`ಮುಂಡರಗಿ ತಾಲ್ಲೂಕು ಕೊಪ್ಪಳಕ್ಕೆ ಸೇರಿಸಿ'

7

`ಮುಂಡರಗಿ ತಾಲ್ಲೂಕು ಕೊಪ್ಪಳಕ್ಕೆ ಸೇರಿಸಿ'

Published:
Updated:

 


ಮುಂಡರಗಿ: ಹೈದರಾಬಾದ್-ಕರ್ನಾಟಕಕ್ಕೆ ವಿಶೇಷ ಸ್ಥಾನ ಮಾನ ಕಲ್ಪಿಸುವ ಸಂವಿಧಾನದ 118ನೇ ತಿದ್ದುಪಡಿ ಮಸೂದೆ 371(ಜೆ)ಗೆ ಸರ್ವಾನುಮತದಿಂದ ಒಪ್ಪಿಗೆ ನೀಡಿರುವ ಲೋಕಸಭೆಯ ಸರ್ವ ಸದಸ್ಯರಿಗೆ ಹಾಗೂ ಅದಕ್ಕಾಗಿ ಕಳೆದ ಹಲವು ವರ್ಷಗಳಿಂದ ಪಕ್ಷಾತೀತ ವಾಗಿ ಹೋರಾಟ ಕೈಗೊಂಡಿದ್ದ ಎಲ್ಲ ಹೋರಾಟಗಾರರಿಗೆ ಮಾಜಿ ಸಹಕಾರ ಸಚಿವ ಎಸ್.ಎಸ್.ಪಾಟೀಲ ಅಭಿನಂದನೆ ಸಲ್ಲಿಸಿದರು.

 

ಈ ಕುರಿತು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಈ ಮೊದಲು ಹೈದರಾಬಾದ್-ಕರ್ನಾಟಕದ ವ್ಯಾಪ್ತಿಯಲ್ಲಿ ಬರುವ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಇದ್ದ ಮುಂಡರಗಿ ತಾಲ್ಲೂಕನ್ನು ಹೈದರಾಬಾದ್- ಕರ್ನಾಟಕದಲ್ಲಿ ಬರುವ ತಾಲ್ಲೂಕುಗಳಲ್ಲಿ ವಿಲೀನಗೊಳಿಸಿ ಹೈದರಾಬಾದ್ ಕರ್ನಾ ಟಕಕ್ಕೆ ನೀಡುವ ವಿಶೇಷ ಸೌಲಭ್ಯಗಳನ್ನು ಮುಂಡರಗಿ ತಾಲ್ಲೂಕಿಗೂ ನೀಡಬೇಕು' ಎಂದು ಒತ್ತಾಯಿಸಿದರು.

 

ಎಲ್ಲ ರಂಗಗಳಲ್ಲೂ ತೀರಾ ಹಿಂದುಳಿದಿರುವ ಮುಂಡರಗಿ ತಾಲ್ಲೂಕು, ಕೊಪ್ಪಳ ಕಂದಾಯ ವ್ಯಾಪ್ತಿಯಿಂದ ಕೇವಲ ನಾಲ್ಕು ಕೀ.ಮೀ. ದೂರದಲ್ಲಿದ್ದು, ಸಮಗ್ರ ಅಭಿವೃದ್ಧಿಯ ಹಿತದೃಷ್ಠಿಯಿಂದ ಕೇಂದ್ರ ಸರಕಾರ ಮುಂಡರಗಿ ತಾಲ್ಲೂಕು ಅನ್ನು ಹೈದರಾಬಾದ್-ಕರ್ನಾಟಕದಲ್ಲಿ ವಿಲಿನಗೊಳಿಸಬೇಕು. ಹೈದರಾಬಾದ-ಕರ್ನಾಟಕ ಮಾದರಿಯಲ್ಲಿ ಇಡಿ ರಾಜ್ಯದ ಅಭಿವೃದ್ದಿಯನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

 

ಅಭಿನಂದನೆ: ಹೈ-ಕಕ್ಕೆ ವಿಶೇಷ ಸ್ಥಾನ ಮಾನ ಕಲ್ಪಿಸುವ ಸಂವಿಧಾನದ 118ನೇ ತಿದ್ದುಪಡಿ ಮಸೂದೆ 371(ಜೆ)ಗೆ ಸರ್ವಾ ನುಮತದಿಂದ ಒಪ್ಪಿಗೆ ನೀಡಿರುವ ಕೇಂದ್ರ ಸರಕಾರಕ್ಕೆ ಹಾಗೂ ಲೋಕಸಭೆಯ ಸರ್ವ ಸದಸ್ಯರಿಗೆ ಜಿಲ್ಲಾ ಕಾಂಗ್ರೆಸ್ ಘಟಕದ ಉಪಾಧ್ಯಕ್ಷ ಕೊಟ್ರೇಶ ಅಂಗಡಿ, ಉಪನ್ಯಾಸಕ ಹಾಗೂ ಆರ್ಥಿಕ ತಜ್ಞ ಡಾ.ಬಿ.ಜೆ.ಜವಳಿ, ಜೆಡಿಎಸ್ ತಾಲ್ಲೂಕು ವಕ್ತಾರ ದೇವಪ್ಪ ಇಟಗಿ, ಮುಖಂಡ ರಾದ ಮಾರುತಿ ಕವಲೂರ ಮೊದಲಾ ದವರು ಅಭಿನಂದನೆ ಸಲ್ಲಿಸಿದ್ದಾರೆ. 

 

ಕಾರ್ತೀಕ ಉತ್ಸವ

ಬೆಳವಣಿಕಿ: ಗ್ರಾಮದ ಆರಾಧ್ಯದೇವ ಮಾರತಿ ದೇವಸ್ಥಾನದಲ್ಲಿ ಜ.7ರಂದು ಕಾರ್ತೀಕೋತ್ಸವವನ್ನು ಹಮ್ಮಿಕೊಳ್ಳ ಲಾಗಿದೆ. ಅದರ ನಿಮಿತ್ತ ಅಲಂಕಾರ, ರುದ್ರಾಭಿಷೇಕ ನಡೆಯುವುದು.

 

ಮಹಿಳಾ ಕಾಂಗ್ರೆಸ್ ಸಭೆ

ಗದಗ:  ನಗರದ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿರುವ ಗದಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಬೆಳಿಗ್ಗೆ 11.30ಕ್ಕೆ  ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನೀಲಮ್ಮ ಬೋಳನ ವರ ಸಂಘಟನೆ ಕುರಿತು ಸಭೆ ಕರೆ ದಿದ್ದಾರೆ. ಮಹಿಳಾ ಮೀಸಲಾತಿ ಕುರಿತು ಚರ್ಚೆ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry