ಮುಂದುವರಿದ ಜಯದ ದಾಖಲೆ

7

ಮುಂದುವರಿದ ಜಯದ ದಾಖಲೆ

Published:
Updated:

ಬೆಂಗಳೂರು: ಭಾರತ ‘ಎ’ ತಂಡ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಿದ ಎಲ್ಲಾ ಏಕದಿನ ಪಂದ್ಯಗಳಲ್ಲಿಯೂ ಗೆಲುವು ಸಾಧಿಸಿದ ದಾಖಲೆ ಹೊಂದಿದೆ. ಆ ದಾಖಲೆಗೆ ವೆಸ್ಟ್‌ ಇಂಡೀಸ್‌ ‘ಎ’ ತಂಡದ ಎದುರಿನ ಪಂದ್ಯದಲ್ಲಿ ಭಾನುವಾರ ಪಡೆದ ಗೆಲುವೂ ಸೇರ್ಪಡೆಯಾಯಿತು.ಈ-- ಕ್ರೀಡಾಂಗಣದಲ್ಲಿ ಭಾರತ ‘ಎ’ ಇದುವರೆಗೂ ನಾಲ್ಕು ಏಕದಿನ ಪಂದ್ಯಗಳನ್ನು ಆಡಿದೆ. 2004ರಲ್ಲಿ ಇಂಗ್ಲೆಂಡ್‌ ‘ಎ’ ತಂಡದ ಎದುರು ಮೂರು ಪಂದ್ಯಗಳ ಸರಣಿಯನ್ನು ಆಡಿತ್ತು. ಆ ಮೂರು ಪಂದ್ಯಗಳಲ್ಲಿಯೂ ಆತಿಥೇಯರೇ ಗೆಲುವು ಸಾಧಿಸಿದ್ದರು.ಇಂಗ್ಲೆಂಡ್‌ ‘ಎ’ ತಂಡದ ಎದುರಿನ ಮೊದಲ ಪಂದ್ಯದಲ್ಲಿ 55 ರನ್‌, ಎರಡನೇ ಪಂದ್ಯದಲ್ಲಿ ಎರಡು ವಿಕೆಟ್‌ ಮತ್ತು ಮೂರನೇ ಪಂದ್ಯದಲ್ಲಿ ಭಾರತ ಐದು ವಿಕೆಟ್‌ ಗೆಲುವು ದಾಖಲಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry