ಮುಂದಿನ ನಡೆ: ಪ್ರಿಯಾಂಕಾ ನಿರ್ಧಾರ

7

ಮುಂದಿನ ನಡೆ: ಪ್ರಿಯಾಂಕಾ ನಿರ್ಧಾರ

Published:
Updated:

ನವದೆಹಲಿ (ಪಿಟಿಐ): ಲೋಕಸಭೆ ಚುನಾ­ವಣೆ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ, ಪಕ್ಷದಲ್ಲಿ ಮಹತ್ವದ ಪಾತ್ರ ವಹಿ­­ಸುತ್ತಾರೆ ಎಂಬ ಊಹಾಪೋಹ­ಗಳನ್ನು ತಳ್ಳಿಹಾಕಿರುವ ಕಾಂಗ್ರೆಸ್‌, ಮುಂದಿನ ನಡೆ ಏನು ಎನ್ನು­ವು­ದನ್ನು  ಪ್ರಿಯಾಂಕಾ ಅವರೇ ನಿರ್ಧರಿ­­ಸು­ತ್ತಾರೆ ಎಂದು ಬುಧವಾರ ಸ್ಪಷ್ಟಪಡಿಸಿದೆ.‘ಪ್ರಿಯಾಂಕಾ, ತಮ್ಮ ಸಹೋದರ ರಾಹುಲ್‌ ನಿವಾಸಕ್ಕೆ ಬಂದಾಗ ಅಲ್ಲಿ ಪಕ್ಷದ ಪ್ರಮುಖರ ಸಭೆ ನಡೆಯುತ್ತಿತ್ತು. ಔಪ­ಚಾರಿಕವಾಗಿ ಅವರು ಮುಖಂಡರ ಜತೆ ಮಾತನಾಡಿದರು. ಇದಕ್ಕೆ ಬೇರೆ ಅರ್ಥ ಬೇಡ’ ಎಂದು ಪಕ್ಷದ ವಕ್ತಾರ ರಣದೀಪ್‌ ಸರ್ಜೆವಾಲಾ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry