ಮಂಗಳವಾರ, ಮೇ 18, 2021
22 °C

ಮುಂದಿನ ವರ್ಷದಿಂದ ಆನ್‌ಲೈನ್‌ನಲ್ಲಿ ಎಐಇಇಇ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಮುಂದಿನ ವರ್ಷದಿಂದ ಬೆಂಗಳೂರು ಸೇರಿದಂತೆ ರಾಷ್ಟ್ರದ 22 ನಗರಗಳಲ್ಲಿ ಸಿಬಿಎಸ್‌ಇಯು ಅಖಿಲ ಭಾರತ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಯನ್ನು (ಎಐಇಇಇ) ಆನ್‌ಲೈನ್ ಮೂಲಕ ನಡೆಸಲಿದೆ.ಆನ್‌ಲೈನ್ ಪರೀಕ್ಷೆಯು  2012ರ ಮೇ 7ರಿಂದ 25ರವರೆಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದಿನಗಳಂದು ನಡೆಯಲಿದೆ. ಹೈದರಾಬಾದ್, ವಿಜಯವಾಡ, ಎರ್ನಾಕುಲಂ ಕೂಡ 22 ನಗರಗಳಲ್ಲಿ ಸೇರಿವೆ.

`ಈ ನಗರಗಳಲ್ಲಿ ಪರೀಕ್ಷೆಯು ಕೇವಲ ಆನ್‌ಲೈನ್ ಮಾದರಿಯಲ್ಲಿ ಮಾತ್ರ ಇರುತ್ತದೆ~ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಈ ವರ್ಷ ಸಿಬಿಎಸ್‌ಇ ಕೆಲವು ನಗರದಲ್ಲಿ ಪ್ರಾಯೋಗಿಕವಾಗಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ ನಂತರ ಎಐಇಇಇಯನ್ನು ಆನ್‌ಲೈನ್ ಮೂಲಕ ನಡೆಸುವುದನ್ನು ಇನ್ನಷ್ಟು ನಗರಗಳಿಗೆ ವಿಸ್ತರಿಸಲು ನಿರ್ಧಾರ ಕೈಗೊಳ್ಳಲಾಯಿತು.`ಆಡಳಿತ ನಿರ್ವಹಣೆ ಸಂಸ್ಥೆಗಳಲ್ಲಿ ಪ್ರವೇಶಕ್ಕಾಗಿ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯಂತೆ (ಸಿಎಟಿ) ಇದು ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ) ಆಗಿರುತ್ತದೆ~ ಎಂದು ಅಧಿಕಾರಿ ಹೇಳಿದ್ದಾರೆ.ಆನ್‌ಲೈನ್ ಪರೀಕ್ಷೆ ತೆಗೆದುಕೊಳ್ಳುವವರಿಗೆ ಅನುಕೂಲವಾಗುವಂತೆ ಈ ಹೊಸ ಪದ್ಧತಿ ಬಗ್ಗೆ ಅರಿಯಲು ಮತ್ತು ರೂಢಿ ಮಾಡಿಕೊಳ್ಳಲು ಈ ವರ್ಷದ ಡಿಸೆಂಬರ್‌ನಲ್ಲಿ ಸಿಬಿಎಸ್‌ಇ ವೆಬ್‌ಸೈಟ್‌ನಲ್ಲಿ ಮಾದರಿ ಪರೀಕ್ಷೆಯ ಸಾಫ್ಟ್‌ವೇರ್ ಅಳವಡಿಸಲಾಗುವುದು. ಅಲ್ಲದೆ 2012ರಲ್ಲಿ ಆಲ್‌ಲೈನ್ ಮೂಲಕ ಪರೀಕ್ಷೆ ತೆಗೆದುಕೊಳ್ಳುವವರಿಗೆ ಅವರ ಪರೀಕ್ಷಾ ಶುಲ್ಕದಲ್ಲಿ ರೂ 150-ರೂ 300ರವರೆಗೆ ರಿಯಾಯ್ತಿ ನೀಡಲಾಗುವುದು.ಕಳೆದ ಎಐಇಇಇ ಪರೀಕ್ಷೆಯಲ್ಲಿ ಉತ್ತರಪ್ರದೇಶದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಕಾರಣ ಅನೇಕ ವಿದ್ಯಾರ್ಥಿಗಳು ತೊಂದರೆ ಅನುಭವಿಸಿದ್ದರು.ಆದರೆ ಸಿಎಟಿಯಂತೆ ಎಐಇಇಇ ಆನ್‌ಲೈನ್ ಪರೀಕ್ಷೆಯ ಆಯ್ಕೆಯು ವಿದ್ಯಾರ್ಥಿಗಳಿಗೆ ಕಡ್ಡಾಯ ಆಗಿರುವುದಿಲ್ಲ. ಸಿಬಿಎಸ್‌ಸಿಯು 2012ರ ಏಪ್ರಿಲ್ 29ರಂದು ಕರ್ನಾಟಕದ ಹುಬ್ಬಳ್ಳಿ, ಮಂಗಳೂರು ಸೇರಿದಂತೆ ರಾಷ್ಟ್ರದ 65 ನಗರಗಳಲ್ಲಿ ಲಿಖಿತ ಪರೀಕ್ಷೆಯನ್ನು ಕೂಡ ನಡೆಸಲಿದೆ.ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಗಳು (ಎನ್‌ಐಟಿ), ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು (ಐಐಐಟಿಗಳು) ಸೇರಿದಂತೆ ರಾಷ್ಟ್ರದಾದ್ಯಂತ ಇರುವ ಎಂಜಿನಿಯರಿಂಗ್ ಕಾಲೇಜುಗಳಿಗೆ ಸಿಬಿಎಸ್‌ಸಿಯು ಅಖಿಲ ಭಾರತ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆ ನಡೆಸಲಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.