ಬುಧವಾರ, ಮೇ 25, 2022
24 °C

ಮೀನೆಣ್ಣೆ ಘಟಕ: ಸಚಿವರಿಗೆ ಸಂಬಂಧವಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಬೈತಖೋಲದಲ್ಲಿರುವ ಮೀನೆಣ್ಣೆ ಘಟಕಕ್ಕೂ ಮೀನುಗಾರಿಕೆ ಸಚಿವ ಆನಂದ ಅಸ್ನೋಟಿಕರ್ ಅವ ರಿಗೂ ಯಾವುದೇ ಸಂಬಂಧವಿಲ್ಲ ಎಂದು ಘಟಕವನ್ನು ಲೀಸ್‌ಗೆ ಪಡೆ ದಿರುವ ಸಾಯಿ ಅನ್ನಪೂರ್ಣ ಬಯೋ ಪ್ರೊಟಿನ್ಸ್ ಮಾಲೀಕ ವೆಮುರಿ ಶ್ಯಾಮ ಪ್ರಸಾದ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲೀಸ್ ಮೇಲೆ ಪಡೆದಿರುವ ಈ ಘಟಕ ಕರ್ನಾಟಕ ಮೀನುಗಾರಿಕೆ ಅಭಿ ವೃದ್ಧಿ ನಿಗಮಕ್ಕೆ ಸೇರಿದ್ದು ನಮ್ಮ ಯಾವುದೇ ವ್ಯವಹಾರದಲ್ಲಿ ಸಚಿವ ಅಸ್ನೋಟಿಕರ್ ಪಾಲು ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.ನನ್ನ ಮಾಲೀಕತ್ವದ ಸಾಯಿ ಅನ್ನ ಪೂರ್ಣ ಬಯೋ ಪ್ರೊಟಿನ್ಸ್(ಗೋವಾ) ಪ್ರೈ. ಲಿಮಿಟೆಡ್‌ನಲ್ಲೂ ಆನಂದ ಅಸ್ನೋಟಿಕರ್ ಪಾಲು ಇಲ್ಲ. ಅವರ ತಾಯಿ ಶುಭಲತಾ ಅಸ್ನೋಟಿ ಕರ್ ಷೇರು ಇರಬಹುದು ಎಂದು ಶ್ಯಾಮಪ್ರಸಾದ ಪ್ರಶ್ನೆಯೊಂದಕ್ಕೆ ಉತ್ತ ರಿಸಿದರು.ಮೀನೆಣ್ಣೆ ಘಟಕದಲ್ಲಿ ಬಿದ್ದ ಮೀನಿನ ರಕ್ತ ಮತ್ತು ಬಾಯ್ಲರ್‌ನ ನೀರನ್ನು ಸಂಸ್ಕರಿಸದೇ ಸಮುದ್ರ ಬಿಡುವ, ಘಟಕದ ಆವರಣದಲ್ಲಿ ತುಂಬ ವಾಸನೆ ಇರುವುದರಿಂದ ಆರೋಗ್ಯ ಸಮಸ್ಯೆ ಸೃಷ್ಟಿಸುವ ಮತ್ತು ಘಟಕದಲ್ಲಿ ಸ್ವಚ್ಛತೆ ಇಲ್ಲದಿರುವ ಕಾರಣ ನೀಡಿದ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಘಟಕದ ಕಾರ್ಯನಿರ್ವಹಣೆಯನ್ನು ಸ್ಥಗಿತಗೊಳಿಸಲು ಆದೇಶ ನೀಡಿದೆ ಎಂದರು.ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶದ ಹಿನ್ನೆಲೆಯಲ್ಲಿ ಘಟಕದಲ್ಲಿ ಉತ್ಪಾದನೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ, ಹೊಸ ಮಶಿನ್‌ಗಳನ್ನು ಅಳವಡಿಸಲಾಗುತ್ತಿದೆ ಎಂದು ಶ್ಯಾಮಪ್ರಸಾದ ಹೇಳಿದರು.ಸುಮಾರು 4-5 ಸಾವಿರ ಕುಟುಂಬ ಗಳು ಮೀನೆಣ್ಣೆ ಘಟಕವನ್ನು ಅವ ಲಂಬಿಸಿ ಜೀವನ ನಡೆಸುತ್ತಿವೆ. ಮೀನೆಣ್ಣೆ ಘಟಕ ಆರಂಭವಾದಾಗ ಕೇವಲ 30 ಪರ್ಶಿನ ದೋಣಿಗಳು ಇಲ್ಲಿತ್ತು. ಈಗ ಈ ಸಂಖ್ಯೆ 130ಕ್ಕೇರಿದೆ ಎಂದು ಅವರು ಹೇಳಿದರು.ಘಟಕದ ಪ್ರಾರಂಭವಾಗುವುದಕ್ಕೂ ಮುನ್ನ ಮೀನಿನ ಬುಟ್ಟಿಯೊಂದಕ್ಕೆ ಕೇವಲ ರೂ. 80 ದರ ಇತ್ತು. ಘಟಕ ಪ್ರಾರಂಭವಾದ ನಂತರ ಬುಟ್ಟಿ ಯೊಂದಕ್ಕೆ ರೂ. 130 ದರ ನೀಡ ಲಾಗುತ್ತಿದೆ ಎಂದು ಹೇಳಿದರು.ನಮ್ಮ ಕಂಪೆನಿಯ ಮತ್ತು ಸಚಿವ ಆಸ್ನೋಟಿಕರ್ ಮಧ್ಯೆ ಸುಖಸುಮ್ಮನೆ ವಿವಾದಗಳನ್ನು ಸೃಷ್ಟಿಮಾಡಿ ಆ ಮೂಲಕ ರಾಜಕೀಯ ಲಾಭ ಪಡೆ ಯಲು ಕೆಲವರು ಪ್ರಯತ್ನ ಮಾಡು ತ್ತಿದ್ದಾರೆ ಎಂದು ಅವರು ದೂರಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.