ಮಂಗಳವಾರ, ನವೆಂಬರ್ 19, 2019
29 °C

ಮುಂಡರಗಿ: ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ

Published:
Updated:

ಮುಂಡರಗಿ: ಪುರಸಭೆಯ ಕಾಂಗ್ರೆಸ್ ಪಕ್ಷದ ನೂತನ ಸದಸ್ಯರು ಹಾಗೂ ಪಟ್ಟಣದ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಪುರಸಭೆ ವ್ಯಾಪ್ತಿಯ ಶಿರೂಳ, ಬ್ಯಾಲವಾಡಿಗೆ ಹಾಗೂ ಮತ್ತಿತರ ಗ್ರಾಮಗಳಿಗೆ ತೆರಳಿ ಶಿರಹಟ್ಟಿ ವಿಧಾನಸಭಾ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಮಕೃಷ್ಣ ದೊಡ್ಡಮನಿ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು.ಬೆಳಿಗ್ಗೆ 9ಗಂಟೆಗೆ ಕಾಂಗ್ರೆಸ್ ಅಭ್ಯರ್ಥಿ ರಾಮಕೃಷ್ಣ ದೊಡ್ಡಮನಿ ಅವರ ಮನೆಯಿಂದ ಹೊರಟ ಕಾರ್ಯಕರ್ತರು ಮಾರುಕಟ್ಟೆ ರಸ್ತೆ, ಜಗದ್ಗುರು ತೋಂಟ ದಾರ್ಯ ಮಠದ ರಸ್ತೆ ಹಾಗೂ ಹಿರೆ ೀಹಳ್ಳದ ಮಾರ್ಗವಗಿ ಶಿರೂಳ ಗ್ರಾಮಕ್ಕೆ ತೆರಳಿ, ಮನೆಮನೆಗೆ ಹೋಗಿ ಎಲ್ಲ ಮತದಾರರನ್ನು ಭೇಟಿಯಾಗಿ ಕಾಂಗ್ರೆಸ್ ಅಭ್ಯರ್ಥಿ ರಾಮಕೃಷ್ಣ ದೊಡ್ಡಮನಿ ಅವರಿಗೆ ಮತ ನೀಡಬೇಕೆಂದು ವಿನಂತಿ ಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಪುರಸಭೆ ಸದಸ್ಯ ಲಿಂಗರಾಜಗೌಡ ಪಾಟೀಲ, `ಕಳೆದ ತಿಂಗಳು ಜರುಗಿದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ರಾಜ್ಯದ ಜನತೆ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡಿದ್ದು, ವಿಧಾನಸಭಾ ಚುನಾವಣೆಯಲ್ಲಿ ಅದು ಪುನರಾವರ್ತ ನೆಯಾಗಲಿದೆ. ಶಿರಹಟ್ಟಿ ವಿಧಾನಸಭಾ ಕ್ಷೇತ್ರವು ಸೇರಿದಂತೆ ರಾಜ್ಯದ ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುವುದರೊಂದಿಗೆ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿಯಲಿದೆ' ಎಂದು ಈ ಸಂದರ್ಭದಲ್ಲಿ ಭರವಸೆ ವ್ಯಕ್ತಪಡಿಸಿದರು.ಪುರಸಭೆ ಸದಸ್ಯರಾದ ಸೋಮನಗೌಡರ ಗೌಡ್ರ, ಮುದುಕಪ್ಪ ಕುಂಬಾರ, ಲಿಂಗನಗೌಡ ಪಾಟೀಲ, ಬಸವರಾಜ ರಾಮೇನಹಳ್ಳಿ, ವೀರೇಶ ಸಜ್ಜನರ, ದಾನೇಶ್ವರಿ ಭಜಂತ್ರಿ, ಫಕ್ರುದ್ದೀನ ಹಾರೋಗೇರಿ, ಬಸವರಾಜ ಗಣಾಚಾರಿ, ರಾಘವೇಂದ್ರ ಕುರಿ, ಮುಖಂಡರಾದ ಅಬ್ದುಲ್, ಯಂಕಮ್ಮ ದೊಡ್ಡಮನಿ, ಪ್ರತಿಭಾ ಹೊಸಮನಿ, ಗಂಗಾಧರ ದೊಡ್ಡಮನಿ, ಯಲ್ಲಪ್ಪ ಹೊಂಬಳಗಟ್ಟಿ, ಅಂದಪ್ಪ ರಾಮೇನಹಳ್ಳಿ  ಈ ಸಂದರ್ಭದಲ್ಲಿ ಹಾಜರಿದ್ದರು.

ಪ್ರತಿಕ್ರಿಯಿಸಿ (+)