' ಮಾರುಕಟ್ಟೆಗೆ

7

`ಮಿಲ್ಕ್‌ರೂಟ್' ಮಾರುಕಟ್ಟೆಗೆ

Published:
Updated:
`ಮಿಲ್ಕ್‌ರೂಟ್' ಮಾರುಕಟ್ಟೆಗೆ

ಬೆಂಗಳೂರು:  ಮೋಕ್ಷ ಯುಗ್ ಆಕ್ಸೆಸ್ (ಎಂವೈಎ) ಡೈರಿ ಗುರುವಾರ ಇಲ್ಲಿ ರಾಜ್ಯ ಮಾರುಕಟ್ಟೆಗೆ `ಮಿಲ್ಕ್‌ರೂಟ್' ಬ್ರಾಂಡ್‌ನ ಹಾಲು ಬಿಡುಗಡೆ ಮಾಡಿದೆ.`ಮಿಲ್ಕ್‌ರೂಟ್' ಮೂಲಕ ಗ್ರಾಮೀಣ ರೈತರ ಆರ್ಥಿಕ ಪರಿಸ್ಥಿತಿ ಉತ್ತಮಗೊಳಿಸುವುದು `ಎಂವೈಎ'ನ ಪ್ರಮುಖ ಧ್ಯೇಯ ಎಂದು ಗುರುವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಂಪೆನಿಯ ಸ್ಥಾಪಕ ಅಧ್ಯಕ್ಷ ಮತ್ತು ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ವೀರಪ್ಪ ಮೊಯಿಲಿ ಅವರ ಮಗ ಹರ್ಷ ಮೊಯಿಲಿ ಹೇಳಿದರು.`ಹಾಲು ಕರೆದ ಒಂದು ಗಂಟೆಯೊಳಗೆ ರೈತರಿಂದ ಸಂಗ್ರಹಿಸಿ, ಗ್ರಾಹಕರಿಗೆ ತಾಜಾ ಮತ್ತು ಆರೋಗ್ಯಕರ ಹಾಲು ಪೂರೈಸಲಾಗುವುದು. ಆರಂಭದಲ್ಲಿ `ಮಿಲ್ಕ್‌ರೂಟ್' ಬೆಂಗಳೂರಿನಲ್ಲಿ ಮಾತ್ರ ಲಭ್ಯ. ಮುಂದಿನ ಮೂರು ವರ್ಷಗಳಲ್ಲಿ ದಕ್ಷಿಣ ಮತ್ತು ಪಶ್ಚಿಮ ಭಾರತಕ್ಕೂ ವಹಿವಾಟು ವಿಸ್ತರಿಸುವ ಯೋಜನೆ ಹೊಂದಿದ್ದು, ್ಙ500 ಕೋಟಿಗೂ ಹೆಚ್ಚು ವರಮಾನ ನಿರೀಕ್ಷಿಸಲಾಗಿದೆ ಎಂದರು.ಗ್ರಾಮೀಣ ವಿತರಣಾ ಸರಪಳಿಯ ಮೂಲಕ ಹಾಲು, ಹಣ್ಣು, ತರಕಾರಿಗಳನ್ನು ಸಂಗ್ರಹಿಸಿ ಮಾರಾಟ ಮಾಡುವ ಯೋಜನೆಯೂ ಇದೆ. ಜಾನುವಾರು ನಿರ್ವಹಣೆ, ತಳಿ ಅಭಿವೃದ್ಧಿ ಮತ್ತು ಹಾಲು ಉತ್ಪಾದನಾ ಗುಣಮಟ್ಟ  ಹೆಚ್ಚಿಸುವಲ್ಲಿ ರೈತರಿಗೆ ನೆರವು ನೀಡಲಿದ್ದೇವೆ ಎಂದು ಹರ್ಷ ಮೊಯಿಲಿ ಹೇಳಿದರು. ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್, ಮತ್ತು ಚಿತ್ರ ನಟಿ ರಮ್ಯಾ `ಮಿಲ್ಕ್‌ರೂಟ್'ನ ಪ್ರಚಾರ ರಾಯಭಾರಿಗಳು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry