ಮಂಗಳವಾರ, ಮೇ 11, 2021
21 °C

ಮುಂಗಾರು ಮಳೆಯ ನಿರೀಕ್ಷೆಯಲ್ಲಿ ರೈತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಹಾಪುರ: ಮುಂಗಾರು ಬಿತ್ತನೆಗಾಗಿ ರೈತ ಸಜ್ಜುಗೊಂಡಿದ್ದಾನೆ. ನಿರೀಕ್ಷಿತ ಮಟ್ಟದಲ್ಲಿ ಮಳೆ ಬಂದಿಲ್ಲ. ತಾಲ್ಲೂಕಿನಲ್ಲಿ ಇಲ್ಲಿಯವರೆಗೂ ಸರಾಸರಿ ಮಳೆ ಪ್ರಮಾಣ 145ಮಿ.ಮೀ ಮಳೆ ಆಗಬೇಕಾಗಿತ್ತು.ಆದರೆ ಕೇವಲ 73.3ಮಿ.ಮೀ ಆಗಿದ್ದು, ಇನ್ನೂ ಶೇ 50ರಷ್ಟು ಮಳೆಯ ನಿರೀಕ್ಷೆಯಲ್ಲಿದ್ದೇವೆ ಎಂದು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಕೆ.ಎಂ.ಹೈಬತ್ತಿ ತಿಳಿಸಿದ್ದಾರೆ. ಕಳೆದ ಬುಧವಾರ (ಜೂ.5)ರಂದು ಮಳೆ ಮಾಪದಲ್ಲಿ ದಾಖಲಾತಿಯಿಂತೆ  ತಾಲ್ಲೂಕಿನ ಗೋಗಿಯಲ್ಲಿ 18 ಮಿ.ಮೀ, ದೋರನಹಳ್ಳಿ 4, ಶಹಾಪುರ 31.2,ಹತ್ತಿಗುಡೂರ 15, ಹೈಯ್ಯಾಳ 13, ಭೀಮರಾಯನಗುಡಿ 18.5, ವಡಿಗೇರಾ 17 ಮಿ.ಮೀಟರ್ ಮಳೆಯಾಗಿದೆ. ಇನ್ನೂ ಬಿತ್ತನೆಗೆ ಬೇಕಾಗುವಷ್ಟು ಮಳೆಯಾಗಿಲ್ಲ. ತಾಲ್ಲೂಕಿನಲ್ಲಿ ಬಿತ್ತನೆ ಕಾರ್ಯ ಶುರುವಾಗಿಲ್ಲವೆಂದು ಸಹಾಯಕ ಕೃಷಿ ನಿರ್ದೇಶಕರು ಹೇಳಿದ್ದಾರೆ.ತಾಲ್ಲೂಕಿನಲ್ಲಿ ಒಟ್ಟು ಮುಂಗಾರು ಬಿತ್ತನೆಗಾಗಿ 98,785 ಹೆಕ್ಟೇರ್ ಕ್ಷೇತ್ರದ ಗುರಿಯನ್ನು ಹೊಂದಲಾಗಿದ್ದು, ಅದರಲ್ಲಿ 11,000 ಹೆಕ್ಟೇರ್ ಹೆಸರು, 27,400 ತೊಗರಿ, 29,800 ಹತ್ತಿ, ಸಜ್ಜೆ 5,500 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ. ಕಳೆದ (ಜನೇವರಿಯಿಂದ ಜೂ.6ವರೆಗೆ) ತಾಲ್ಲೂಕಿನ ವಿವಿಧ ಹೋಬಳಿ ವ್ಯಾಪ್ತಿಯಲ್ಲಿ ಮಳೆ ಮಾಪನದಲ್ಲಿ ದಾಖಲಾಗಿರುವ ವಿವರ ಇಂತಿದೆ.

ಗೋಗಿ 91.2 ಮಿ.ಮೀ, ದೋರನಹಳ್ಳಿ 64, ಹತ್ತಿಗುಡೂರ 32, ಶಹಾಪುರ 100.3, ಹೈಯ್ಯಾಳ 51.5, ಭೀಮರಾಯನಗುಡಿ 128, ವಡಿಗೇರಾ 41 ಮಿ.ಮೀಟರ್ ಮಾತ್ರ ಮಳೆಯಾಗಿದೆ ಎಂದು ಅವರು ವಿವರಿಸಿದ್ದಾರೆ. ಬಿತ್ತನೆಗೆ ಸಾಕಾಗುಷ್ಟು ಮಳೆಯಾಗಿಲ್ಲವಾಗಿದ್ದರಿಂದ ರೈತ ಸಂಪರ್ಕ ಕೇಂದ್ರದ ಕಡೆ ರೈತರು ಇನ್ನೂ ಮುಖ ಮಾಡಿಲ್ಲ. ಅವಶ್ಯಕವಾದ ಬೀಜವನ್ನು ಸಂಗ್ರಹಿಸಿಡಲಾಗಿದೆ. ಬೀಜದ ಯಾವುದೇ ಕೊರತೆಯಿಲ್ಲವಾಗಿದೆ ಎಂದು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.