ಶನಿವಾರ, ಮಾರ್ಚ್ 6, 2021
29 °C

ಮೀನು ನುಂಗಿದ ಹಸುಳೆಯ ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೀನು ನುಂಗಿದ ಹಸುಳೆಯ ರಕ್ಷಣೆ

ಶಿವಮೊಗ್ಗ: 6 ಸೆ.ಮೀ. ಉದ್ದದ ಮೀನು ನುಂಗಿದ 1 ವರ್ಷ 4 ತಿಂಗಳ ಮಗುವಿಗೆ ಸೂಕ್ತ ಚಿಕಿತ್ಸೆ ನೀಡಿ ಜೀವ ರಕ್ಷಣೆ ಮಾಡಿದ ಘಟನೆ ಈಚೆಗೆ ನಗರದ ವಾತ್ಸಲ್ಯ ಆಸ್ಪತ್ರೆಯಲ್ಲಿ ನಡೆದಿದೆ.ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಆದಾಪುರ ಗ್ರಾಮದ ನರಸಪ್ಪ ಎಂಬುವರ ಮಗು ವೀರಭದ್ರ, ಮೀನು ನುಂಗಿ ತೀವ್ರ ಅಸ್ವಸ್ಥಗೊಂಡಿತ್ತು. ಮಗುವನ್ನು ನಗರದ ವಾತ್ಸಲ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು, ಕೂಡಲೇ ಮಗುವಿನ ಗಂಟಲಿಗೆ ರಂಧ್ರ ಮಾಡಿ ಕೃತಕ ಉಸಿರಾಟ ನೀಡಿದರು. ನಂತರ ಸೂಕ್ಷ್ಮದರ್ಶಕದ ಸಹಾಯದಿಂದ ಮೀನನ್ನು ಹೊರತೆಗೆದರು.ಮಗು ಮೀನು ನುಂಗಿದ್ದರಿಂದ ಶ್ವಾಸಕೋಶದ ಬಲಭಾಗದಲ್ಲಿ ಗಾಳಿ ತುಂಬಿತ್ತು, ಅದಕ್ಕೂ ಚಿಕಿತ್ಸೆ ನೀಡಿ, ಕೃತಕ ಉಸಿರಾಟ ಹಾಗೂ ಮೂಗಿನ ಮೂಲಕ ಆಹಾರ ನೀಡಿ, ಮಗು ಚೇತರಿಸಿಕೊ­ಳ್ಳುವಂತೆ ಮಾಡಲಾಯಿತು.ಈ ಚಿಕಿತ್ಸೆಯನ್ನು ಆಸ್ಪತ್ರೆಯ ವೈದ್ಯ­ರಾದ ಡಾ.ಧನಂಜಯ ಸರ್ಜಿ, ಡಾ.ಯತೀಶ್, ಶಸ್ತ್ರಚಿಕಿತ್ಸಾ ತಜ್ಞ ಡಾ.ಪ್ರದೀಪ, ಅರವಳಿಕೆ ತಜ್ಞ ಡಾ.ಪ್ರವೀಣ ಮತ್ತು ತಂಡ ನೆರವೇರಿಸಿತು ಎಂದು ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.