ಮೀನುಗಾರರ ಹತ್ಯೆ: ಮೊಕದ್ದಮೆ ರದ್ದತಿಗೆ ಇಟಲಿ ಮನವಿ

7

ಮೀನುಗಾರರ ಹತ್ಯೆ: ಮೊಕದ್ದಮೆ ರದ್ದತಿಗೆ ಇಟಲಿ ಮನವಿ

Published:
Updated:

ನವದೆಹಲಿ/ಕೊಚ್ಚಿ (ಪಿಟಿಐ): ಇಬ್ಬರು ಮೀನುಗಾರರನ್ನು ಗುಂಡಿಕ್ಕಿ ಕೊಂದ ನೌಕಾ ಸಿಬ್ಬಂದಿ ವಿರುದ್ಧ ದಾಖಲಿಸಿರುವ ಮೊಕದ್ದಮೆ ರದ್ದುಪಡಿಸಲು ಕೋರಿ ಇಟಲಿ ಸರ್ಕಾರವು ಕೇರಳ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ. ಈ ಮಧ್ಯೆ, ಭಾರತಕ್ಕೆ ಭೇಟಿ ನೀಡಿರುವ ಇಟಲಿ ವಿದೇಶಾಂಗ ಖಾತೆ ಉಪಸಚಿವ ಸ್ಟಫನ್ ಡೆ ಮಿಸ್ತುರಾ ಅವರು ಸತ್ಯಾಸತ್ಯೆಯ ಪರಾಮರ್ಶಿಸಿ, ಪ್ರಕರಣ ರದ್ದುಪಡಿಸಬೇಕೆಂದು ಕೋರಿದ್ದಾರೆ. ಆದರೆ ಭಾರತ ಸರ್ಕಾರಿ ಮೂಲಗಳು `ನೆಲದ ಕಾನೂನಿನ ಪ್ರಕಾರ ಮತ್ತು ನ್ಯಾಯಸಮ್ಮತ ರೀತಿ ವಿಚಾರಣೆ ನಡೆಸಲಾಗುತ್ತದೆ~ ಎಂದು ತಿಳಿಸಿವೆ.ಮಿಸ್ತುರಾ ಭಾರತದ ವಿದೇಶಾಂಗ ರಾಜ್ಯ ಸಚಿವೆ ಪ್ರಣೀತ್ ಕೌರ್ ಅವರ ಜೊತೆ ಮಾತುಕತೆ ನಡೆಸಿದರು. ದೇಶದ ಕಾನೂನಿನನ್ವಯ ನ್ಯಾಯಸಮ್ಮತವಾಗಿ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೌರ್ ಸ್ಪಷ್ಟಪಡಿಸಿದ್ದಾರೆ.  `ಘಟನೆ ಅಂತರರಾಷ್ಟ್ರೀಯ ಜಲಗಡಿಯಲ್ಲಿ ಸಂಭವಿಸಿರುವುದರಿಂದ ಭಾರತ ಕ್ರಮ ಜರುಗಿಸುವುದು ಸರಿಯಲ್ಲ~ವೆಂದು ಮಿಸ್ತುರಾ ವಾದಿಸಿದರು ಎನ್ನಲಾಗಿದೆ.ಘಟನೆಯ ಬಗ್ಗೆ ನಮಗೆ ವಿಷಾದವಿದೆ ಎಂದು ತಿಳಿಸಿರುವ ಅವರು ಸೂಕ್ತ ತನಿಖೆ ನಡೆಸಿದರೆ ಘಟನೆ ನಡೆದಿರುವ ಸ್ಥಳದ ನಿಖರತೆ ಗೊತ್ತಾಗುತ್ತದೆ ಎಂದಿದ್ದಾರೆ.ಈ ನಡುವೆ, ಗುಂಡೇಟಿನಿಂದ ಸತ್ತ ಮೀನುಗಾರರ ಪೈಕಿ ಒಬ್ಬನ ಕುಟುಂಬದ ಸದಸ್ಯರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕು ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಹಡಗಿನ ಮಾಲೀಕರಿಗೆ ರೂ 25 ಲಕ್ಷಗಳ ಬ್ಯಾಂಕ್ ಖಾತರಿ ಒದಗಿಸುವಂತೆ ಸೂಚಿಸಿದ್ದು, ಆವರೆಗೂ ಹಡಗನ್ನು ವಶದಲ್ಲಿ ಇಟ್ಟುಕೊಳ್ಳಬೇಕೆಂದು ಬಂದರು ಅಧಿಕಾರಿಗಳಿಗೆ ಆದೇಶಿಸಿದೆ.ಮೃತನ ಪತ್ನಿಗೆ ನೌಕರಿ

ತಿರುವನಂತಪುರ (ಐಎಎನ್‌ಎಸ್): ಇಟಲಿ ಹಡಗಿನ ಭದ್ರತಾ ಸಿಬ್ಬಂದಿಯಿಂದ ಹತ್ಯೆಗೀಡಾದ  ಕೇರಳದ ಮೀನುಗಾರ ಗೆಲೆಸ್ಟೈನ್ ಪತ್ನಿಗೆ ಸರ್ಕಾರಿ ನೌಕರಿ ನೀಡಲು ಕೇರಳ ಸರ್ಕಾರ ಬುಧವಾರ ನಿರ್ಧರಿಸಿದೆ. ಈ ವಿಧವೆಗೆ ಮೀನುಗಾರಿಕೆ ಇಲಾಖೆಯಲ್ಲಿ ಡಿ ದರ್ಜೆ ನೌಕರಿ ನೀಡಲಾಗುವುದು ಎಂದು ಸಚಿವಾಲಯದ ಅಧಿಕಾರಿಗಳು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.ಕೇರಳ ಕ್ರಮ: ಸಿಎಂ ಚಾಂಡಿ

ಈ ಮಧ್ಯೆ, ಕೇರಳದ ಮುಖ್ಯಮಂತ್ರಿ ಉಮ್ಮನ್ ಚಾಂಡಿ, ಮೀನುಗಾರರನ್ನು ಹತ್ಯೆ ಮಾಡಿದ ಇಟಲಿ ನೌಕಾ ಸಿಬ್ಬಂದಿ ವಿರುದ್ಧ ಸರ್ಕಾರ ಕಾನೂನು ಕ್ರಮ ಕೈಗೊಳ್ಳಲಿದೆ.`ಇದು ರಾಜ್ಯದ ಹಕ್ಕು ಮತ್ತು ಅಧಿಕಾರ~ ಎಂದಿದ್ದಾರೆ. ಕೇಂದ್ರ ಬೆಂಬಲ ನೀಡಿದೆ ಎಂದೂ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry