ಮೀನಾಕ್ಷಿ ರಿಯಲ್ ಎಸ್ಟೇಟ್!

7

ಮೀನಾಕ್ಷಿ ರಿಯಲ್ ಎಸ್ಟೇಟ್!

Published:
Updated:

ಒಂದು ಗುಟ್ಟು ರಟ್ಟಾಯಿತು...`ಚಿತ್ರದಲ್ಲಿ ನನ್ನದು ನೆಗೆಟಿವ್ ಶೇಡ್ ಇರುವ ಪಾತ್ರ~ ಎಂದು ನಾಯಕ ರಘು ಮುಖರ್ಜಿ ಹೇಳುತ್ತಿದ್ದಂತೆಯೇ ನಿರ್ದೇಶಕ ಶ್ರೀಧರ್ ಹೆಗ್ಡೆ ಗುಟ್ಟು ರಟ್ಟಾದ ಮಾತನಾಡಿದರು. ಅವರ ಉದ್ಘಾರದಲ್ಲಿ, ಚಿತ್ರತಂಡಕ್ಕೊಂದು ಸೂಚನೆಯೂ ಇತ್ತು. ಆ ಸೂಚನೆಗೆ ಎಚ್ಚೆತ್ತವರಂತೆ ರಘು ಮಾತು ಬದಲಿಸಿದರು.

 

`ಎಲ್ಲಾ ಸಿನಿಮಾದಲ್ಲಿಯೂ ಒಳ್ಳೆಯ ಹುಡುಗನಾಗಿಯೇ ನಟಿಸಲು ಸಾಧ್ಯವಿಲ್ಲ. ಈ ಚಿತ್ರದಲ್ಲಿ ನನ್ನದು ವಿಭಿನ್ನ ಪಾತ್ರ. ಎರಡು ಆಯಾಮಗಳು ಇರುವ ಪಾತ್ರ. ಕಥೆ ಸಾಗುತ್ತಾ ಹೋದಂತೆ ನನ್ನ ಪಾತ್ರವೂ ಬದಲಾಗುತ್ತದೆ~ ಎಂದರು.ನಿರ್ದೇಶಕ ಶ್ರೀಧರ್ ಹೆಗ್ಡೆ ತಮ್ಮ ಚಿತ್ರಕ್ಕಾಗಿ ರಿಯಲ್ ಎಸ್ಟೇಟ್‌ಗೆ ಸಂಬಂಧಿಸಿದ ಕೆಲವು ಘಟನೆಗಳನ್ನು ಬಳಸಿಕೊಂಡು ಕಥೆ ಹೆಣೆದಿದ್ದಾರಂತೆ.  `ರಿಯಲ್ ಎಸ್ಟೇಟ್ ಉದ್ಯಮದೊಳಗೆ ನಡೆಯುವ ಪ್ರೇಮಕಥೆ ನನ್ನ ಚಿತ್ರದಲ್ಲಿದೆ. ರಘು ಮುಖರ್ಜಿ ನಾಯಕ.

 

ಶುಭಾ ಪೂಂಜಾ ನಾಯಕಿ. ಗುರುದೇಸಾಯಿ ಸಂಭಾಷಣೆ ಬರೆದಿದ್ದಾರೆ. ಮುಂಬೈ ಹುಡುಗಿ ಮಧುಮತಿ ಪೊಲೀಸ್ ಅಧಿಕಾರಿಯ ಪಾತ್ರ ನಿರ್ವಹಿಸಿದ್ದಾರೆ. ಕಥೆ ನಗರದಲ್ಲಿ ನಡೆಯುವುದರಿಂದ ಬೆಂಗಳೂರು, ಮೈಸೂರಿನಲ್ಲಿ 35-40 ದಿನಗಳ ಚಿತ್ರೀಕರಣವನ್ನು ಒಂದೇ ಹಂತದಲ್ಲಿ ಮುಗಿಸಲಾಗುವುದು. ಆನಂತರ ಫೈಟ್ ಮತ್ತು ಹಾಡುಗಳನ್ನು ಪ್ಲಾನ್ ಮಾಡಲಾಗುವುದು~ ಎಂದರು.ಗಾಢ ಗುಲಾಬಿ ಬಣ್ಣದ ಉಡುಪಿನಲ್ಲಿ ರಂಗಾಗಿ ಕಾಣುತ್ತಿದ್ದ ಶುಭಾ ಪೂಂಜಾಗೆ ಚಿತ್ರದಲ್ಲಿ `ಮೀನಾಕ್ಷಿ~ ಪಾತ್ರ. `ನಾಯಕಿಗೆ ಹೆಚ್ಚು ಪ್ರಾಮುಖ್ಯತೆ ಇರುವ ಪಾತ್ರ ಸಿಕ್ಕಿದೆ. ಚಿತ್ರದಲ್ಲಿ ನನ್ನ ಪಾತ್ರಕ್ಕೂ ಎರಡು ಆಯಾಮಗಳಿವೆ. ಇದೊಂದು ಸವಾಲಿನ ಪಾತ್ರ~ ಎಂದು ಗುಲಾಬಿ ರಂಗನ್ನು ಗಲ್ಲದಲ್ಲೂ ತುಂಬಿಕೊಂಡರು.ಮುಂಬೈದ ಮಧುಮತಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅವರ ಪೋಷಕರಿಬ್ಬರೂ ಪೊಲೀಸ್ ಅಧಿಕಾರಿಗಳಂತೆ.ಇವರು ಸಿನಿಮಾದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್! ಕೋಲಾರದ ರೇಷ್ಮೆ ಉದ್ಯಮಿ, ನಿರ್ಮಾಪಕ ವಿಶ್ವನಾಥ್ ಅವರ ಪರಿಚಯದಿಂದಾಗಿ ಕನ್ನಡ ಚಿತ್ರದ ಈ ಅವಕಾಶ ದೊರೆತಿದೆ.ಅಂದಹಾಗೆ, ತೆಲುಗು, ಮರಾಠಿ ಚಿತ್ರಗಳಲ್ಲಿ ನಟಿಸಿರುವ ಅವರು ಬೆಳಗಾವಿ ಮೂಲದವರಂತೆ. ವಾಣಿ ಹರಿಕೃಷ್ಣ ಚಿತ್ರದ ಸಂಗೀತದ ಹೊಣೆ ಹೊತ್ತಿದ್ದಾರೆ. ಚಿತ್ರದಲ್ಲಿ ಎರಡೇ ಹಾಡುಗಳಿರುವುದು ಮತ್ತು ಚಿತ್ರದ ಸ್ಕ್ರಿಪ್ಟ್ ಆಸಕ್ತಿಕರವಾಗಿರುವುದು ತಮ್ಮನ್ನು ಸಂಗೀತ ನೀಡುವಂತೆ ಪ್ರೇರೇಪಿಸಿತು ಎಂದರು ವಾಣಿ. `ಲೂಸ್‌ಗಳು~ ನಂತರ ಅವರು ಸಂಗೀತ ನೀಡುತ್ತಿರುವ ಎರಡನೇ ಚಿತ್ರವಿದು.ಚಿತ್ರಕ್ಕೆ ಸಂಭಾಷಣೆ ಬರೆದಿರುವ ಗುರು ದೇಸಾಯಿ ಅವರಿಗಿದು ಆರನೇ ಸಿನಿಮಾ. ತೆಲುಗಿನಲ್ಲಿ 22 ಸಿನಿಮಾಗಳಿಗೆ ಛಾಯಾಗ್ರಹಣ ನೀಡಿರುವ ಮಲಾರ ಭಟ್ ಜೋಶಿ ಕನ್ನಡದಲ್ಲಿ ಛಾಯಾಗ್ರಹಣ ಮಾಡುತ್ತಿರುವ ಐದನೇ ಸಿನಿಮಾ ಇದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry