ಮುಂದಿನ ವರ್ಷ ಆಯುರ್ವೇದ ಕಾಲೇಜು ಆರಂಭ

6

ಮುಂದಿನ ವರ್ಷ ಆಯುರ್ವೇದ ಕಾಲೇಜು ಆರಂಭ

Published:
Updated:

ಶಿವಮೊಗ್ಗ:  ನಗರದ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಮುಂದಿನ ಶೈಕ್ಷಣಿಕ ವರ್ಷದಿಂದ ಆರಂಭಿಸಲು ಕ್ರಮ ಕೈಗೊಳ್ಳಲಾ ಗುತ್ತಿದೆ ಎಂದು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮದನ್‌ ಗೋಪಾಲ್‌ ತಿಳಿಸಿದರು.ಆಸ್ಪತ್ರೆಗೆ ಅವಶ್ಯವಿರುವ ಬೋಧಕ ಮತ್ತು ಪ್ಯಾರಾಮೆಡಿಕಲ್‌ ಸಿಬ್ಬಂದಿ ನೇಮಕಕ್ಕೆ ಕೆಪಿಎಸ್‌ಸಿ ಮೂಲಕ ವಿಶೇಷ ನೇಮಕಾತಿ ಪ್ರಕ್ರಿಯೆ ನಡೆಸಿದ ನಂತರ ಅನುದಾನ ಮಂಜೂರು ಮಾಡಲು ಸಾಧ್ಯ. ಸಿಬ್ಬಂದಿ ನೇಮಕಕ್ಕೆ ಕೆಪಿಎಸ್‌ಸಿ ಮೂಲಕ ವಿಶೇಷ ನೇಮಕಾತಿ ಪ್ರಕ್ರಿಯೆ ನಡೆಯಬೇಕು. ಇದಕ್ಕೆ ಸಚಿವ ಸಂಪುಟ ಅನುಮೋದನೆ ನೀಡಬೇಕು. ಈ ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಿ, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಕಾಲೇಜು ಆರಂಭಿಸಲಾಗುವುದು ಎಂದು ಅವರು ಬುಧವಾರ ಸುದ್ದಿಗಾರರಿಗೆ ಮಾಹಿತಿ ನೀಡಿದರು.ಕಾಲೇಜು ಆರಂಭಿಸಲು ಕೇಂದ್ರ ಆರೋಗ್ಯ ಮಂಡಳಿಯ ಅನುಮತಿ ಪಡೆಯಬೇಕಿದ್ದು, ಆಸ್ಪತ್ರೆಗೆ ಎಲ್ಲಾ ಸೌಲಭ್ಯ ಒದಗಿಸಿದ ನಂತರ ಅರ್ಜಿ ಸಲ್ಲಿಸಲಾಗುವುದು ಎಂದರು. ತದನಂತರ ಮೆಗ್ಗಾನ್‌ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.  ‘ಸಿಮ್ಸ’್ ನಿರ್ದೇಶಕ ಡಾ.ಗಂಗಾಧರ್‌, ಜಿಲ್ಲಾ ಪಂಚಾಯಿ್ತ ಸಿಇಒ ಎಸ್‌.ಸಸಿಕಾಂತ್‌ ಸೆಂಥಿಲ್,  ಡಿಎಚ್‌ಒ ಡಾ.ಶಿವಣ್ಣ ರೆಡ್ಡಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry