ಮಿಸ್ತ್ರಿ 28ರಿಂದ ಟಾಟಾ ಸಮೂಹ ಅಧ್ಯಕ್ಷ

7

ಮಿಸ್ತ್ರಿ 28ರಿಂದ ಟಾಟಾ ಸಮೂಹ ಅಧ್ಯಕ್ಷ

Published:
Updated:
ಮಿಸ್ತ್ರಿ 28ರಿಂದ ಟಾಟಾ ಸಮೂಹ ಅಧ್ಯಕ್ಷ

ನವದೆಹಲಿ (ಪಿಟಿಐ): ಸೈರಸ್ ಪಿ. ಮಿಸ್ತ್ರಿ ಟಾಟಾ ಸಮೂಹದ ಮುಖ್ಯಸ್ಥರಾಗಿ ಡಿ. 28ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ಅಧ್ಯಕ್ಷ ಹುದ್ದೆಯಿಂದ ರತನ್ ಟಾಟಾ ಡಿ. 28ರಂದು ನಿವೃತ್ತಿಯಾಗಲಿದ್ದು, ವಿಶ್ರಾಂತ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ ಎಂದು ಕಂಪೆನಿ ಪ್ರಕಟಣೆ ತಿಳಿಸಿದೆ.ಸೈರಸ್ ಮಿಸ್ತ್ರಿ 2006ರಿಂದ `ಟಾಟಾ ಸನ್ಸ್' ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದು, ನವೆಂಬರ್‌ನಲ್ಲಿ ಟಾಟಾ ಸಮೂಹದ ಸಹ ಅಧ್ಯಕ್ಷರಾಗಿ ಹೆಚ್ಚಿನ ಅಧಿಕಾರ ಪಡೆದಿದ್ದರು.. ಮಿಸ್ತ್ರಿಗೆ ಟಾಟಾ ಕಿವಿಮಾತು

`ಮತ್ತೊಬ್ಬರ ನೆರಳನ್ನು ಹಿಂಬಾಲಿಸುವುದರ ಬದಲು ನಿಮ್ಮದೇ ಹೆಜ್ಜೆಗುರುತು ಮೂಡಿಸಿ. ನೀವು ಏನು ಮಾಡಬೇಕು ಎನ್ನುವುದನ್ನು ನೀವೇ ನಿರ್ಧರಿಸಿ' ಎಂದು ಟಾಟಾ ಸಮೂಹದ ಅಧ್ಯಕ್ಷ ಸ್ಥಾನದಿಂದ ಕೆಲ ದಿನಗಳಲ್ಲಿ ನಿರ್ಗಮಿಸಲಿರುವ ರತನ್ ಟಾಟಾ ತಮ್ಮ ಉತ್ತರಾಧಿಕಾರಿ ಸೈರಸ್ ಮಿಸ್ತ್ರಿ ಅವರಿಗೆ ಸಲಹೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry