ಮೀನುಗಾರರ ಹತ್ಯೆ : ಇಟಲಿ ಹಡಗಿನಿಂದ ಶಸ್ತ್ರಾಸ್ತ್ರ ವಶ

7

ಮೀನುಗಾರರ ಹತ್ಯೆ : ಇಟಲಿ ಹಡಗಿನಿಂದ ಶಸ್ತ್ರಾಸ್ತ್ರ ವಶ

Published:
Updated:

ಕೊಚ್ಚಿ (ಪಿಟಿಐ): ಕೇರಳ ಸಮುದ್ರದಲ್ಲಿ ಇಬ್ಬರು ಸ್ಥಳೀಯ ಮೀನುಗಾರರನ್ನು ಬಲಿ ತೆಗೆದುಕೊಂಡ ಇಟಲಿಯ ಹಡಗನ್ನು ಶನಿವಾರ ಶೋಧಿಸಿ ಹಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಯಿತು.`ನಾವು ಹಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದು, ಅವುಗಳಲ್ಲಿ ಯಾವ ಬಂದೂಕಿನಿಂದ ಇಟಲಿಯ ಭದ್ರತಾ ಸಿಬ್ಬಂದಿ ಮೀನುಗಾರರತ್ತ ಗುಂಡು ಹಾರಿಸಿದ್ದಾರೆ ಎಂಬುದನ್ನು ವಿಧಿವಿಜ್ಞಾನ ಪರೀಕ್ಷೆ ನಂತರ ನಿಖರವಾಗಿ ಪತ್ತೆಹಚ್ಚುತ್ತೇವೆ~ ಎಂದು ಪೊಲೀಸರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಇಟಲಿಯ ಕಾನ್ಸುಲ್ ಜನರಲ್ ಗಿಯಾಂಪಓಲೊ, ರೋಮ್‌ನಿಂದ ಶನಿವಾರ ಬೆಳಿಗ್ಗೆ ಬಂದಿಳಿದ ಇಬ್ಬರು ವಿಧಿವಿಜ್ಞಾನ ತಜ್ಞರು ಸೇರಿ 10 ಜನರಿದ್ದ ಇಟಲಿ ತಂಡದ ಉಪಸ್ಥಿತಿಯಲ್ಲಿ ಈ ಶೋಧ ಕಾರ್ಯ ನಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry