ಸೋಮವಾರ, ಮೇ 10, 2021
26 °C

ಮುಂಗಾರು ಬೆಳೆ ವಿಮಾ ಯೋಜನೆ ಜಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ:  ಪ್ರಸಕ್ತ 2013 ನೇ ಸಾಲಿನ ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ ರಾಷ್ಟ್ರೀಯ ಕೃಷಿ ವಿಮಾ ಯೋಜನೆ ಜಾರಿಯಲ್ಲಿದ್ದು, ಹೋಬಳಿ ಮಟ್ಟಕ್ಕೆ ನಿರ್ದೇಶಿತ ಬೆಳೆಗಳು  ಮುಂಗಾರು ಹಂಗಾಮಿಗಾಗಿ ಭತ್ತ ( ನೀರಾವರಿ), ಭತ್ತ (ಮಳೆ ಆಶ್ರಿತ), ಜೋಳ (ನೀರಾವರಿ), ಜೋಳ (ಮಳೆ ಆಶ್ರಿತ), ಮುಸುಕಿನ ಜೋಳ ( ನೀರಾವರಿ), ಮುಸುಕಿನ ಜೋಳ (ಮಳೆ ಆಶ್ರಿತ), ಸಜ್ಜೆ (ನೀರಾವರಿ), ಸಜ್ಜೆ (ಮಳೆ ಆಶ್ರಿತ), ನವಣೆ (ಮಳೆ ಆಶ್ರಿತ), ತೊಗರಿ (ಮಳೆ ಆಶ್ರಿತ) , ಹೆಸರು (ಮಳೆ ಆಶ್ರಿತ),  ಹುರುಳಿ (ಮಳೆ ಆಶ್ರಿತ),  ಸೂರ್ಯಕಾಂತಿ ( ನೀರಾವರಿ)  ಸೂರ್ಯಕಾಂತಿ (ಮಳೆ ಆಶ್ರಿತ), ಎಳ್ಳು (ಮಳೆ ಆಶ್ರಿತ), ನೆಲಗಡಲೆ (ಶೇಂಗಾ) (ನೀರಾವರಿ), ನೆಲಗಡಲೆ (ಶೇಂಗಾ) (ಮಳೆ ಆಶ್ರಿತ) ನಿಗದಿಪಡಿಸಲಾಗಿದೆ.2013 ರ ಮುಂಗಾರು ಹಂಗಾಮಿಗಾಗಿ ಪ್ರಾಯೋಗಿಕ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಜಾರಿಯಾಗಿದ್ದು , ಹೋಬಳಿ ಮಟ್ಟಕ್ಕೆ ನಿರ್ದೇಶಿತ  ಬೆಳೆಗಳು ಮುಸುಕಿನ ಜೋಳ (ಮಳೆ ಆಶ್ರಿತ), ಜೋಳ ( ಮಳೆ ಆಶ್ರಿತ), ಸೂರ್ಯಕಾಂತಿ (ಮಳೆ ಆಶ್ರಿತ), ತೊಗರಿ (ಮಳೆ ಆಶ್ರಿತ), ಹೆಸರು (ಮಳೆ ಆಶ್ರಿತ) ಹಾಗೂ ನೆಲಗಡಲೆ (ಶೇಂಗಾ) (ಮಳೆ ಆಶ್ರಿತ),  ಹತ್ತಿ (ನೀರಾವರಿ) , ಹತ್ತಿ (ಮಳೆ ಆಶ್ರಿತ),  ಮೆಣಸಿನಕಾಯಿ (ಮಳೆ ಆಶ್ರಿತ), ಮೆಣಸಿನಕಾಯಿ (ನೀರಾವರಿ) ಈರುಳ್ಳಿ (ನೀರಾವರಿ) , ಈರುಳ್ಳಿ (ಮಳೆ ಆಶ್ರಿತ)  ಈ ಯೋಜನೆಯು ಸಾಲ ಪಡೆದ ರೈತರಿಗೆ ಕಡ್ಡಾಯವಾಗಿರುತ್ತದೆ.2013 ರ ಮುಂಗಾರು ಹಂಗಾಮಿನಲ್ಲಿ ಹೋಬಳಿವಾರು ಆಯ್ದ ಬೆಳೆಗಳಿಗೆ ರಾಷ್ಟ್ರೀಯ ಕೃಷಿ ವಿಮಾ ಯೋಜನೆಗೆ ಮತ್ತು ಪ್ರಾಯೋಗಿಕ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಗಳೆರಡನ್ನೂ ಅನುಷ್ಟಾನಗೊಳಿಸಲಾಗುತ್ತಿದೆ. ಬೆಳೆ ಸಾಲ ಪಡೆಯದ ರೈತರು ರಾಷ್ಟ್ರೀಯ ಕೃಷಿ ವಿಮಾ ಯೋಜನೆಯಡಿಯಲ್ಲಿ ಅಥವಾ ಪ್ರಾಯೋಗಿಕ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಇವುಗಳಲ್ಲಿ ಯಾವುದಾದರೊಂದು  ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಆದರೆ ಪ್ರಾಯೋಗಿಕ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿಯಲ್ಲಿ ಆಯ್ಕೆಯಾದ ಕ್ಷೇತ್ರ ಮತ್ತು ಬೆಳೆಗಳಿಗೆ ಬೆಳೆ ಸಾಲ ಪಡೆದ, ಪಡೆಯುವ ರೈತರು ಕಡ್ಡಾಯವಾಗಿ ಪಾಲ್ಗೊಳ್ಳಬೇಕಾಗಿದ್ದು, ಇವರು ವಿಮಾ ಯೋಜನೆಯಡಿ ಭಾಗವಹಿಸುವಂತಿಲ್ಲ.ಪ್ರಾಯೋಗಿಕ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಲ್ಲಿ  ಬೆಳೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರು ಭಾಗವಹಿಸಲು ಜುಲೈ 31 ಕೊನೆ ದಿನ.ಕೃಷಿ ವಿಮಾ ಯೋಜನೆಗೆ ಬೆಳೆ ಸಾಲ ಪಡೆಯದ ರೈತರು ಬೆಳೆ ಬಿತ್ತಿದ, ನಾಟಿ ಮಾಡಿದ ನಂತರ 30 ದಿನದೊಳಗಿನ  ಬೆಳೆಗಳಿಗೆ ಮಾತ್ರ ವಿಮಾ ಕಂತು ಪಾವತಿಸಿ ಅರ್ಜಿ ಸಲ್ಲಿಸತಕ್ಕದ್ದು ಹಾಗೂ ನೋಂದಾಯಿಸುವ ಸಮಯದಲ್ಲಿ ಬೆಳೆಯು ಆರೋಗ್ಯಕರವಾಗಿರಬೇಕು.ಯೋಜನೆಗೆ ಒಳಪಡುವ ವಿವಿಧ ಬೆಳೆಗಳಿಗೆ ಬೆಳೆ ಸಾಲ ಪಡೆಯದ ರೈತರು ಬ್ಯಾಂಕ್‌ಗಳಿಗೆ ಘೋಷಣೆ ಸಲ್ಲಿಸಲು ನಿಗದಿಪಡಿಸಿರುವ ಅಂತಿಮ ದಿನ ಆ.31ವಿಮಾ ಯೋಜನೆಯಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವಿಮಾ ಕಂತಿನ ಮೇಲೆ ಶೇ 10 ರ ಸಹಾಯಧನ ಇರುವುದು. 

ಮಾಹಿತಿಗೆ ಸಮೀಪದ ಬ್ಯಾಂಕ್ ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಇಲ್ಲವೆ ಸಮೀಪದ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಲು ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕರು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.