ಮೀಸಲಾತಿ ಪಟ್ಟಿ ಪ್ರಕಟ

7

ಮೀಸಲಾತಿ ಪಟ್ಟಿ ಪ್ರಕಟ

Published:
Updated:

ಶಹಾಪುರ: ತಾಲ್ಲೂಕಿನ 36 ಗ್ರಾಮ ಪಂಚಾಯಿತಿಗಳಿಗೆ ಎರಡನೇಯ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಹುದ್ದೆಗೆ ಮಂಗಳವಾರ ಜಯಶ್ರೀ ಚಿತ್ರಮಂದಿರದಲ್ಲಿ ಪಾರದರ್ಶಕ ನಿಯಮದಡಿಯಲ್ಲಿ ಮೀಸಲಾತಿ ನಿಗದಿಪಡಿಸಿದೆ.ಒಟ್ಟು 36 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಗೆ ಮೀಸಲಾತಿಯಂತೆ ಹತ್ತು ಪರಿಶಿಷ್ಟ ಜಾತಿ ಮೀಸಲಾತಿಯಾಗಿದ್ದು ಅದರಲ್ಲಿ ಐದು ಮಹಿಳೆಯರಿಗೆ ಸ್ಥಾನ ಮೀಸಲಾತಿ ನೀಡಲಾಗಿದೆ. ಅದರಂತೆ ಒಟ್ಟು ನಾಲ್ಕು ಎಸ್.ಟಿ ಸ್ಥಾನ ನಿಗದಿಯಾಗಿದ್ದು ಅದರಲ್ಲಿ ಎಸ್.ಟಿ (ಮಹಿಳೆ) ಎರಡು ನಿಗದಿಯಾಗಿದೆ.ಬಿಸಿಎ ಮೂರು ಸ್ಥಾನ ಅದರಲ್ಲಿ  ಎರಡು ಬಿಸಿಎ(ಮಹಿಳೆ) ನಿಗದಿ. ಬಿಸಿಬಿ ಒಂದು ಸ್ಥಾನ ಮೀಸಲು. ಸಾಮಾನ್ಯ 18 ನಿಗದಿಪಡಿಸಿದ್ದು ಅದರಲ್ಲಿ 9 ಸಾಮಾನ್ಯ (ಮಹಿಳೆ) ನಿಗದಿಯಾಗಿವೆ.ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಗೆ ಮೀಸಲಾತಿ ನಿಗದಿಪಡಿಸಿದೆ.ಆಯಾ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ ಪಟ್ಟಿಯನ್ನು ಪಕ್ಕದ ಎಡಗಡೆಯ  ಬಾಕ್ಸ್‌ನಲ್ಲಿ ವಿವರಿಸಿದಂತೆ ಮೀಸಲಾತಿ ನಿಗದಿಪಡಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry