ಭಾನುವಾರ, ಜನವರಿ 26, 2020
28 °C

ಮಿಶ್ರತಳಿ ಶಾರ್ಕ್ ಪ್ರಭೇದ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೆಲ್ಬರ್ನ್ (ಪಿಟಿಐ): ಪ್ರಪಂಚದ ಮೊದಲ ಮಿಶ್ರತಳಿ ಶಾರ್ಕ್ ಮೀನನ್ನು ಪತ್ತೆಹಚ್ಚಿರುವುದಾಗಿ ಸಾಗರ ಜೀವಶಾಸ್ತ್ರ ವಿಜ್ಞಾನಿಗಳು ಹೇಳಿಕೊಂಡಿದ್ದಾರೆ.ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್ ಮತ್ತು ನ್ಯೂ ಸೌತ್ ವೇಲ್ಸ್‌ನ 2,000 ಕಿ.ಮೀ ಉದ್ದದ ಕರಾವಳಿಯಲ್ಲಿ 57 ಮಿಶ್ರ ತಳಿ ಶಾರ್ಕ್‌ಗಳನ್ನು ಗುರುತಿಸಿರುವುದಾಗಿ ಸಂಶೋಧಕರು ಹೇಳಿದ್ದಾರೆ.ಈ ಬೃಹತ್ ಜೀವಿಗಳು ತಮ್ಮ ಉಳಿವಿಗಾಗಿ ಬದಲಾಗುತ್ತಿರುವ ವಾತಾವರಣಕ್ಕೆಒಗ್ಗಿಕೊಳ್ಳುತ್ತಿರುವುದನ್ನು ಇದು ಸೂಚಿಸುತ್ತದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ಶಾರ್ಕ್‌ಗಳು ಕಪ್ಪು ಮೂತಿಯ ಸಾಮಾನ್ಯ ಶಾರ್ಕ್ ಮತ್ತು ಆಸ್ಟ್ರೇಲಿಯಾದಲ್ಲಿ ಕಂಡು ಬರುವ ಕಪ್ಪು ಮೂತಿಯ ಶಾರ್ಕ್‌ಗಳ ಸಮ್ಮಿಲನದಿಂದ ಜನಿಸಿರಬಹುದು ಎಂದು  ಅಂದಾಜಿಸಲಾಗಿದೆ.ಈ ಎರಡೂ ಪ್ರಭೇದಗಳ ನಡುವೆ ಹೋಲಿಕೆ ಇದ್ದರೂ ತಳಿ ಸೂತ್ರಗಳಲ್ಲಿ ಸಾಕಷ್ಟು ಭಿನ್ನತೆ ಇದೆ.ಬದಲಾಗುತ್ತಿರುವ ತಾಪಮಾನಕ್ಕೆ ಹೇಗೆ ಈ ಜೀವಿಗಳು ತಮ್ಮನ್ನು ಮಾರ್ಪಾಡು ಮಾಡಿಕೊಂಡಿವೆ ಎಂಬುದನ್ನು ಈ ಹೈಬ್ರೀಡ್ ಶಾರ್ಕ್‌ಗಳು ತೋರಿಸುತ್ತವೆ. ಈ ಪಕ್ರಿಯೆಯು ಶಾರ್ಕ್ ಮೀನುಗಳನ್ನು ಮತ್ತಷ್ಟು ಸದೃಢವನ್ನಾಗಿ ಮಾಡಲಿವೆ ಎಂದೂ ತಜ್ಞರು ಹೇಳಿದ್ದಾರೆ.`ಮಿಶ್ರ ಶಾರ್ಕ್‌ಗಳನ್ನು ಪತ್ತೆ ಹಚ್ಚುವುದು ಬಲು ಕಷ್ಟದ ಕೆಲಸ. ಅಂತಹುದರಲ್ಲಿ ಈಗ ಅವುಗಳ ಸಂತತಿಯನ್ನೇ ಪತ್ತೆ ಹಚ್ಚಿರುವುದು ನಿಜಕ್ಕೂ ಅದ್ಭುತ ಕಾರ್ಯ. 2000 ಕಿ.ಮೀ ಉದ್ದದ ಕರಾವಳಿಯಲ್ಲಿ ಒಟ್ಟು 57 ಮಿಶ್ರ ತಳಿ ಶಾರ್ಕ್‌ಗಳನ್ನು ಪತ್ತೆ ಹಚ್ಚಿರುವುದು ಅಭೂತಪೂರ್ವ~ ಎಂದು ಕ್ವೀನ್ಸ್‌ಲ್ಯಾಂಡ್‌ನ ಪ್ರಾಥಮಿಕ ಕೈಗಾರಿಕೆ ಮತ್ತು ಮತ್ಸ್ಯೋದ್ಯಮ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜೆನಿಫರ್ ಒವೆನ್‌ಡೆನ್ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)