ಮುಂಡರಗಿ: ಧರಣಿ ಹಿಂಪಡೆದ ರೈತರು

7

ಮುಂಡರಗಿ: ಧರಣಿ ಹಿಂಪಡೆದ ರೈತರು

Published:
Updated:

ಮುಂಡರಗಿ:  ತಾಲೂ್ಲಕಿನ ಗಂಗಾಪುರ ಬಳಿ ಇರುವ ವಿಜಯ ನಗರ ಸಕ್ಕರೆ ಕಾರ್ಖಾನೆಯವರು ಪರಿಹಾರ ನೀಡದೆ ಕೃಷಿ ಜಮೀನು ಬಳಸಿ­ಕೊಂಡಿದ್ದಾರೆ ಎಂದು ಆರೋಪಿಸಿ ಕಳೆದ ನಾಲ್ಕು ದಿನಗಳಿಂದ ತಹಶೀ­ಲ್ದಾರ್‌  ಕಚೇರಿ ಎದುರು ಧರಣಿ ಸತ್ಯಾಗ್ರ ಕೈಗೊಂಡಿದ್ದ ಲಕ್ಷ್ಮಣ ತಗಡಿನ­ಮನಿ ಹಾಗೂ ಮತಿ್ತತರರು ಗುರು­ವಾರ ತಮ್ಮ ಧರಣಿ ಸತ್ಯಾ­ಗ್ರಹವನ್ನು ಹಿಂದಕ್ಕೆ ಪಡೆದರು.ತಾಲೂಕಿನ ಶೀರನಹಳ್ಳಿ ಗ್ರಾಮದ ತಮ್ಮ ಸ್ವಂತ ಮಾಲೀಕತ್ವದಲ್ಲಿರುವ ಎರಡೂವರೆ ಎಕರೆ ಕೃಷಿ ಜಮೀನನ್ನು ವಿಜಯನಗರ ಶುಗರ್ ಪ್ರೈವೇಟ್ ಲಿಮಿ­ಟೆಡ್ ಕಾರ್ಖಾನೆಯವರು ಕಳೆದ ಆರು ವರ್ಷಗಳಿಂದ ಅನಧಿಕೃತವಾಗಿ ಉಪ­ಯೋಗಿಸಿಕೊಳ್ಳುತಿ್ತದ್ದು, ಅದಕ್ಕೆ ಯಾವುದೇ ರೀತಿಯ ಪರಿಹಾರವನ್ನು ನೀಡಿರುವುದಿಲ್ಲ ಎಂದು ಆರೋಪಿಸಿ ಲಕ್ಷ್ಮಣ ತಗಡಿನಮನಿ ಹಾಗೂ ಮತಿ್ತತರರು ಸೋಮವಾರದಿಂದ ತಹಶೀಲ್ದಾರ್‌ ಕಚೇರಿ ಎದುರು ಧರಣಿ ಸತ್ಯಾಗ್ರಹ ಕೈಗೊಂಡಿದ್ದರು.ಕಳೆದ ಆರು ವಷರ್ಗಳಿಂದ ಅನಧಿಕೃತವಾಗಿ ಕೃಷಿ ಜಮೀನನ್ನು ಬಳಸಿಕೊಂಡಿರುವುದಲ್ಲದೆ ಅದರಲ್ಲಿ ಟ್ಯಾಂಕ್‌ ಕೂಡ ಕಟ್ಟಲಾಗಿದೆ. ಅದನ್ನು ತೆರವುಗೊಳಿಸಬೇಕು ಮತು್ತ ಕಳೆದ ಆರು ವರ್ಷಗಳಿಂದ ಬಳಸಿ­ಕೊಂಡಿ­ರುವ ಎರಡೂವರೆ ಎಕರೆ ಜಮೀನಿಗೆ ಸೂಕ್ತ ಬೆಳೆ ಪರಿಹಾರ ನೀಡಬೇಕೆಂದು ರೈತರು ಹಟ ಹಿಡಿದಿದ್ದರು.ಗುರುವಾರ ವಿಜಯನಗರ ಶುಗರ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯ ಹಿರಿಯ ಅಧಿಕಾರಿಗಳು ಧರಣಿ ನಿರತರ ಬಳಿಗೆ ಬಂದರು.  ತಹಶೀಲ್ದಾರ್‌ ಎಸ್‌.ಆರ್‌.ಸಿರಕೋಳ ಹಾಗೂ ಪೋಲಿಸರು ಧರಣಿ ನಿರತ ರೈತರು ಮತು್ತ ವಿಜಯನಗರ ಶುಗರ್ ಪ್ರೈವೇಟ್ ಲಿಮಿಟೆಡ್‌ನ ಹಿರಿಯ ಅಧಿಕಾರಿಗಳ ನಡುವೆ ಮಧ್ಯಸ್ಥಿಕೆ ವಹಿಸಿ ಸಮಸೆ್ಯಯನ್ನು ಬಗೆಹರಿಸಿದರು.ಹಜ್ ಯಾತ್ರಾರ್ಥಿಗಳಿಗೆ ತರಬೇತಿ ಶಿಬಿರ

ಗದಗ:  ಹಜರತ್ ಟಿಪ್ಪು ಸುಲ್ತಾನ್ ಸಮಿತಿ ವತಿಯಿಂದ ಜಿಲ್ಲೆಯ  ಹಜ್ ಯಾತಾ್ರರ್ಥಿಗಳಿಗೆ ಇದೇ  21 ರಂದು ಬೆಳಿಗ್ಗೆ  10.30 ರಿಂದ ಮಧ್ಯಾಹ್ನ 3 ಗಂಟೆವರೆಗೆ ಗಂಗಿಮಡಿ ರೋಡ್‌ ತಾಜ ನಗರದ ನೂರ್‌ ಮಸೀದಿಯಲ್ಲಿ ನಡೆಯಲಿದೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry