ಮಿಸ್ಟರ್ 420ಗೆ ಹಾಡು

7

ಮಿಸ್ಟರ್ 420ಗೆ ಹಾಡು

Published:
Updated:
ಮಿಸ್ಟರ್ 420ಗೆ ಹಾಡು

ಸಂದೇಶ್‌ನಾಗರಾಜ್ ನಿರ್ಮಿಸುತ್ತಿರುವ `ಮಿಸ್ಟರ್ 420~ ಚಿತ್ರಕ್ಕಾಗಿ ಯೋಗರಾಜ್‌ಭಟ್ ಬರೆದಿರುವ `ನೀನೆಷ್ಟು ಇಷ್ಟ ಗೊತ್ತಾ..~ ಎಂಬ ಹಾಡಿನ ಚಿತ್ರೀಕರಣ ಸಕಲೇಶಪುರದಲ್ಲಿ ನಡೆಯಿತು. ಗಣೇಶ್ ಹಾಗೂ ಪ್ರಣೀತಾ ಅಭಿನಯಿಸಿದ ಈ ಗೀತೆಗೆ ರಾಮು ನೃತ್ಯ ನಿರ್ದೇಶಿಸಿದ್ದರು.`ಕಿರಾತಕ~ ನಿರ್ದೇಶಿಸಿದ್ದ ಪ್ರದೀಪ್‌ರಾಜ್ ಈ ಚಿತ್ರದ ನಿರ್ದೇಶಕರು. ಇವರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ವಿ.ಹರಿಕೃಷ್ಣ ಸಂಗೀತ, ಆರ್.ಗಿರಿ ಛಾಯಾಗ್ರಹಣ, ಚಂದ್ರು ಸಾಹಸ ನಿರ್ದೇಶನ, ಕುಮಾರ್ ಸಂಕಲನವಿರುವ ಈ ಚಿತ್ರಕ್ಕೆ ಮೋಹನ್ ಪಂಡಿತ್ ಕಲಾ ನಿರ್ದೇಶನವಿದೆ.`ನೆರಳು~ ಹಾಡೊಂದೆ ಬಾಕಿ

ನಿರ್ಮಾಪಕ ಅತುಲ್ ಕುಲಕರ್ಣಿ ನಿರ್ಮಾಣದ `ನೆರಳು~ ವಿನೋದ್ ಕೆ. ನಿರ್ದೇಶನದಲ್ಲಿ ಸಿದ್ಧವಾಗಿದೆ. ಚಿತ್ರದ ಚಿತ್ರೀಕರಣ ಮುಗಿದಿದೆ. ಒಂದು ಹಾಡು ಬಾಕಿ ಇದೆ. ಸಂಕಲನ, ಡಬ್ಬಿಂಗ್ ಕೆಲಸ ಕೂಡ ಪೂರ್ಣಗೊಂಡಿದೆ.

 

ಬಾಕಿ ಇರುವ ಹಾಡನ್ನು ಸಕಲೇಶಪುರ ಹಾಗೂ ಮೈಸೂರಿನಲ್ಲಿ ಚಿತ್ರೀಕರಿಸಲು ತಂಡ ತಯಾರಾಗಿದೆ. ಸಂಜೀವ್, ಆಕಾಶ್, ಶಶಿಕುಮಾರ್, ಅವಿನಾಶ್ ಹಾಗೂ ಸುಧಾ ಬೆಳವಾಡಿ, ಹೊನ್ನವಳ್ಳಿ ಕೃಷ್ಣ, ಶಂಕರ್ ಅಶ್ವತ್ಥ್ ನಟಿಸಿದ್ದಾರೆ. ಶಿವರಾಜ್ ಮೇಹು ಸಂಕಲನ, ಶಂಕರ್ ಛಾಯಾಗ್ರಹಣ, ಶ್ರಿ ಹರ್ಷ ಸಂಗೀತ ಈ ಚಿತ್ರಕ್ಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry