ಗುರುವಾರ , ಮೇ 19, 2022
20 °C

ಮುಂಡರಗಿ: ಸಮುದಾಯದತ್ತ ಶಾಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ತಾಲ್ಲೂಕಿನ ಮುಂಡರಗಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮುದಾಯದತ್ತ ಶಾಲೆ ಕಾರ್ಯಕ್ರಮ ಇತ್ತೀಚೆಗೆ ಜರುಗಿತು.ಮಾರ್ಗದರ್ಶಕರಾಗಿ ಆಗಮಿಸಿದ್ದ ಇಲ್ಲಿಯ ಕೋಲಿವಾಡಾದ ಸರ್ಕಾರಿ ಪ್ರೌಢಶಾಲೆಯ ನಾಗೇಂದ್ರಪ್ಪ ಕೋತಂಬರಿಕರ್, ಒಂದರಿಂದ ಎಂಟನೇ ತರಗತಿಯ ಮಕ್ಕಳ ಶೈಕ್ಷಣಿಕ ಬುದ್ಧಿಮಟ್ಟ ಹಾಗೂ ಪ್ರಥಮ ಸೆಮಿಸ್ಟರ್ ಪರೀಕ್ಷೆಯ ಮೌಲ್ಯಮಾಪನ ಮಾಡಿದರು. ಸಂಜೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಹನ್ಮಯ್ಯ ಮಾರ್ಗದರ್ಶನದಲ್ಲಿ 3 ನೇ ಕೇಂದ್ರದ ಮಕ್ಕಳು ನ್ಯಾಯ ನಿರ್ಣಯ ನಾಟಕ ಪ್ರದರ್ಶಿಸಿದರು. 5 ನೇ ತರಗತಿಯ ಮಕ್ಕಳಿಂದ ಸರ್ವಧರ್ಮಗಳ ಮತ್ತು ಹಳ್ಳಿಯ ರೈತರ ಓದಿನ ಕುರಿತಾದ ಏಕಪಾತ್ರಾಭಿನಯ ಮಾಡಿದರು.

ಏಳನೇ ತರಗತಿ ಮಕ್ಕಳು ಜಾನಪದ ಗೀತೆ ಹಾಡಿದರು.ನಾಗೇಂದ್ರ ಕೋತಂಬರಿಕರ ಮಾತನಾಡಿ, ಮಕ್ಕಳಲ್ಲಿ ಪ್ರತಿಭೆ ಮುಖ್ಯ. ಒಳ್ಳೆಯ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿದ್ದು, ಇದನ್ನು ಪ್ರೋತ್ಸಾಹಿಸುವ ಕೆಲಸ ಆಗಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಮುಖ್ಯಾಧ್ಯಾಪಕ ಸಿದ್ಧಣ್ಣಸಾಹುಕಾರ, ಇನ್ನು ಹೆಚ್ಚಿನ ಗುಣಾತ್ಮಕ ಶಿಕ್ಷಣಕ್ಕೆ ಮಹತ್ವ ನೀಡಬೇಕು.

ಈ ನಿಟ್ಟಿನಲ್ಲಿ ಶಿಕ್ಷಕರು ಪ್ರಯತ್ನಿಸಬೇಕು ಎಂದರು.ಎಸ್‌ಡಿಎಂಸಿ ಸದಸ್ಯ ಮಹಾಲಿಂಗಪ್ಪ, ಶಿಕ್ಷಕರು ಹಾಜರಿದ್ದರು. ಭೀಮಣ್ಣ ಅನಪೂರ ನಿರೂಪಿಸಿದರು. ವಿಜಯಕುಮಾರ ಸ್ವಾಗತಿಸಿದರು. ಭೀಮಣ್ಣ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.