ಬುಧವಾರ, ಏಪ್ರಿಲ್ 21, 2021
33 °C

ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗೇಪಲ್ಲಿ: ಪಕ್ಷದ ಹೈಕಮಾಂಡ್ ಸೂಚಿಸಿದ್ದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಾಗೇಪಲ್ಲಿಯಿಂದ ಸ್ಪರ್ಧಿಸುವುದಾಗಿ ನಟ ಮತ್ತು ಬಿಜೆಪಿ ಮುಖಂಡ ಸಾಯಿಕುಮಾರ್ ತಿಳಿಸಿದರು.ತಾಲ್ಲೂಕಿನ ಯಲ್ಲಂಪಲ್ಲಿ ಪಂಚಾಯಿತಿ ಪಟ್ರವಾರಿಪಲ್ಲಿ ಗ್ರಾಮದಲ್ಲಿ ಗುರುವಾರ ಸಾಯಿಕುಮಾರ್ ಯುವ ಸೇನೆ ಹಮ್ಮಿಕೊಂಡಿದ್ದ ರಾಮಲಕ್ಷ್ಮಣ ಮತ್ತು ಆಂಜನೇಯ ಮೂರ್ತಿಗಳ ಪ್ರತಿಷ್ಟಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದಲ್ಲಿ, ಮತದಾರರು ನನ್ನ ಕೈಬಿಡುವುದಿಲ್ಲ ಎಂಬ ನಂಬಿಕೆಯಿದೆ’ ಎಂದರು.‘ನನ್ನ ಪುತ್ರ ಆದಿ ಚಿತ್ರರಂಗಕ್ಕೆ ಪ್ರವೇಶಿಸಲಿದ್ದಾರೆ. ಆದಿ ಅವರು ನಟಿಸುವ ಚಿತ್ರವನ್ನು ಎಲ್ಲೆಡೆ ಬಿಡುಗಡೆ ಮಾಡಲಾಗುವುದು. ಬಾಗೇಪಲ್ಲಿಯಲ್ಲೂ ಕೂಡ ಅದ್ಧೂರಿಯಲ್ಲಿ ಚಿತ್ರ ಪ್ರದರ್ಶಿಸಲಾಗುವುದು. ಚಿತ್ರರಂಗದಲ್ಲಿ ಯಶಸ್ಸು ಸಾಧಿಸಲು ಆದಿಗೆ ಎಲ್ಲರೂ ಪ್ರೋತ್ಸಾಹಿಸಬೇಕು’ ಎಂದು ಮನವಿ ಮಾಡಿದರು.ಕಳೆದ ವಿಧಾನಸಭಾಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ಚುನಾವಣೆಯಲ್ಲಿ ಸ್ಫರ್ಧಿಸಲಾಗಿತ್ತು. ಆದರೆ ಅಪಾರ ಜನತೆ ತಮ್ಮ ಅಭಿಮಾನದ ಮೇಲೆ ಮತಗಳು ನೀಡಿದ್ದರು. ಆದರೆ ಕಡಿಮೆ ಮತಗಳಿಂದ ಪರಾಭವವಾಗಿರುವುದು ಮನಸ್ಸಿಗೆ ನೋವುಂಟು ಮಾಡಿದೆ. ತಾಲ್ಲೂಕಿನ ಸಮಸ್ತ ಅಭಿವೃದ್ಧಿಗೆ  ಹಾಗೂ ತಾಯಿ ಜನಿಸಿದ ತಾಲ್ಲೂಕಿಗೆ  ಸೇವೆ ಮಾಡಬೇಕೆಂದು ಆಸೆಯಿದೆ. ತಾಲ್ಲೂಕಿನಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ. ರಾಜಕೀಯದಲ್ಲಿ ಕಡು ವೈರಿಗಳಾದ ಸಿಪಿಐ (ಎಂ) ಪಕ್ಷದ ಜಿಲ್ಲಾ ಕಾರ್ಯದರ್ಶಿ ಹಾಗು ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿಯವರನ್ನು ಭೇಟಿ ಮಾಡಲಾಗಿತ್ತು. ಅಭಿವೃದ್ಧಿ ವಿಚಾರ ಬೇರೆ, ರಾಜಕೀಯ ವಿಚಾರ ಬೇರೆ ಎಂದು ತಿಳಿಸಿದರು.ಬಿಜೆಪಿ ತಾಲ್ಲೂಕು ಅಧ್ಯಕ್ಷ ಜಿ.ಆರ್.ಚೌಡರೆಡ್ಡಿ ಮಾತನಾಡಿದರು.ನಟ ಆದಿ, ನಿರ್ದೇಶಕ ಅಯ್ಯಪ್ಪ, ಸಾಯಿಮಾಧವ ಟ್ರಸ್ಟ್ ಅಧ್ಯಕ್ಷ ಲಕ್ಷ್ಮಿನಾರಾಯಣಪ್ಪ, ಸಾಯಿಕುಮಾರ್ ಯುವ ಸೇನೆ ಅಧ್ಯಕ್ಷ ರವಿಕುಮಾರ್, ಮುಖಂಡ ರಾಜೇಶ್, ಪ್ರತಾಪ್, ಚಾಲೆಂಜರ್ಸ್‌ ಅಸೋಸಿಯನ್ಸ್ ಭಾಸ್ಕರ್, ಕಡೇಹಳ್ಳಿರಮೇಶ್ ಮತ್ತಿತರರು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.