ಸೋಮವಾರ, ಮಾರ್ಚ್ 8, 2021
22 °C

ಮುಂಚೂಣಿಯಲ್ಲಿ ಚೀನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಚೂಣಿಯಲ್ಲಿ ಚೀನಾ

ನವದೆಹಲಿ (ಪಿಟಿಐ): ‘ಸಾಗರೋತ್ತರ ಬಂಡವಾಳ ಹೂಡಿಕೆಯಲ್ಲಿ ಚೀನಾ ಮುಂಚೂಣಿಯಲ್ಲಿ ಇದೆ’ ಎಂದು ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ ಪನಗರಿಯಾ ಅವರು ಹೇಳಿದ್ದಾರೆ.‘ವಿದೇಶಿ ಹೂಡಿಕೆಗೆ ಸಂಬಂಧಿಸಿದಂತೆ ಭಾರತದ ದ್ವಿಪಕ್ಷೀಯ ಹೂಡಿಕೆ ಒಪ್ಪಂದಗಳು ನಿರ್ಬಂಧಿತ ಸ್ವರೂಪದಲ್ಲಿ ಇವೆ. ವಿದೇಶಿ ಬಂಡವಾಳ ಹೂಡಿಕೆ ವಿಷಯದಲ್ಲಿ ಮುಂಚೂಣಿಯಲ್ಲಿ ಇರುವ ಇದಕ್ಕೆ ಸಂಬಂಧಿಸಿದ ಚೀನಾ ನಿಯಮಗಳನ್ನು  ನಿಗದಿ ಮಾಡುತ್ತಿದೆ’ ಎಂದು ಪನಗರಿಯಾ ಅಭಿಪ್ರಾಯಪಟ್ಟಿದ್ದಾರೆ.  ಇಲ್ಲಿ ಮಂಗಳವಾರ ನಡೆದ ‘ಜಿ–20 ಸಮ್ಮೇಳನದಲ್ಲಿ ಅವರು ಮಾತನಾಡುತ್ತಿದ್ದರು.‘ಚೀನಾ ಸರ್ಕಾರ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ಚೀನಾದ ಹೂಡಿಕೆದಾರರು 150 ದೇಶಗಳಲ್ಲಿ 3,434 ಉದ್ಯಮಗಳಲ್ಲಿ ಹಣ ತೊಡಗಿಸಿದ್ದಾರೆ. ಅದರ ಸಾಗರೋತ್ತರ ಹೂಡಿಕೆ ಪ್ರಮಾಣವು ₹ 4  ಲಕ್ಷ ಕೋಟಿಗಳಷ್ಟಿದೆ.ಭಾರತವು ದ್ವಿಪಕ್ಷೀಯ ಹೂಡಿಕೆ ಒಪ್ಪಂದಗಳನ್ನು ಕಾರ್ಯಗತಗೊಳಿಸಲು ಹೆಚ್ಚು ಆಸಕ್ತಿ ವಹಿಸುತ್ತಿಲ್ಲ ಎಂದು ಅಮೆರಿಕವು ಇತ್ತೀಚಿಗೆ ಟೀಕಿಸಿತ್ತು. ಭಾರತದಲ್ಲಿನ ವಿದೇಶಿ ಹೂಡಿಕೆ ಮತ್ತು ವಿದೇಶಗಳಲ್ಲಿನ ಭಾರತದ ಹೂಡಿಕೆ ರಕ್ಷಣೆಗೆ ಆದ್ಯತೆ ನೀಡುವ ದ್ವಿಪಕ್ಷೀಯ ಹೂಡಿಕೆ ಒಪ್ಪಂದದ ಪರಿಷ್ಕೃತ ಮಾದರಿಗೆ ಕೇಂದ್ರ ಸಚಿವ ಸಂಪುಟ ಡಿಸೆಂಬರ್‌ನಲ್ಲಿ ಅನುಮೋದನೆ ನೀಡಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.