ಮಂಗಳವಾರ, ನವೆಂಬರ್ 19, 2019
22 °C

ಮೀನುಗಾರರ ಸೆರೆ

Published:
Updated:

ಕೊಲಂಬೊ (ಐಎಎನ್‌ಎಸ್): ಅಕ್ರಮವಾಗಿ ಶ್ರೀಲಂಕಾದ ಜಲಗಡಿ ಪ್ರವೇಶಿಸಿದ 26 ಭಾರತೀಯ ಮೀನುಗಾರರನ್ನು ದ್ವೀಪರಾಷ್ಟ್ರದ ನೌಕಾಪಡೆ ಶನಿವಾರ ಬಂಧಿಸಿದೆ.

5 ಎಳೆಬಲೆ ದೋಣಿಗಳಲ್ಲಿ ಮೀನುಗಾರರು ಶ್ರೀಲಂಕಾ ಜಲಗಡಿಯನ್ನು ಅಕ್ರಮವಾಗಿ ಪ್ರವೇಶಿಸಿದ್ದರಿಂದ ಅವರನ್ನು ವಶಕ್ಕೆ ತೆಗೆದುಕೊಂಡು, ಕೇತ್ಸ್ ದ್ವೀಪಕ್ಕೆ ಕರೆದೊಯ್ಯಲಾಗಿದೆ ಎಂದು ನೌಕಾಪಡೆ ವಕ್ತಾರರು ತಿಳಿಸಿದ್ದಾರೆ.ಕಳೆದ ತಿಂಗಳು ಶ್ರೀಲಂಕಾಕ್ಕೆ ಸೇರಿದ ಸಮುದ್ರ ಪ್ರದೇಶದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಭಾರತೀಯ ಮೀನುಗಾರರನ್ನು ಬಂಧಿಸಿ, ಬಳಿಕ ಬಿಡುಗಡೆ ಮಾಡಲಾಗಿತ್ತು. ಎರಡೂ ರಾಷ್ಟ್ರಗಳ ಮೀನುಗಾರರು ಆಗಾಗ ಮೀನುಗಾರಿಕೆ ಮಾಡುತ್ತಾ ಆಯಾ ದೇಶದ ಸಮುದ್ರ ಪ್ರದೇಶದೊಳಗೆ ಪ್ರವೇಶಿಸುವ ಘಟನೆಗಳು ಮೇಲಿಂದ ಮೇಲೆ ಮರುಕಳಿಸುತ್ತಿರುತ್ತವೆ.

ಪ್ರತಿಕ್ರಿಯಿಸಿ (+)