ಸೋಮವಾರ, ಏಪ್ರಿಲ್ 12, 2021
32 °C

ಮುಂದಿನ ಚುನಾವಣೆಯಲ್ಲಿ ಗೆದ್ದು ತೋರಿಸಲಿ: ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವದುರ್ಗ: ಹಾಲಿ ಶಾಸಕರು ಈಚೆಗೆ ಮುಂದಿನ ಚುನಾವಣೆಯಲ್ಲಿ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸದರೂ ಗೆಲುತ್ತೇನೆ ಎಂದು ಭವಿಷ್ಯ ನುಡಿದಿದ್ದು, ದೇವದುರ್ಗ ಕ್ಷೇತ್ರದಲ್ಲಿ ಮಾತ್ರ ಮುಂದಿನ ಚುನಾವಣೆಯಲ್ಲಿ ಗೆದ್ದು ತೋರಿಸಲಿ ಎಂದು ಮಾಜಿ ಜಿಪಂ ಸದಸ್ಯ ರಾಜಶೇಖರ ನಾಯಕ ಅವರು ಸವಾಲು ಹಾಕಿದರು.

ಮಂಗಳವಾರ ಪಟ್ಟಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕು ವರ್ಷದ ಅವದಿಯಲ್ಲಿ ತಾಲ್ಲೂಕಿನಲ್ಲಿ ಜೂಜಾಟ, ಮಟ್ಟಕಾ ಮತ್ತು ಮದ್ಯದ ಅಂಗಡಿಗಳಿಗೆ ಮಾತ್ರ ಶಾಸಕರು ಹೆಚ್ಚು ಗಮನ ಹರಿಸಿದ್ದಾರೆ ಹೊರತು ಹಿಂದುಳೀದ ತಾಲ್ಲೂಕಿನ ಅಭಿವೃದ್ಧಿಗೆ ಅಲ್ಲ ಎಂದು ದೂರಿದರು.

ಶಾಸಕರು ಪ್ರತಿ ಬಾರಿ ತಾಲ್ಲೂಕಿಗೆ ಸಾವಿರ ಕೋಟಿ ರೂಪಾಯಿ ಅನುದಾನ ತರಲಾಗಿದೆ ಎಂದು ಹೇಳುತ್ತಿದ್ದು, ಸಾವಿರ ಕೋಟಿ ರೂಪಾಯಿ ಅಭಿವೃದ್ಧಿ ಬಗ್ಗೆ ಸಾರ್ವಜನಿಕರ ಮುಂದೆ ಇಡಲಿ ಎಂದು ಮತ್ತೊಮ್ಮೆ ಸವಾಲು ಹಾಕಿದರು.

ಹಿಂಬಾಗೀಲಿನಿಂದ ಹಣ ಮಾಡಿಕೊಂಡವರು ಆರು ಕ್ಷೇತ್ರದಲ್ಲಿ ಗೆಲ್ಲುತ್ತೇನೆ ಎಂದು ಹೇಳುತ್ತಿರುವುದನ್ನು ಜಿಲ್ಲೆಯ ಜನರು ಕೇಳವರು ದಡ್ಡರಲ್ಲ. ಸಮಯ ಬಂದಾಗ ಅದಕ್ಕೆ ತಕ್ಕಪಾಠ ಕಲಿಸುತ್ತಾರೆ ಎಂದು ದೂರಿದರು.

ಸ್ಪಷ್ಟನೆ: ತಾಲ್ಲೂಕಿಗೆ ಮಂಜೂರಾದ 35 ಸಾವಿರ ಆಶ್ರಯ ಮನೆಗಳ ಮತ್ತು ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷ ಅಡ್ಡಿಪಡಿಸುತ್ತದೆ ಎಂಬ ಶಾಸಕರ ಆರೋಪದಲ್ಲಿ ಯಾವುದೇ ಸತ್ಯವಿಲ್ಲ. ಮನೆಗಳ ಮಂಜೂರಾತಿ ಮತ್ತು ಅಭಿವೃದ್ಧಿಗೆ ಎಂದೂ ಕಾಂಗ್ರೆಸ್ ಪಕ್ಷ ಅಡ್ಡಿಪಡಿಸಿಲ್ಲ ಶಾಸಕರೆ ಜನರನ್ನು ದಿಕ್ಕು ತಪ್ಪಿಸುವಂಥ ವಾತಾವರಣ ನಿರ್ಮಿಸುತ್ತಿತ್ತು ಈ ಬಗ್ಗೆ ತಾಲ್ಲೂಕಿನ ಜನರು ಎಲ್ಲವನ್ನು ಗಮನಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಪತ್ರಿಕಾಗೋಷ್ಟಿಯಲ್ಲಿ ದೇವದುರ್ಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮನಗೌಡ ನಾಗಡದಿನ್ನಿ, ಅರಕೇರಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸ್ಸಯ್ಯ ಸಾಕೆ, ಮುಖಂಡರಾದ ರಾಮಣ್ಣ ಇರಬಗೇರಾ, ತಾಲ್ಲೂಕು ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಶೇಖ್ ಮುನ್ನಾಬಾಯಿ, ಉಪಾಧ್ಯಕ್ಷ ಲಕ್ಷ್ಮಣ ಜ್ಯೋತಿ, ಡಾ. ಸುಭಾಸಚಂದ್ರ ಪಾಟೀಲ, ಶಾಮಸುಂದರ ಅಬಕಾರಿ, ರಾಚಣ್ಣ ಗಣೇಕಲ್, ನಾಗಪ್ಪ ಗಿರಿಣಿ, ಮಹಾದೇವ ಪಾಟೀಲ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.