ಗುರುವಾರ , ಮೇ 26, 2022
23 °C

ಮುಂಗಾರು ಚುರುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನೈರುತ್ಯ ಮುಂಗಾರು ಚುರುಕುಗೊಂಡಿದ್ದರಿಂದ ಮುಂದಿನ 48 ಗಂಟೆಗಳಲ್ಲಿ ರಾಜ್ಯದ ಒಳನಾಡಿನ ಪ್ರದೇಶಗಳಲ್ಲಿ ಮಳೆಯಾಗಲಿದೆ. ಬುಧವಾರ ಬೆಳಿಗ್ಗೆ 8.30 ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದ ಕರಾವಳಿಯಲ್ಲಿ ಮುಂಗಾರು ಚುರುಕುಗೊಂಡಿದೆ. ಒಳನಾಡಿನ ಕೆಲವು ಪ್ರದೇಶಗಳಲ್ಲಿ ಮಳೆಯಾಗಿದೆ.



ಕುಂದಾಪುರ 15 ಸೆಂ.ಮೀ, ಮಂಗಳೂರು ವಿಮಾನ ನಿಲ್ದಾಣ 13, ಕಾರ್ಕಳ 10, ಮೂಡುಬಿದರಿ, ಪಣಂಬೂರು, ಶಿರಾಲಿ 9, ಕೋಟ, ಕೊಲ್ಲೂರು, ಉಡುಪಿ, ಗೋಕರ್ಣದಲ್ಲಿ 7 ಸೆಂ.ಮೀ. ಮಳೆಯಾಗಿದೆ. ಮುಲ್ಕಿ, ಭಟ್ಕಳ 6, ಮಾಣಿ, ಪುತ್ತೂರು, ಉಪ್ಪಿನಂಗಡಿ, ಸಿದ್ದಾಪುರ, ಆಗುಂಬೆ 5, ಬಂಟ್ವಾಳ, ಮಂಗಳೂರು, ಬೆಳ್ತಂಗಡಿ, ಧರ್ಮಸ್ಥಳ,

 

ಹೊನ್ನಾವರ 4, ನಲ್ವತ್ತವಾಡ, ಸಾಗರ, ತೀರ್ಥಹಳ್ಳಿ, ಜಯಪುರ, ಕೊಟ್ಟಿಗೆಹಾರ, ಚಿಕ್ಕಮಗಳೂರು 3, ಕುಮುಟಾ, ಅಂಕೋಲಾ, ಕದ್ರ, ಮಂಚೀಕೆರೆ, ಕಾರವಾರ, ಲಿಂಗಸುಗೂರು, ಲಿಂಗನಮಕ್ಕಿ, ತಾಳಗುಪ್ಪ, ಹುಂಚದಕಟ್ಟೆ, ಹೊಸನಗರ, ಶೃಂಗೇರಿ, ಕಡೂರು 2, ಸುಬ್ರಹ್ಮಣ್ಯ, ಸುಳ್ಯ, ಬನವಾಸಿ, ಯಲ್ಲಾಪುರ, ಹಾನಗಲ್ಲು, ಹಿರೇಕೆರೂರು, ಹಂಸಭಾವಿ, ಕೊಪ್ಪಳ, ನಾರಾಯಣಪುರ, ಭಾಗಮಂಡಲ, ವಿರಾಜಪೇಟೆ, ತ್ಯಾಗರ್ತಿ, ಸೊರಬ, ಆನವಟ್ಟಿ, ಮೂಡಿಗೆರೆ, ಕೊಪ್ಪ, ಸಕಲೇಶಪುರ, ಹರಿಹರದಲ್ಲಿ ತಲಾ 1 ಸೆಂ.ಮೀ. ಮಳೆಯಾಗಿದೆ.



ಮುನ್ಸೂಚನೆ: ಮುಂದಿನ 48 ಗಂಟೆಯಲ್ಲಿ ಕರಾವಳಿ ಪ್ರದೇಶ ಹಾಗೂ ದಕ್ಷಿಣ ಒಳನಾಡಿನ ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಹಾಸನ ಸೇರಿದಂತೆ ಪಶ್ಚಿಮಘಟ್ಟದ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಹಲವು ಪ್ರದೇಶಗಳಲ್ಲಿ ಮಳೆಯಾಗಲಿದೆ.



ಮೀನುಗಾರರಿಗೆ ಮುನ್ಸೂಚನೆ: ಪಶ್ಚಿಮ ಮತ್ತು ನೈರುತ್ಯ ಭಾಗದಿಂದ 45 ರಿಂದ 55 ಕಿ.ಮೀ. ವೇಗದಲ್ಲಿ ಭಾರಿ ಗಾಳಿ ಬೀಸುವುದರಿಂದ ಮುಂದಿನ 48 ಗಂಟೆಗಳ ಕಾಲ ಮೀನುಗಾರರು ಸಮುದ್ರಕ್ಕೆ ಇಳಿಯಬಾರದೆಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.