ಭಾನುವಾರ, ನವೆಂಬರ್ 17, 2019
29 °C

ಮುಂಡರಗಿ ಇತಿಹಾಸ ಮೆಲುಕು ಹಾಕಿದ ಉತ್ಸವ

Published:
Updated:

ಮುಂಡರಗಿ: ಶುಕ್ರವಾರ ಇಲ್ಲಿ ಆರಂಭ ಗೊಂಡ `ಮುಂಡರಗಿ ಉತ್ಸವ~ ಪಟ್ಟಣದ ಇತಿಹಾಸವನ್ನು ಮೆಲುಕು ಹಾಕುವಂತೆ ಮಾಡಿತು. ಉತ್ಸವಕ್ಕೆ ಚಾಲನೆ ನೀಡಿದ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ  `ಮುಂಡರಗಿಯು ಶ್ರೀನಿವಾಸ ದೇಸಾಯಿ, ವೀರಪ್ಪ ದೇಸಾಯಿ, ಭೀಮರಾಯರಂತಹ ಕಲಿಗಳ ನಾಡು. ಇಂಥವರ ಹೋರಾಟವನ್ನು ಅಜರಾಮರಗೊಳಿಸುವ, ಪಟ್ಟಣದ ಎರಡು ಶತಮಾನಗಳ ಇತಿಹಾಸವನ್ನು ಬಿಂಬಿಸುವ ದಿಸೆಯಲ್ಲಿ ಈ ಉತ್ಸವವನ್ನು ಸ್ಥಳೀಯರು ಕೂಡಿ ಆಯೋಜಿಸಿದ್ದಾರೆ. ಇದಕ್ಕೆ ಎಲ್ಲ ರೀತಿಯ ನೆರವು ನೀಡಲು ಸಿದ್ಧ~ ಎಂದರು.ಇದೇ ಮೊದಲ ಬಾರಿಗೆ ಆಯೋಜಿಸ ಲಾಗಿರುವ `ಮುಂಡರಗಿ ಉತ್ಸವ~ವನ್ನು ಲಕ್ಕುಂಡಿ ಮಾದರಿ ಉತ್ಸವವನ್ನಾಗಿ ಆಚರಿಸಲು ಸರ್ಕಾರದ ಮಟ್ಟದಲ್ಲಿ ಯತ್ನಿಸಲಾಗುವುದು ಎಂದರು.ಗದಗ ಜಿಲ್ಲೆಗೆ ಹಿಮಾಲಯದಂತೆ ಇರುವ ಕಪ್ಪತ್ತಗುಡ್ಡದ ರಕ್ಷಣೆಗಾಗಿ ಎಲ್ಲರೂ ಕೂಡಿ ಶ್ರಮಿಸಬೇಕಿದೆ ಎಂದ ಸಚಿವರು, ಈ ಕುರಿತು ಶೀಘ್ರದಲ್ಲೇ ಹೊಸ ಯೋಜನೆಯೊಂದನ್ನು ರೂಪಿಸ ಲಾಗುವುದು ಎಂದರು. ಗದುಗಿನ ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಹಾಗೂ ಮುಂಡರಗಿಯ ಡಾ. ಅನ್ನ ದಾನೀಶ್ವರ ಸ್ವಾಮೀಜಿ ಈ ಭಾಗದಲ್ಲಿ ಶೈಕ್ಷಣಿಕ, ಸಾಮಾಜಿಕ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ ಎಂದು ಅವರು ಬಣ್ಣಿಸಿದರು.

 

ಬಿಜೆಪಿ ಸರ್ಕಾರ ವಿವಿಧ ಕ್ರಾಂತಿಕಾರಿ ಯೋಜನೆಗಳನ್ನು ಹಮ್ಮಿ ಕೊಳ್ಳುತ್ತಿದೆ. ಸ್ತ್ರೀ ಶಕ್ತಿಯ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದರು. ಗದಗದಲ್ಲಿ ಕೃಷಿ ಮಹಾವಿದ್ಯಾಲಯ ಸ್ಥಾಪನೆಗೆ ಸರ್ಕಾರ ಒಪ್ಪಿಗೆ ನೀಡಿದ್ದು. ಈ ಕುರಿತು ಜನಪ್ರತಿನಿಧಿಗಳು ಹಾಗೂ ಮುಖಂಡರೊಡನೆ ಚರ್ಚಿಸಿ ಆದಷ್ಟು ಶೀಘ್ರ ಸ್ಥಳ ಪರಿಶೀಲನೆ ನಡೆಸಲಾಗು ವುದು ಎಂದರು. ಸ್ಮರಣ ಸಂಚಿಕೆ ಬಿಡುಗಡೆ: ಉತ್ಸವದ ಅಂಗವಾಗಿ ಹೊರತರಲಾದ ಸ್ಮರಣ ಸಂಚಿಕೆಯನ್ನು ಮಾಜಿ ಸಚಿವ ಎಚ್.ಕೆ. ಪಾಟೀಲ ಬಿಡುಗಡೆ ಮಾಡಿದರು. ಈ ಸಂದರ್ಭ ಮಾತನಾಡಿದ ಅವರು `ಮುಂಡರಗಿಯ ಈ ಉತ್ಸವ ದೇಶದ ಇತಿಹಾಸ, ಐಕ್ಯತೆಯನ್ನು ಮೆಲುಕು ಹಾಕುವಂತಹ ಉತ್ಸವವಾಗಿ

ಆಯೋಜಿತವಾಗಿರುವುದು ಹೆಮ್ಮೆಯ ಸಂಗತಿ. ಜನರೇ ಈ ಉತ್ಸವವನ್ನು ಸ್ವಯಂಪ್ರೇರಣೆಯಿಂದ ಆಯೋಜಿಸಿರು ವುದು ಖುಷಿಯ ವಿಚಾರ ಎಂದರು.ರಾಜಧಾನಿಯಿಂದ ದೂರವಿರುವ ಇಂತಹ ಪ್ರದೇಶಗಳ ಇತಿಹಾಸ, ಸಂಪನ್ಮೂಲ ಕುರಿತು ಸರ್ಕಾರ, ಜನಪ್ರತಿನಿಧಿ ಹಾಗೂ ಮಾಧ್ಯಮಗಳಿಗೆ ಆಸಕ್ತಿ ಕಡಿಮೆ ಎಂದು ಅಭಿಪ್ರಾಯಪಟ್ಟ ಪಾಟೀಲ, ಇಲ್ಲಿನ ಮಂದಿ ತಮ್ಮ ಇತಿಹಾಸದ ಕುರಿತು ಹೆಮ್ಮೆ ಪಡಬೇಕು ಎಂದರು. ಮುಂಡರಗಿ ಭೀಮರಾಯರ ಹೋರಾಟ ಸ್ಮರಿಸಿದರು.ಜಿಲ್ಲೆಯಲ್ಲಿ ಸಂಪನ್ಮೂಲದ ದೃಷ್ಟಿ ಯಿಂದ ಶ್ರೀಮಂತವಾದ ಮುಂಡರಗಿಯ ಜನರ ಆರ್ಥಿಕ ಪರಿಸ್ಥಿತಿ ಸುಧಾರಣೆ ದಿಸೆಯಲ್ಲಿ ಸರ್ಕಾರ ಕಾರ್ಯಕ್ರಮ ರೂಪಿಸಬೇಕು. ಇಲ್ಲಿನ ಸಂಪನ್ಮೂಲ ಗಳನ್ನು ಸದುಪಯೋಗ ಪಡಿಸಿಕೊಳ್ಳ ಬೇಕು ಎಂದರು.ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಶಿವರಾಜ ಸಜ್ಜನರ, ಶಾಸಕ ರಾಮಣ್ಣ ಲಮಾಣಿ, ಕಳಕಪ್ಪ ಬಂಡಿ ಹಾಗೂ ಇತರರು ಮಾತನಾಡಿದರು.ಮುಂಡರಗಿ ಉತ್ಸವ ಸಮಿತಿ ಅಧ್ಯಕ್ಷ ವೈ. ಎನ್. ಗೌಡರ ಮಾತನಾಡಿ, ದೇಶದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ವೇಳೆ ಇಲ್ಲಿನ 127  ರೈತ ಸಿಪಾಯಿಗಳು ವೀರ ಮರಣ ಅಪ್ಪಿದ್ದಾರೆ. ಅವರ ಸಂಸ್ಮರಣೆ ಗಾಗಿ ಈ ಉತ್ಸವ ಆಯೋಜಿಸ ಲಾಗಿದೆ ಎಂದು ತಿಳಿಸಿದರು. ಕೃಷಿ ಮಳಿಗೆ ಉದ್ಘಾಟನೆ: ಉತ್ಸವದ ಅಂಗವಾಗಿ ಪಟ್ಟಣದ ಪುರಭವನ ಆವರಣದಲ್ಲಿ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಕೃಷಿ ಮಳಿಗೆ ಹಾಗೂ ಸ್ತ್ರೀಶಕ್ತಿ ಗುಂಪುಗಳ ಮಾರಾಟ ಮಳಿಗೆಗಳನ್ನು ತೆರೆಯಲಾಗಿದ್ದು, ಜಿಲ್ಲಾ ಪಂಚಾಯಿತಿ ಸದಸ್ಯೆ ಕಸ್ತೂರೆವ್ವ ಧೀರನಗೌಡ ಪಾಟೀಲ ಈ ಮಳಿಗೆಗಳನ್ನು ಉದ್ಘಾಟಿಸಿದರು.ಗದುಗಿನ ತೋಂಟದ ಡಾ. ಸಿದ್ಧಲಿಂಗ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಜಿ.ಪಂ. ಉಪಾಧ್ಯಕ್ಷ ಬೀರಪ್ಪ ಬಂಡಿ. ಮುಂಡರಗಿ ತಾ.ಪಂ. ಅಧ್ಯಕ್ಷೆ ಅಕ್ಕಮಹಾದೇವಿ ಗಿಡ್ಡಪ್ಪ ಹಾರೋಗೇರಿ, ಪುರಸಭೆ ಅಧ್ಯಕ್ಷೆ ರಿಹಾನ ಬೇಗಂ ನಬಿಸಾಬ ಕೆಲೂರ,  ಪತ್ರಕರ್ತ ಗಂಗಾಧರ ಕುಷ್ಟಗಿ, ಎಪಿಎಂಸಿ ಅಧ್ಯಕ್ಷ ಶಿವಕುಮಾರ ಪಾಟೀಲ, ಕೆ. ಆರ್. ಬೆಲ್ಲದ ಕಾಲೇಜು ಪ್ರಾಚಾರ್ಯ ಎಸ್.ಬಿ.ಕೆ. ಗೌಡರ, ವಿರೋಧ ಪಕ್ಷ ನಾಯಕ ಹೇಮಗಿರೀಶ ಹಾವಿನಾಳ, ತಹಸೀಲದಾರ ರಮೇಶ ಕೋನರಡ್ಡಿ, ಹೇಮಂತಗೌಡ ಪಾಟೀಲ  ಪಾಲ್ಗೊಂಡಿದ್ದರು. ಪುರಸಭೆ ಅಧ್ಯಕ್ಷ ಕಾಂತರಾಜ ಹಿರೇಮಠ ಸ್ವಾಗತಿಸಿದರು. ಮಹಿಳಾ ಮಂಡಳ ಸದಸ್ಯೆಯರು ಕನ್ನಡ ಗೀತೆ ಹಾಡಿದರು. ಪ್ರೊ. ಆರ್.ಎಲ್. ಪೊಲೀಸ ಪಾಟೀಲ ನಿರೂಪಿಸಿ ದರು. ರಾಮಕೃಷ್ಣ ದೊಡ್ಡಮನಿ ವಂದಿಸಿದರು.ಉತ್ತಮ ಪ್ರತಿಕ್ರಿಯೆ: `ಮುಂಡರಗಿ ಉತ್ಸವ~ಕ್ಕೆ ಜನರಿಂದ ಉತ್ತಮ ಪ್ರತಿ ಕ್ರಿಯೆ ವ್ಯಕ್ತವಾಯಿತು. ಮಳೆಯ ನಡುವೆಯೂ ಸಭಾಂಗಣ ಬಹುತೇಕ ಭರ್ತಿಯಾಗಿ ಟ್ಟಣದಲ್ಲಿ ಹಬ್ಬದ ಕಳೆ ಮನೆ ಮಾಡಿತ್ತು. ಬ್ಯಾನರ್-ಪೋಸ್ಟರ್‌ಗಳ ಭರಾಟೆ ಹೆಚ್ಚಿತ್ತು. ಸಾವಿರಕ್ಕೂ ಹೆಚ್ಚು ಮಂದಿ ಈ ವೈಭವಯುತ ಉತ್ಸವಕ್ಕೆ ಸಾಕ್ಷಿಯಾದರು.

ಪ್ರತಿಕ್ರಿಯಿಸಿ (+)