`ಮುಂದಿನ ಪಂದ್ಯ ಮಹತ್ವದ್ದು'

7

`ಮುಂದಿನ ಪಂದ್ಯ ಮಹತ್ವದ್ದು'

Published:
Updated:

ಮೈಸೂರು: ಕರ್ನಾಟಕ ತಂಡವು ರಣಜಿ ಟೂರ್ನಿಯ ಕ್ವಾರ್ಟರ್‌ಫೈನಲ್‌ಗೆ ಅರ್ಹತೆ ಗಳಿಸಲು, ಡಿಸೆಂಬರ್ 22ರಿಂದ 25ರವರೆಗೆ ಹುಬ್ಬಳ್ಳಿಯಲ್ಲಿ ನಡೆಯಲಿರುವ ಹರಿಯಾಣ ವಿರುದ್ಧ ಪಂದ್ಯ ಅತಿ ಮುಖ್ಯವಾಗಿದೆ ಎಂದು ಕರ್ನಾಟಕ ರಣಜಿ ಕ್ರಿಕೆಟ್ ತಂಡದ ಜೆ. ಅರುಣಕುಮಾರ್ ಹೇಳಿದ್ದಾರೆ.ವಿದರ್ಭ ವಿರುದ್ಧದ ಪಂದ್ಯವನ್ನು ಡ್ರಾ ಮಾಡಿಕೊಂಡ ಕರ್ನಾಟಕ ಮೂರು ಪಾಯಿಂಟ್ ಗಳಿಸಿದ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.`ಈ ಪಂದ್ಯದಲ್ಲಿ ನಮ್ಮ ಬ್ಯಾಟಿಂಗ್, ಬೌಲಿಂಗ್ ಉತ್ತಮವಾಗಿತ್ತು. ಮೊದಲ ಇನಿಂಗ್ಸ್‌ನಲ್ಲಿ ವಿದರ್ಭದ ಬ್ಯಾಟ್ಸ್‌ಮನ್‌ಗಳೂ ಚೆನ್ನಾಗಿ ಆಡಿದರು. ಬೋನಸ್ ಅಂಕದೊಂದಿಗೆ ಗೆಲ್ಲುವ ಗುರಿ ನಮಗೆ ಇತ್ತು. ಆದಕ್ಕಾಗಿ ಸರ್ವಪ್ರಯತ್ನವನ್ನೂ ನಾವು ಮಾಡಿದ್ದೇವೆ. ನಮ್ಮ ಬೌಲರ್‌ಗಳು ಎರಡು ದಿನಗಳಿಂದ ನೀಡಿದ ಉತ್ತಮ ಪ್ರದರ್ಶನದ ಫಲ ಮಂಗಳವಾರ ಸಿಕ್ಕಿತು. ಇದರಿಂದಾಗಿ ಮೂರು ಪಾಯಿಂಟ್ ಗಳಿಸಿದೆವು' ಎಂದರು.`ಹರಿಯಾಣ ವಿರುದ್ಧ ಹುಬ್ಬಳ್ಳಿಯ ಪಂದ್ಯದಲ್ಲಿ ಅಕ್ಷಯ್ ಆಡುತ್ತಾರೆ. ಕುನಾಲ್ ಕಪೂರ್ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು, ಶನಿವಾರದ ಪಂದ್ಯಕ್ಕೆ ಸಿದ್ಧರಾಗುತ್ತಾರೆ ಎನ್ನುವ ಭರವಸೆ ಇದೆ' ಎಂದು ಹೇಳಿದರು.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry