ಸೋಮವಾರ, ಮೇ 17, 2021
23 °C

ಮೀಸಲಾತಿ ಸೌಲಭ್ಯ ಬಲಾಢ್ಯರ ಪಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ಬಲಾಢ್ಯರು, ಸರಕಾರಿ ಸವಲತ್ತುಗಳನ್ನು ಪಡೆದವರೇ ಮತ್ತೆ-ಮತ್ತೆ ಮೀಸಲಾತಿ ಪಡೆಯುವುದನ್ನು ಹೊರತು ಪಡಿಸಿ, ಸಮಾಜದಲ್ಲಿನ ಕೊನೆಯ ಹಂತದಲ್ಲಿರುವ ವ್ಯಕ್ತಿಗೂ ಮೀಸಲಾತಿಯ ಸವಲತ್ತುಗಳನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸಬೇಕೆಂದು ಬೆಂಗಳೂರು ಜಿಲ್ಲಾಧಿಕಾರಿ ಕಚೇರಿಯ ಜಿಲ್ಲಾ ಸಮುದಾಯ ಅಭಿವೃದ್ದಿ ತಜ್ಞ ಡಾ.ಕೆ.ನರಸಿಂಹಪ್ಪ ಅಭಿಪ್ರಾಯಪಟ್ಟರು.ಇಲ್ಲಿನ ಪುರಸಭಾ ಕಚೇರಿ ಆವರಣದಲ್ಲಿ ಶನಿವಾರ ಪುರಸಭಾ ವತಿಯಿಂದ ಏರ್ಪಡಿಸಲಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 121 ನೇ ಜನ್ಮದಿನಾಚರಣೆ ಹಾಗೂ ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನ್ ರಾಮ್ ಅವರ 105 ನೇ ಜನ್ಮ ದಿನಾಚರಣೆ ಪ್ರಯುಕ್ತ ಎಸ್.ಸಿ/ಎಸ್.ಟಿ ಹೆಣ್ಣು ಮಕ್ಕಳಿಗೆ 10,000 ರೂಗಳ ಠೇವಣಿ ಬಾಂಡ್, ಹೊಲಿಗೆ ಯಂತ್ರ, ಟ್ರೈಸಿಕಲ್, ಕುಕ್ಕರ್, ಮಿಕ್ಸಿ, ಕಂಪ್ಯೂಟರ್ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.ಬಸವ ಕಲ್ಯಾಣದ ಮಠಾಧ್ಯಕ್ಷ ಮಹದೇವ ಸ್ವಾಮೀಜಿ ಮಾತನಾಡಿ, ಡಾ.ಅಂಬೇಡ್ಕರ್, ಜಗಜೀವನ್ ರಾಮ್, ಬಸವಣ್ಣ, ಬುದ್ಧನಂತಹ ದಾರ್ಶನಿಕರು ಪ್ರಪಂಚದಲ್ಲಿನ ತುಳಿತಕ್ಕೊಳಗಾದವರ ಏಳಿಗೆಗಾಗಿ ತಮ್ಮ ಇಡೀ ಬದುಕನ್ನೇ ಮೀಸಲಿಟ್ಟು ಹೋರಾಟ ನಡೆಸಿದರು ಎಂದರು.ಪುರಸಭಾಧ್ಯಕ್ಷೆ ಮಂಜುಳಾ ನಾರಾಯಣ ಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪರಿಶಿಷ್ಟ ಜಾತಿ, ಹಾಗೂ ಪರಿಶಿಷ್ಟ ವರ್ಗದವರಿಗೆ ಮೀಸಲಿರಿಸಿರುವ ಶೇ.22.75 ರ ನಿಧಿಯನ್ನು ಶೇ.98 ರಷ್ಟು ಬಳಕೆ ಮಾಡಿಕೊಂಡಿರುವುದು ಪುರಸಭೆಯ ಹೆಗ್ಗಳಿಕೆ.ಇದೀಗ 1 ನೇ ತರಗತಿಯಿಂದ 7 ನೇ ತರಗತಿಯವರೆಗಿನ 52 ಮಂದಿ ಹೆಣ್ಣು ಮಕ್ಕಳಿಗೆ ಹತ್ತು ಸಾವಿರ ರೂಗಳ ಠೇವಣೆ ಹಣ ನೀಡಲಿದ್ದು, ಆ ಹಣವನ್ನು ಮುಂದಿನ ದಿನಗಳಲ್ಲಿ ಅವರ ಉನ್ನತ ವಿದ್ಯಾಭ್ಯಾಸಕ್ಕೆ ಹಾಗೂ ಜೀವನ ನಿರ್ವಹಣೆಗೆ ಬಳಸಿಕೊಳ್ಳಬಹುದೆಂದು ತಿಳಿಸಿದರು. ದೇಶದಲ್ಲಿ ಸಮಾನತೆ ಸಾಧಿಸಲು ಕಾರಣಕರ್ತರಾದ ಅಂಬೇಡ್ಕರ್ ಜಯಂತಿಯನ್ನು ಹಬ್ಬದಂತೆ ಎಲ್ಲರೂ ಆಚರಿಸಬೇಕೆಂದು ಅವರು ಕರೆ ನೀಡಿದರು.ಉಪಾಧ್ಯಕ್ಷ ಎಂ.ಎಲ್.ಕೃಷ್ಣಪ್ಪ ಗೌಡ ಮಾತನಾಡಿ, ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳು ಒಂದು ಜನಾಂಗದವರಿಗೆ ಮಾತ್ರ ಸೀಮಿತವಾಗದೆ, ಎಲ್ಲಾ ಹಿಂದುಳಿದ, ಶೋಷಿತ, ಬಡವರ ಉದ್ಧಾರಕ್ಕಾಗಿಯೇ ಇವೆ. ಅಂಬೇಡ್ಕರ ಸಂವಿಧಾನ ರಚನೆಯಲ್ಲಿ ಸಮಾನತೆ ಮತ್ತು ಸೌಹಾರ್ದದ ಆಶಯಗಳನ್ನು ಇದಕ್ಕಾಗಿಯೇ ಅಡಕಗೊಳಿಸಿದರು. ಶೋಷಿತರ ಉದ್ಧಾರಕ್ಕಾಗಿಯೇ ಇರುವ ಮೀಸಲಾತಿ ಪದ್ಧತಿಯನ್ನು ದಲಿತರು ಸದುಪಯೋಗ ಮಾಡಿಕೊಳ್ಳಬೇಕೆಂದು ತಿಳಿಸಿದರು.ಪುರಸಭಾ ಮಾಜಿ ಅಧ್ಯಕ್ಷ ಎಂ.ಚಿನ್ನಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ಮುನಿರಾಜು, ಮಾಜಿ ಅಧ್ಯಕ್ಷ ವೀರಣ್ಣ, ಪುರಸಭಾ ಸದಸ್ಯರಾದ ಮುನಿಶ್ಯಾಮಪ್ಪ, ಜೆ.ಎನ್.ಶ್ರಿನಿವಾಸ್, ಎಚ್.ಎಂ.ಕೃಷ್ಣಪ್ಪ, ಟಿಲ್ಲರ್ ಮಂಜು, ಎಲ್.ಚಂದ್ರಶೇಖರ್, ಮಾಜಿ ಸದಸ್ಯರಾದ ಸಂಪತ್ ಕುಮಾರ್, ಎ.ನಾರಾಯಣಸ್ವಾಮಿ, ನಾಮಾಂಕಿತ ಸದಸ್ಯರಾದ ಜಿ.ಕೆ.ರಾಮು, ಸಾಯಿ ಪ್ರಸಾದ್ ಇತರರು ಇದ್ದರು.ಅಂಧರ ಶಾಲೆ ವಿದ್ಯಾರ್ಥಿನಿಯರಾದ ರಾಧಾ ಮತ್ತು ನೇತ್ರ ತಂಡದವರು ಪ್ರಾರ್ಥಿಸಿದರು. ಮುಖ್ಯಾಧಿಕಾರಿ ಎಂ.ಆರ್.ಮಂಜುನಾಥ್ ಸ್ವಾಗತಿಸಿದರು. ಗಂಗಯ್ಯ, ಕೃಷ್ಣ, ಹಾಗೂ ಪ್ರಸನ್ನ ಅವರು ಅಂಬೇಡ್ಕರ್ ಬಗೆಗಿನ ಕ್ರಾಂತಿ ಗೀತೆಗಳನ್ನು ಹಾಡಿದರು. ಶಿಕ್ಷಕ ಕೆ.ಎಚ್.ಚಂದ್ರಶೇಖರ್  ನಿರೂಪಿಸಿದರು. ಎಸ್.ಜೆ.ಎಸ್.ಆರ್.ವೈ ಅಧಿಕಾರಿಗಳಾದ ಶಿವಣ್ಣ ಹಾಗೂ ಶಿವನಾಗೇಗೌಡ ವಂದಿಸಿದರು.ವೆಂಕಟೇನಹಳ್ಳಿಯಲ್ಲಿ ಆಚರಣೆ: ಸಮೀಪದ ವೆಂಕಟೇನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ಅವರ ಜನ್ಮ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಗ್ರಾಮದ ಮುಖಂಡ ಮುನಿ ನಾರಾಯಣಪ್ಪ, ಗ್ರಾ.ಪಂ.ಸದಸ್ಯ ವೆಂಕಟಪ್ಪ ಹಾಗೂ ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು ಹಾಜರಿದ್ದರು. ಶಾಲೆಯ ಮುಖ್ಯ ಶಿಕ್ಷಕ ಎಚ್, ಬಾಬುಜಾನ್ ಸ್ವಾಗತಿಸಿ, ಶಿಕ್ಷಕಿ ಉಮಾದೇವಿ ವಂದಿಸಿದರು. ಶಿಕ್ಷಕ ನರಸಿಂಹಮೂರ್ತಿ ಅಂಬೇಡ್ಕರ್ ಜೀವನ ಚರಿತ್ರೆಯ ಬಗ್ಗೆ ತಿಳಿಸಿದರು.

ಬಿ.ಜೆ.ಪಿಯಿಂದ ಅಂಬೇಡ್ಕರ್ ಜಯಂತಿ: ಅಂಬೇಡ್ಕರ್ ಅವರು ತುಳಿತಕ್ಕೊಳಗಾದ ಹಿಂದುಳಿದ ವರ್ಗಗಳನ್ನು ಮೇಲೆತ್ತಲು ಶ್ರಮಿಸಿದ ಮಹಾನ್ ನಾಯಕ. ಸಮಾನತೆಯನ್ನು ಸಾಧಿಸಲು ಕಾರಣಕರ್ತರಾದ ಮಹಾನುಭಾವ ಎಂದು ಬಿಜೆಪಿಯು ಎಸ್.ಸಿ ಮೋರ್ಚಾದ ವಿಜಯಪುರ ನಗರ ಘಟಕದ ಅಧ್ಯಕ್ಷ ವಿ.ಪ್ರಭು ತಿಳಿಸಿದರು.   ಇಲ್ಲಿನ ಬಸ್ ನಿಲ್ದಾಣದಲ್ಲಿ ಬಿಜೆಪಿ ಎಸ್.ಸಿ ಮೋರ್ಚಾ ವತಿಯಿಂದ ಏರ್ಪಡಿಸಿದ್ದ ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು  ಮಾತನಾಡಿದರು.

  ಪಟ್ಟಣ ಬಿಜೆಪಿ ಅಧ್ಯಕ್ಷ ರಾಮಕೃಷ್ಣ ಹೆಗಡೆ, ಪುರಸಭಾ ಸದಸ್ಯ ಭಗವಾನ್ ರಾಮು, ಜಿಲ್ಲಾ ಸಮಿತಿ ಸದಸ್ಯ ರಾಘವ, ತಾಲ್ಲೂಕು ಎಸ್.ಟಿ ಮೋರ್ಚಾ ಮಾಜಿ ಅಧ್ಯಕ್ಷ ನರಸಿಂಹರಾಜು, ಎಸ್.ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮುನೇಶ್, ರಾಷ್ಟ್ರೀಯ ಕೇರಂ ಆಟಗಾರ ಕೆ.ರಾಜು, ಟೌನ್ ಕಾರ್ಯದರ್ಶಿ ಪ್ರಭಾಕರ್, ವಿ.ಸಿ ಶ್ರಿನಿವಾಸ್, ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.