ಮುಂದಿನ ಸುತ್ತಿಗೆ ಸೂರಜ್, ಸನಮ್

7

ಮುಂದಿನ ಸುತ್ತಿಗೆ ಸೂರಜ್, ಸನಮ್

Published:
Updated:

ಬೆಳಗಾವಿ: ಹ್ಯಾಟ್ರಿಕ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಹರಿಯಾಣದ ಸನಮ್ ಸಿಂಗ್ ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಂಕಣದಲ್ಲಿ ನಡೆಯುತ್ತಿರುವ `ಬೆಳಗಾವಿ ಓಪನ್' ಪುರುಷರ ಐಟಿಎಫ್ ಟೂರ್ನಿಯ ಎರಡನೇ ಸುತ್ತಿಗೆ ಮುನ್ನಡೆದಿದ್ದಾರೆ.ಮಂಗಳವಾರ ಮೊದಲ ಸುತ್ತಿನ ಪಂದ್ಯದಲ್ಲಿ ಸನಮ್ 6-4, 6-1 ನೇರ ಸೆಟ್‌ಗಳಿಂದ ರೋನಾಕ್ ಮಂಜುಳಾ ವಿರುದ್ಧ ಸುಲಭ ಗೆಲುವು ದಾಖಲಿಸಿದರು. ಕೇವಲ 67 ನಿಮಿಷಗಳಲ್ಲಿ ಅವರು ಎದುರಾಳಿಯನ್ನು ಮಣಿಸಿದರು. ಅಗ್ರ ಶ್ರೇಯಾಂಕಿತ ಶ್ರೀರಾಮ್ ಬಾಲಾಜಿ 6-2, 6-3ರಲ್ಲಿ ಅಜಯ್ ಸೆಲ್ವರಾಜ್ ಅವರನ್ನು ಪರಾಭವಗೊಳಿಸಿದರು.ಸಂಜೆ ನಡೆದ ರೋಚಕ ಹಣಾಹಣಿಯಲ್ಲಿ ವೈಲ್ಡ್‌ಕಾರ್ಡ್ ಸ್ಪರ್ಧಿ, ಮೈಸೂರಿನ ಸೂರಜ್ ಪ್ರಬೋಧ್ 1-6, 7-6(4), 7-5ರಿಂದ ಶಬಾಜ್ ಖಾನ್‌ಗೆ ಆಘಾತ ನೀಡುವ ಮೂಲಕ ಮುಂದಿನ ಸುತ್ತಿಗೆ ಮುನ್ನಡೆದರು. ಧಾರವಾಡ ಓಪನ್‌ನಲ್ಲಿ ಫೈನಲ್ ತಲುಪಿದ್ದ ತಮಿಳುನಾಡಿನ ರಾಮ್‌ಕುಮಾರ್ ರಾಮನಾಥನ್ 6-1, 6-2ರಲ್ಲಿ ನೆದರ್‌ಲೆಂಡ್ಸ್‌ನ ರುಟ್ಜರ್ ಕ್ರಾಮರ್‌ಗೆ ಮನೆಯ ಹಾದಿ ತೋರಿಸಿದರು.

ಅಭಿಜಿತ್ ತಿವಾರಿ ಹಾಗೂ ಈ. ನೀರಜ್ ನಡುವಿನ ಪಂದ್ಯ ತೀವ್ರ ಹೋರಾಟದಿಂದ ಕೂಡಿತ್ತು. ಅಂತಿಮವಾಗಿ ಅಭಿಜಿತ್ 4-6, 6-2, 6-3ರಲ್ಲಿ ಗೆಲುವು ಕಂಡರು.ಸಿಂಗಲ್ಸ್‌ನ ಇತರ ಪಂದ್ಯಗಳಲ್ಲಿ ಎಂಟನೇ ಶ್ರೇಯಾಂಕದ ಆಟಗಾರ ನೆದರ್‌ಲೆಂಡ್ಸ್‌ನ ಜೆರೊಯಿನ್ ಬರ್ನಾಡ್ 6-3, 6-4ರಿಂದ ಅಮೆರಿಕಾದ ಅಮೃತ್ ನರಸಿಂಹನ್ ವಿರುದ್ಧ; ಮೋಹಿತ್ ಮಯೂರ್ 7-5, 6-3ರಿಂದ ವಿವೇಕ್ ಶೋಕಿನ್ ವಿರುದ್ಧ; ಮೂರನೇ ಶ್ರೇಯಾಂಕದ ಥಿಯೊಡೊರಸ್ ಏಂಜಲಿನೊಸ್ 6-3, 6-1ರಿಂದ ಪಿ. ವಿಘ್ನೇಶ್ ವಿರುದ್ಧ; ಜತಿನ್ ದಹಿಯಾ 6-3, 6-0ರಿಂದ ರೂಪೇಶ್ ರಾಯ್ ವಿರುದ್ಧ; ರೋಹನ್ ಜಿಡೆ 7-6(8), 6-2ರಿಂದ ಕುನಾಲ್ ಆನಂದ್ ವಿರುದ್ಧ ಗೆಲುವು ದಾಖಲಿಸಿದರು.ಡಬಲ್ಸ್ ವಿಭಾಗದ ಪಂದ್ಯದಲ್ಲಿ ವಿಜಯ್‌ಸುಂದರ್ ಪ್ರಶಾಂತ್ ಹಾಗೂ ಅರುಣ್‌ಪ್ರಕಾಶ್ ರಾಜ್‌ಗೋಪಾಲ್ ಜೋಡಿ 6-3, 7-6(3)ರಲ್ಲಿ ಸಾಗರ್ ಮಂಜಣ್ಣ-ಅಕ್ಷಯ್ ಠಕ್ಕರ್ ಅವರನ್ನು ಮಣಿಸಿತು. ಅಮೆರಿಕಾದ ಅಮೃತ್ ನರಸಿಂಹನ್-ಮೈಕೆಲ್ ಶಬಾಜ್ ಜೋಡಿ 5-7, 6-4 (10-2)ರಲ್ಲಿ ಲಕ್ಷಿತ್ ಸೂದ್ ಮತ್ತು ಅಭಿಜಿತ್ ತಿವಾರಿ ಅವರನ್ನು ಮಣಿಸಿ ಕ್ವಾರ್ಟರ್ ಫೈನಲ್ ಹಂತಕ್ಕೆ ಮುನ್ನಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry