ಶುಕ್ರವಾರ, ಮೇ 7, 2021
26 °C

ಮುಂಗಾರು: ಕೃಷಿ ಚಟುವಟಿಕೆ ಚುರುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಗಾರು: ಕೃಷಿ ಚಟುವಟಿಕೆ ಚುರುಕು

ಹಳಿಯಾಳ: ತಾಲ್ಲೂಕಿನಾದ್ಯಂತ ಸಕಾಲಕ್ಕೆ ಮುಂಗಾರು ಮಳೆ ಪ್ರಾರಂಭವಾದ ಹಿನ್ನೆಲೆಯಲ್ಲಿ  ರೈತರು ತಮ್ಮ ಹೊಲ ಗದ್ದೆಗಳಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ.ತಾಲ್ಲೂಕಿನಾದ್ಯಂತ ಒಟ್ಟು 19,500 ಹೆಕ್ಟೇರ್ ಜಮೀನಿನಲ್ಲಿ ವಿವಿಧ ಬೆಳೆಗಳ ಬಿತ್ತನೆ ಗುರಿಯನ್ನು ಹಮ್ಮಿಕೊಂಡಿದ್ದು, ಭತ್ತ 12500 ಹೆಕ್ಟೇರ್, ಕಬ್ಬು 4000  ಹೆಕ್ಟೇರ್, ಗೋವಿನಜೋಳ 2500  ಹೆಕ್ಟೇರ್, ಬಿ.ಟಿ. ಹತ್ತಿ 500 ಹೆಕ್ಟೇರ್ ಕ್ಷೇತ್ರದಲ್ಲಿ ಬಿತ್ತನೆಗೆ ಒಳಗಾಗಲಿದೆ.ಈಗಾಗಲೇ ಈ ಎಲ್ಲ ಬೆಳೆಗಳ ಬಿತ್ತನೆ ಕಾರ್ಯ ಪ್ರಾರಂಭವಾಗಿದ್ದು, ಭತ್ತದ ಕೂರಿಗೆ ಮಾಡುತ್ತಿರುವುದು ಅಲ್ಲಲ್ಲಿ ಕಂಡು ಬರುತ್ತಿದೆ. ಕೃಷಿ ಕಾಯಕಕ್ಕೆ ಕೃಷಿ ಕೂಲಿಕಾರಕೊರತೆಯಿರುವುದರಿಂದ ಸಕಾಲಕ್ಕೆ ಮುಂಗಾರು ಬಂದರೂ ಬಿತ್ತನೆ ಕಾರ್ಯ ತಡವಾಗುತ್ತಿದೆ ಎನ್ನುತ್ತಾರೆ ರೈತರು.`ನಿಗದಿತ ಸಮಯಕ್ಕೆ ಹಾಗೂ ಕೃಷಿಗೆ ಸೂಕ್ತವಾದ ಮಳೆ ಬಿದ್ದಿದ್ದರಿಂದ  ಮುಂಬರುವ ಒಂದು ವಾರದ ವರೆಗೆ ಮಳೆಯ ಪ್ರಮಾಣ ಕಡಿಮೆಯಾದರೇ ಬಿತ್ತಿದ ಭತ್ತದ ಬೆಳೆಗಳು ಚೆನ್ನಾಗಿ ಬೆಳೆಯುತ್ತದೆ. ನಿರಂತರ ಮಳೆಯಾದರೆ ಭತ್ತದ ಪೈರಿನ ಜೊತೆಗೆ ಹುಲ್ಲು ಸಹ ಬೆಳೆಯುತ್ತಿರುವುದರಿಂದ ಬೆಳೆ ನಾಶವಾಗುವ ಸಾಧ್ಯತೆ ಇದೆ' ಎಂದು ಸುಭಾಷ ಮರೆಪ್ಪಾ ಗೌಡ ಹಾಗೂ ರೇಣುಕಾ ಗೌಡ ದಂಪತಿ ಹೇಳುತ್ತಾರೆ.ಮುಂಬರುವ ಒಂದು ವಾರದಲ್ಲಿ ಸಂಪೂರ್ಣ ಬಿತ್ತನೆ ಕಾರ್ಯ ಮುಕ್ತಾಯವಾಗಲಿದೆ. ಕೆಲವೊಂದು ಗದ್ದೆಗಳಲ್ಲಿ ಮೇ ತಿಂಗಳಿನಲ್ಲಿ ಬಿದ್ದ ಅಡ್ಡ ಮಳೆಯ ನಂತರ ರೈತರು ಗದ್ದೆಗಳನ್ನು ಹದ ಮಾಡಿ ಭತ್ತದ ಬೀಜವನ್ನು ಬಿತ್ತಿದ್ದರಿಂದ ಪೈರು ಸಹ ಚೆನ್ನಾಗಿ ಬಂದಿದೆ.ತಾಲ್ಲೂಕು ಕೃಷಿ ಇಲಾಖೆಯ ಮಾಹಿತಿಯ ಪ್ರಕಾರ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಯಡೋಗಾ ಹೋಬಳಿ ಮಟ್ಟದಲ್ಲಿ ಭತ್ತ ಹಾಗೂ ಗೋವಿನಜೋಳ ಬೆಳೆಯುವ ಬಿತ್ತನೆ ಬೀಜವನ್ನು ರಿಯಾಯಿತಿ ದರದಲ್ಲಿ  252 ಕ್ವಿಂಟಲ್ ವಿವಿಧ ತಳಿಯ ಅಧಿಕ ಇಳುವರಿಯ ಭತ್ತ ಹಾಗೂ 727 ಕ್ವಿಂಟಲ್ ವಿವಿಧ ತಳಿಗಳ ಗೋವಿನಜೊಳ ಬೀಜಗಳನ್ನು ವಿತರಿಸಲಾಗಿದೆ. ಬೀಜಗಳ ದಾಸ್ತಾನು ಸಹ ಸಾಕಷ್ಟು ಪ್ರಮಾಣದಲ್ಲಿದೆ.ಹತ್ತಿ ಬೀಜಗಳನ್ನು ಅಧಿಕೃತ ಪರವಾನಿಗೆ ಪಡೆದ ಬೀಜ ಮಾರಾಟಗಾರರ ವ್ಯವಸ್ಥೆ  ವಿವಿಧ ತಳಿಗಳ ಹತ್ತಿ ಬೀಜಗಳು ಪ್ರತಿ 450 ಗ್ರಾಂ ನಂತೆ ಒಟ್ಟು 6946 ಪ್ಯಾಕೇಟ್ ಹತ್ತಿ ಬೀಜವನ್ನು ವಿತರಿಸಲಾಗಿದೆ. ಸಿಂಗಲ್ ಬಿಟಿ ಹತ್ತಿ ಬೀಜ ಪ್ರತಿ ಪ್ಯಾಕೇಟ್‌ಗೆ ದರ ್ಙ 830, ಡಬಲ್ ಬೀಟಿ ಹತ್ತಿ ಬೀಜಕ್ಕೆ ಪ್ರತಿ ಪ್ಯಾಕೇಟ್‌ಗೆ ್ಙ 930 ಗರಿಷ್ಠ ಮಾರಾಟ ಬೆಲೆಯನ್ನು ನಿಗದಿ ಪಡಿಸಿರುತ್ತಾರೆ.ಯಾವುದೇ ಮಾರಾಟಗಾರರು ಹೆಚ್ಚಿನ ಬೆಲೆ ಕೆಳಿದರೇ ಕೂಡಲೇ ಕೃಷಿ ಇಲಾಖೆಯ ಗಮನಕ್ಕೆ ತರಲು ಸೂಚಿಸಿದ್ದಾರೆ. ರಸ ಗೊಬ್ಬರದ ದಾಸ್ತಾನು ಸಹ ಸಾಕಷ್ಟು ಪ್ರಮಾಣದಲ್ಲಿ ಇರುವುದಾಗಿ ಇಲಾಖೆ ಮೂಲ ತಿಳಿಸಿದೆ.ಕೃಷಿ ಸಲಹೆ

`ತಾಲ್ಲೂಕಿನ ಗದ್ದೆಗಳಲ್ಲಿ ಮಣ್ಣು ಹುಳಿಯಾಗಿದ್ದು, ಹೆಕ್ಟೇರ್‌ಗೆ ಕನಿಷ್ಠ 200 ಕೆ.ಜಿ ಕೃಷಿ ಸುಣ್ಣ ಬಳಸಬೇಕು ಹಾಗೂ ಸತುವಿನ ಸಲ್ಫೇಟ್, ಬೋರಾನ್ ಲಘು ಪೋಷಕಾಂಶಗಳ ಕೊರತೆ ಕಂಡು ಬಂದಿದ್ದು, ಅದಕ್ಕಾಗಿ ಹೆಕ್ಟೇರ್‌ಗೆ 10 ಕೆ.ಜಿ.  ಸತುವಿನ ಸಲ್ಫೇಟ್ ಹಾಗೂ 5 ಕೆ.ಜಿ ಬೋರಾನ್ ಲಘು ಪೋಷಕಾಂಶಗಳನ್ನು ಬಳಸಬೇಕು' ಎಂದು ಸಹಾಯಕ ಕೃಷಿ ನಿರ್ದೇಶಕರು ರೈತರಿಗೆ ಸಲಹೆ ನೀಡಿದ್ದಾರೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.