ಭಾನುವಾರ, ಜೂನ್ 13, 2021
25 °C

ಮೀನುಗಾರರ ಹತ್ಯೆ ಪ್ರಕರಣ: ವಿಧಾನ ಸಭೆಯಲ್ಲಿ ಕೋಲಾಹಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿರುವನಂತಪುರ (ಪಿಟಿಐ): ರಾಜ್ಯದಲ್ಲಿ ನಡೆದ ಎರಡು ದೋಣಿ ದುರಂತಗಳಿಗೆ ಸಂಬಂಧಿಸಿದಂತೆ ವಿಧಾನ ಸಭೆಯಲ್ಲಿ ಚರ್ಚೆ ನಡೆಸುವ ಸಲುವಾಗಿ ನಿಲುವಳಿ ಸೂಚನೆ ಮಂಡಿಸಲು ನಿರಾಕರಿಸಿದ ಸರ್ಕಾರದ ಕ್ರಮವನ್ನು ವಿರೋಧಿಸಿ ವಿರೋಧಪಕ್ಷದ ಸದಸ್ಯರು ಸೋಮವಾರ ಸಭಾ ತ್ಯಾಗ ಮಾಡಿದರು.ಮೀನುಗಾರರಿಬ್ಬರನ್ನು ಗುಂಡಿಟ್ಟು ಕೊಂದ ಇಟಲಿಯ ಹಡಗಿನ ಇಬ್ಬರು ಸಿಬ್ಬಂದಿಗೆ ಗಣ್ಯ ವ್ಯಕ್ತಿಗಳಿಗೆ ನೀಡುವ ಸ್ಥಾನಮಾನ ನೀಡಲಾಗಿದೆ ಎಂದು ಸಭಾತ್ಯಾಗಕ್ಕೆ ಮುನ್ನ ವಿರೋಧಪಕ್ಷದ ನಾಯಕ ವಿ. ಎಸ್. ಅಚ್ಯುತಾನಂದನ್ ಆರೋಪಿಸಿದರು.`ವಿದೇಶದ ಜೈಲುಗಳಲ್ಲಿ ಅದೆಷ್ಟೋ ಭಾರತೀಯರು ನರಕಯಾತನೆ ಅನುಭವಿಸುತ್ತಿದ್ದು ಇಲ್ಲಿ ನಮ್ಮ ಮೀನುಗಾರರನ್ನು ಕೊಂದ ಇಟಲಿಗರನ್ನು ಅತಿಥಿಗೃಹಗಳಲ್ಲಿ ಕುಳ್ಳಿರಿಸಿದ್ದಲ್ಲದೆ ಅವರಿಗೆ ಪಂಚತಾರಾ ಹೊಟೆಲ್ ಸೌಲಭ್ಯ ನೀಡುತ್ತಿರುವುದು ಸರಿಯೇ?~ ಎಂದು ಅಚ್ಯುತಾನಂದನ್ ಪ್ರಶ್ನಿಸಿದರು.ಇದೇ ವೇಳೆ ಘಟನೆಗೆ ಸಂಬಂಧಿಸಿದಂತೆ ಸಿಪಿಎಂ ಮುಖಂಡರಾದ ಪಿ. ಕೆ. ಗುರುದಾಸನ್ ಕೂಡ ಮುಖ್ಯಮಂತ್ರಿ ಉಮ್ಮನ್ ಚಾಂಡಿ ವಿರುದ್ಧ ಹರಿಹಾಯ್ದರು.  `ತಪ್ಪಿತಸ್ಥರು ಇಟಲಿಯವರು ಎಂದ ಮಾತ್ರಕ್ಕೆ ನೀವು ನಡುಗುತ್ತಿರುವುದು ಯಾಕೆ? ಇಟಲಿಯ ಉಪ  ಪ್ರಧಾನಿ ಇತ್ತೀಚೆಗೆ ಯಾರಿಗೂ ತಿಳಿಯದಂತೆ ಟ್ಯಾಕ್ಸಿಯೊಂದರಲ್ಲಿ ಆಗಮಿಸಿ ಸಾವನ್ನಪ್ಪಿದ ಮೀನುಗಾರರೊಬ್ಬರ ಮನೆಗೆ ಭೇಟಿ ನೀಡಿರುವ ವಿಷಯ ಎಷ್ಟು ಮಂದಿಗೆ ಗೊತ್ತು? ಇಂಥ ಘಟನೆಗಳು ನಡೆಯುವುದಾದರೂ ಹೇಗೆ? ಎಂದು ಅವರು ಪ್ರಶ್ನಿಸಿದರು.14 ದಿನಗಳ ನ್ಯಾಯಾಂಗ ಬಂಧನ

ಕೊಲ್ಲಂ (ಪಿಟಿಐ):
ಇಲ್ಲಿನ ಕರಾವಳಿ ತೀರದಲ್ಲಿ ಇಬ್ಬರು ಮೀನುಗಾರರನ್ನು ಗುಂಡಿಟ್ಟು ಕೊಂದ ಪ್ರಕರಣದ ಆರೋಪಿಗಳಾದ ಇಟಲಿ ಹಡಗಿನ ಇಬ್ಬರು ಸಿಬ್ಬಂದಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿರಿಸಲು ನ್ಯಾಯಾಲಯ ಆದೇಶ ನೀಡಿದ್ದು, ಆರೋಪಿಗಳನ್ನು ತಿರುವನಂತಪುರದ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಯಿತು.ಇದುವರೆಗೆ ಪೊಲೀಸರ ವಶದಲ್ಲಿದ್ದ ಹಡಗಿನ ಸಿಬ್ಬಂದಿ ಲಾಟೋರ್ ಮ್ಯಾಸಿಮಿಲಿಯಾನೊ ಮತ್ತು ಸಾಲ್ವತೋರ್ ಜಿರೋನ್ ಅವರನ್ನು ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಎ.ಕೆ. ಗೋಪಕುಮಾರ್ ಅವರ ಮುಂದೆ ಹಾಜರುಪಡಿಸಿದ್ದ ವೇಳೆ ಈ ಆದೇಶ ನೀಡಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.