ಸೋಮವಾರ, ನವೆಂಬರ್ 18, 2019
24 °C
ಚಂದ ಪದ್ಯ

ಮೀನು ರಾಣಿ

Published:
Updated:

ಫಳ ಫಳ ಫಳನೇ ಮಿಂಚ್ತಾಳೆ

ಪಿಳಿ ಪಿಳಿ ಕಣ್ಣು ಬಿಡ್ತಾಳೆ

ಜುಳು ಜುಳು ನೀರಲ್ಲಿ ಈಜ್ತಾಳೆ

ನೀರ ರಾಣಿ ಹೊನ್ನಿನ ಮೀನು ರಾಣಿ

ಮೂತಿಯಂತು ಚೂಪು ಚೂಪು

ಅವಳ ಮೈ ನುಣುಪು ಹೊಳಪು

ಬಾಗಿ ಬಳುಕಿ ಬಿಂಕ ತೋರುವ

ನೀರ ರಾಣಿ ಹಹ್ಹ ಹ್ಹಹ್ಹ ಮೀನು ರಾಣಿ

ಬಂಡೆಯ ಸಂದೀಲಿ ನುಸಿಯುತಾಳೆ

ಜಲಪಾತದಿಂದ ಜಿಗಿತಾಳೆ

ಗೆಳೆಯರ ಗುಂಪಲಿ ಡ್ಯಾನ್ಸನು ಮಾಡುವ

ನೀರ ರಾಣಿ ಹಿಹ್ಹಿ ಹ್ಹಿಹ್ಹಿ ಮೀನು ರಾಣಿ

ಮೊಸಳೆಗೆ ಸಡ್ಡು ಹೊಡಿತಾಳೆ

ಆಮೆಗೆ ಮೂತಿ ತಿವಿತಾಳೆ

ಏಡಿಯ ನೋಡಿ ಲೇವಡಿ ಮಾಡುವ

ನೀರ ರಾಣಿ ಹೆಹ್ಹೆ ಹ್ಹೆಹ್ಹೆ ಮೀನು ರಾಣಿ

ಕಪ್ಪೆ ಚಿಪ್ಪಲಿ ಮನೆಯ ಮಾಡಿ

ಹವಳದಲ್ಲಿ ಸಿಂಗಾರ ಮಾಡಿ

ಮುತ್ತುರತ್ನದಿ ಗೋಲಿಯಾಡುವ

ನೀರ ರಾಣಿ ಹುಹ್ಹು ಹ್ಹುಹ್ಹು ಮೀನು ರಾಣಿ

ಗಾಳ ಹಾಕಿ ಮೀನುಗಾರ

ಕೂತಾಗೆಲ್ಲ ಗುಗ್ಗು ತರ

ನುಣುಚಿ ಜಾರಿ ಮಾಯವಾಗುವ

ಜಾಣರ ಜಾಣೆ ಹೊಹ್ಹೊ ಹ್ಹೊಹ್ಹೊ ಮೀನು ರಾಣಿ!

ಪ್ರತಿಕ್ರಿಯಿಸಿ (+)