ಮುಂಗಡಪತ್ರ ಶೀಘ್ರ : ಪಾಲಿಕೆ ನಿರ್ಧಾರ

ಮಂಗಳವಾರ, ಜೂಲೈ 23, 2019
20 °C

ಮುಂಗಡಪತ್ರ ಶೀಘ್ರ : ಪಾಲಿಕೆ ನಿರ್ಧಾರ

Published:
Updated:

ಬೆಳಗಾವಿ: ಶೀಘ್ರದಲ್ಲಿಯೇ ಹಣಕಾಸು ಸ್ಥಾಯಿ ಸಮಿತಿ, ಮುಂಗಡಪತ್ರ ಮಂಡನೆ, ಸಾಮಾನ್ಯಸಭೆ ನಡೆಸಲು ಪಾಲಿಕೆಯಲ್ಲಿ ಸೋಮವಾರ ನಡೆದ ಆಡಳಿತಾತ್ಮಕ ಸಭೆಯಲ್ಲಿ ನಿರ್ಧರಿಸಲಾಯಿತು.ಈ ತಿಂಗಳ ಅಂತ್ಯದೊಳಗೆ ಈ ಎಲ್ಲ ಸಭೆಗಳನ್ನು ನಡೆಸಲು ಮೇಯರ್ ಮಂದಾ ಬಾಳೇಕುಂದ್ರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಣಯಿಸಲಾಯಿತು. ಸಭಾ ನಾಯಕ ಸಂಭಾಜಿ ಪಾಟೀಲ ಮಾತನಾಡಿ, ನಿಗದಿತ ಸಮಯದಲ್ಲಿ ಮುಂಗಡಪತ್ರ ಮಂಡಿಸುವಲ್ಲಿ ಸ್ಥಾಯಿ ಸಮಿತಿ ವಿಫಲವಾಗಿದೆ. ಕೂಡಲೇ ಮುಂಗಡಪತ್ರ ಮಂಡನೆಗೆ ಮುಂದಾಗಬೇಕು ಎಂದು ಸಲಹೆ ಮಾಡಿದರು.`ಅಕ್ರಮ ಕಟ್ಟಡ ನಿರ್ಮಾಣ ಹಾಗೂ ಕೇಬಲ್ ಹಾಕಲು ಅನಧಿಕೃತವಾಗಿ ತೆಗ್ಗುಗಳನ್ನು ತೊಡಲಾಗುತ್ತಿದೆ. ಇದನ್ನು ತಡೆಯುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ~ ಎಂದು ಅವರು ಆರೋಪಿಸಿದರು.ಪ್ರತಿಪಕ್ಷ ನಾಯಕ ನೇತಾಜಿ ಜಾಧವ ಮಾತನಾಡಿ, ವಡಗಾವಿ ಪ್ರದೇಶದಲ್ಲಿ ನೀರು ಸರಿಯಾಗಿ ಹರಿದು ಹೋಗುವುದಿಲ್ಲ. ಅದು ರೋಗಗಳಿಗೆ ಕಾರಣವಾಗಬಹುದು ಎಂಬ ಆತಂಕ ವ್ಯಕ್ತಪಡಿಸಿದರು. ಆಡಳಿತಾತ್ಮಕ ಸಭೆ, ಪಾಲಿಕೆ ಸಾಮಾನ್ಯಸಭೆಯಲ್ಲಿ ನಿರ್ಣಯಗಳನ್ನು ಜಾರಿಗೊಳಿಸಬೇಕು ಎಂದು ಮೇಯರ್ ಮಂದಾ ಬಾಳೇಕುಂದ್ರಿ ಅಧಿಕಾರಿಗಳಿಗೆ ಸೂಚಿಸಿದರು.ಇದಕ್ಕೂ ಮೊದಲು ಸಭೆ ಆರಂಭವಾಗುತ್ತಿದ್ದಂತೆಯೇ ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷ ದೀಪಕ ವಘೇಲಾ, ಸದಸ್ಯ ಸಾಧಿಕ್ ಇನಾಂದಾರ, ಆಡಳಿತ ಪಕ್ಷದ ಸಭೆ ಕರೆದು ಚರ್ಚಿಸದೇ ಈ ಸಭೆಯನ್ನು ಕರೆಯಲಾಗಿದೆ. ಆದ್ದರಿಂದ ಈ ಸಭೆಯನ್ನು ಮುಂದೂಡಿ, ಆಡಳಿತ ಪಕ್ಷದ ಸಭೆ ಕರೆಯಬೇಕು ಎಂದು ಆಗ್ರಹಿಸಿದರು.ಸಭಾ ನಾಯಕ ಸಂಭಾಜಿ ಪಾಟೀಲ ಮಾತನಾಡಿ, ಆಡಳಿತ ಪಕ್ಷದ ಸಭೆಯನ್ನು ಮೇಯರ್ ಕರೆಯಲು ಬರವುದಿಲ್ಲ. ಇಂತಹ ಸಭೆಗಳನ್ನು ನಡೆಸುವ ವಿವೇಚನೆ ಅವರಿಗೆ ಬಿಟ್ಟದ್ದಗಾಗಿದೆ. ಶೀಘ್ರದಲ್ಲಿಯೇ ಆಡಳಿತ ಪಕ್ಷದ ಸಭೆ ನಡೆಸಲಾಗುವುದು ಎಂದು ಹೇಳಿದರು. ಇದನ್ನು ಒಪ್ಪದ ಅವರು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ನಡೆಸುತ್ತಿಲ್ಲ. ಆದ್ದರಿಂದ ಮೊದಲು ಆಡಳಿತ ಪಕ್ಷದ ಸಭೆ ನಡೆಸಬೇಕು ಎಂದು ಒತ್ತಾಯಿಸಿದರು.

 

ಈ ಕುರಿತಂತೆ ಚರ್ಚಿಸಲು ಮಧ್ಯಾಹ್ನದವರೆಗೆ ಮೇಯರ್ ಸಭೆಯನ್ನು ಮುಂದೂಡಿದರು. ಮೇಯರ್ ಸಭಾಂಗಣದಲ್ಲಿ ನಡೆದ ಚರ್ಚೆಯ ನಂತರ ಮತ್ತೆ ಮಧ್ಯಾಹ್ನ ಸಭೆ ನಡೆಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry