ಭಾನುವಾರ, ಏಪ್ರಿಲ್ 11, 2021
25 °C

ಮೀನುಗಾರರ ಮೇಲೆ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮೇಶ್ವರಂ (ಪಿಟಿಐ): ಶ್ರೀಲಂಕಾ ನೌಕಾದಳ ತಮಿಳುನಾಡಿನ 15 ಮೀನುಗಾರರ ಮೇಲೆ ಭಾನುವಾರ ಬೆಳಿಗ್ಗೆ ಹಲ್ಲೆ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಚ್ಚತೀವು ಬಳಿಯ ಭಾರತೀಯ ಮೀನುಗಾರಿಕಾ ವಲಯದಲ್ಲಿ ಈ ಘಟನೆ ನಡೆದಿದೆ.   ತಮಿಳುನಾಡು ಮೀನುಗಾರರ ಮೇಲೆ ಶ್ರೀಲಂಕಾ ನಡೆಸುತ್ತಿರುವ ದಾಳಿಗಳನ್ನು ಭಾರತದ ವಿರುದ್ಧದ ಆಕ್ರಮಣ ಎಂದು ಪರಿಗಣಿಸುವಂತೆ ಮುಖ್ಯಮಂತ್ರಿ ಜಯಲಲಿತಾ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ ಮರುದಿನವೇ ಇಂತಹ ಘಟನೆ ನಡೆದಿದೆ.

 

ವಿದೇಶಾಂಗ ಕಾರ್ಯದರ್ಶಿ ರಂಜನ್ ಮಥಾಯ್ ಅವರು ಕೊಲಂಬೊಗೆ ಶನಿವಾರ ಮೂರು ದಿನಗಳ ಭೇಟಿ ನೀಡಿದ ಸಂದರ್ಭದಲ್ಲಿ ಭಾರತೀಯ ಮೀನುಗಾರರ ಮೇಲೆ ದಾಳಿವಿಷಯವನ್ನು ಅಲ್ಲಿನ ಪ್ರಮುಖರೊಂದಿಗೆ ಗಂಭೀರವಾಗಿ ಪ್ರಸ್ತಾಪಿಸುವಂತೆಯೂ ಜಯಲಲಿತಾ ಒತ್ತಾಯಿಸಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.