ಮಿಶೆಲ್ ಒಬಾಮಗೆ ಜೀವ ಬೆದರಿಕೆ

ಮಂಗಳವಾರ, ಜೂಲೈ 23, 2019
25 °C

ಮಿಶೆಲ್ ಒಬಾಮಗೆ ಜೀವ ಬೆದರಿಕೆ

Published:
Updated:

ವಾಷಿಂಗ್ಟನ್ (ಪಿಟಿಐ): ಅಮೆರಿಕದ ಪ್ರಥಮ ಮಹಿಳೆ, ಅಧ್ಯಕ್ಷ ಬರಾಕ್ ಒಬಾಮ ಅವರ ಪತ್ನಿ ಮಿಶೆಲ್ ಒಬಾಮ ಅವರನ್ನು ಹತ್ಯೆ ಮಾಡುವುದಾಗಿ ಪೊಲೀಸ್ ಅಧಿಕಾರಿಯೊಬ್ಬ ಬೆದರಿಕೆ ಹಾಕಿದ್ದಾನೆ.ಶ್ವೇತಭವನದ ಅಧಿಕಾರಿಗಳಿಗೆ ಮತ್ತು ಅಲ್ಲಿಗೆ ಭೇಟಿ ನೀಡುವ ಅತಿಥಿಗಳಿಗಾಗಿ ಇರುವ ಮೋಟಾರ್ ಸೈಕಲ್ ಅಂಗರಕ್ಷಕ ಪಡೆಯಲ್ಲಿ ಈತ ಕಾರ್ಯನಿರ್ವಹಿಸುತ್ತಿದ್ದಾನೆ.  ಈ ಸಂಬಂಧ, ವಾಷಿಂಗ್ಟನ್ ಡಿ.ಸಿ ಪೊಲೀಸರು ಮೆಟ್ರೊ ಪೊಲೀಸ್ ಅಧಿಕಾರಿಯೊಬ್ಬರ ವಿಚಾರಣೆ ನಡೆಸುತ್ತಿದ್ದಾರೆ. `ಮಿಶೆಲ್ ಒಬಾಮ ವಿರುದ್ಧ ಅನುಚಿತವಾದ ಹೇಳಿಕೆಗಳನ್ನು ನೀಡಲಾಗಿದೆ ಎಂಬ ಆರೋಪಗಳು ಬಂದಿವೆ. ಯಾವ ರೀತಿಯ ಹೇಳಿಕೆಗಳನ್ನು ನೀಡಲಾಗಿದೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ~ ಎಂದು ವಾಷಿಂಗ್ಟನ್ ಡಿ ಸಿ ಮೆಟ್ರೊ ಪೊಲೀಸ್ ಇಲಾಖೆ  ತಿಳಿಸಿದೆ.ಪೊಲೀಸ್ ಅಧಿಕಾರಿಯ ಗುರುತನ್ನು ಬಹಿರಂಗ ಪಡಿಸಲು ಪೊಲೀಸ್ ಇಲಾಖೆ  ನಿರಾಕರಿಸಿದೆ. ಈ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಲು ಅಮೆರಿಕ ಅಟಾರ್ನಿ ಕಚೇರಿ ಕೂಡ ನಿರಾಕರಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry