ಮಂಗಳವಾರ, ನವೆಂಬರ್ 19, 2019
23 °C

`ಮೀನುಗಾರರ ಹತ್ಯೆ ಪ್ರಮಾದ ಆಗಿಲ್ಲ'

Published:
Updated:

ವಾಷಿಂಗ್ಟನ್ (ಪಿಟಿಐ): ಪರ್ಷಿಯನ್ ಕೊಲ್ಲಿಯಲ್ಲಿ ಕಳೆದ ವರ್ಷ ಭಾರತದ  ಮೂಲದ ಮೀನುಗಾರನೊಬ್ಬರ ಹತ್ಯೆ ಪ್ರಕರಣದಲ್ಲಿ ಯಾವುದೇ ಪ್ರಮಾದ ಆಗಿಲ್ಲ ಎಂದು ಈ ಬಗ್ಗೆ ತನಿಖೆ ನಡೆಸಿದ ಅಮೆರಿಕದ ನೌಕಾ ಪಡೆಯ ತನಿಖಾ ತಂಡ ಹೇಳಿದೆ.ದುಬೈ ಕರಾವಳಿಯಲ್ಲಿ ಭಾರತೀಯ ಮೀನುಗಾರರಿದ್ದ ದೋಣಿಯ ಮೇಲೆ ಅಮೆರಿಕ ನೌಕೆಯ ಸಿಬ್ಬಂದಿ 2012ರ ಜುಲೈ 16ರಂದು ಗುಂಡು ಹಾರಿಸಿದ್ದರು. ಇದರಿಂದ ಒಬ್ಬರು ಮೃತಪಟ್ಟು, ಮೂವರಿಗೆ ಗಾಯವಾಗಿತ್ತು.ಈ ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಭಾರತ ಆಗ್ರಹಿಸಿತ್ತು.`ನೌಕಾ ಪಡೆ ನೌಕೆಯ ಸನಿಹಕ್ಕೆ ಬರುತ್ತಿದ್ದ ಮೀನುಗಾರರ ದೋಣಿಗೆ ಎಚ್ಚರಿಕೆ ಕೊಟ್ಟರೂ ಎಚ್ಚೆತ್ತುಕೊಳ್ಳಲಿಲ್ಲ. ಆಗ ಗುಂಡು ಹಾರಿಸದೇ ಬೇರೆ ದಾರಿ ಇರಲಿಲ್ಲ' ಎಂದು ತನಿಖಾ ವರದಿ ಹೇಳಿದೆ.

ಪ್ರತಿಕ್ರಿಯಿಸಿ (+)