`ಮುಂದಿನ ಚುನಾವಣೆಯಲ್ಲಿ ಕೆಜೆಪಿ-ಜೆಡಿಯು ಮೈತ್ರಿ'

7

`ಮುಂದಿನ ಚುನಾವಣೆಯಲ್ಲಿ ಕೆಜೆಪಿ-ಜೆಡಿಯು ಮೈತ್ರಿ'

Published:
Updated:

ಮಳವಳ್ಳಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕೆಜೆಪಿ ಹಾಗೂ ಜೆಡಿಯು ಮೈತ್ರಿಯಾಗಿ ಸ್ಪರ್ಧಿಸಲಿವೆ. ಜೆಡಿಯು ಪಕ್ಷದಿಂದ ನಾನು ಸ್ಪರ್ಧಿಸುತ್ತಿದ್ದು, ಇದು ನಾನು ಸ್ಪರ್ಧಿಸುವ ಕೊನೆಯ ಚುನಾವಣೆ ಎಂದು ಮಾಜಿ ಸಚಿವ ಬಿ.ಸೋಮಶೇಖರ್ ತಿಳಿಸಿದರು.ಪಟ್ಟಣದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಯಾವುದೇ ಕಾರಣಕ್ಕೂ ಪಕ್ಷ ಬದಲಾಯಿಸದೆ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಕೆಜೆಪಿ ಪಕ್ಷಕ್ಕೆ ಬೆಂಬಲ ನೀಡಿ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದರು. ಕೆಜೆಪಿ ರಾಜ್ಯ ಪ್ರದಾನ ಕಾರ್ಯದರ್ಶಿ ಮದನ್ ಪಟೇಲ್ ಅವರು `ಯಾವುದೇ ಪಕ್ಷದ ಜೊತೆ   ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ.

ಈ ಕ್ಷೇತ್ರದ ಅಭ್ಯರ್ಥಿಯಾಗಿ ನಾನೇ ಸ್ಪರ್ಧಿಸುತ್ತೇನೆ' ಎಂಬ ಹೇಳಿಕೆ ನೀಡಿದ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಉತ್ತರಿಸಿದ ಸೋಮಶೇಖರ್, ಈ ಬಗ್ಗೆ ನಾನು ಯಡಿಯೂರಪ್ಪ ಅವರ ಜೊತೆ ಮಾತನಾಡುತ್ತೇನೆ ಎಂದರು. ನಾನು ಸಚಿವನಾಗಿದ್ದಾಗ ಕಂದಾಯ ಇಲಾಖೆ ಹಾಗೂ ಶಿಕ್ಷಣ ಇಲಾಖೆಯಲ್ಲಿ ತಂದ ಬದಲಾವಣೆಗಳು ದೇಶದಲ್ಲೇ ಮಾದರಿಯಾಗಿವೆ. ರಾಮಕೃಷ್ಣ ಹೆಗಡೆ, ಎಸ್.ಆರ್. ಬೊಮ್ಮಾಯಿ, ಜೆ.ಎಚ್. ಪಟೇಲ್ ಅವರಿಗೆ ನಿಷ್ಠಾವಂತನಾಗಿದ್ದ ನಾನು, ಕೆಜೆಪಿ ಮೈತ್ರಿಯೊಡನೆ ಯಡಿಯೂರಪ್ಪ ಅವರಿಗೆ ನಿಷ್ಠಾವಂತನಾಗಿ ಮುಂದುವರಿಯಲಿದ್ದೇನೆ ಎಂದರು. ಮುಖಂಡರಾದ ಎಚ್.ಎಂ. ಶಿವಸ್ವಾಮಿ, ಕುಂದೂರು ಜಗದೀಶ್, ದುಗ್ಗನಹಳ್ಳಿ ನಾಗರಾಜು, ಗುರುಲಿಂಗಯ್ಯ, ಸಿದ್ದಾಚಾರಿ, ಎನ್.ಕೆ. ಕುಮಾರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry