ಮುಂದುವರಿದ ಲಾರಿ ಮುಷ್ಕರ

7

ಮುಂದುವರಿದ ಲಾರಿ ಮುಷ್ಕರ

Published:
Updated:
ಮುಂದುವರಿದ ಲಾರಿ ಮುಷ್ಕರ

ಮೈಸೂರು: ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟರುಗಳ ಒಕ್ಕೂಟದ ಕರೆ ಮೇರೆಗೆ ಮರಳು ಲಾರಿ ಮಾಲೀಕರು ಮುಷ್ಕರ ಹೂಡಿರುವುದರಿಂದ ಜಿಲ್ಲೆಯಲ್ಲಿ ಮರಳು ಸರಬರಾಜು ಸಂಪೂರ್ಣ ಸ್ಥಗಿತಗೊಂಡಿದೆ. ಮನೆ ಮತ್ತು ಕಟ್ಟಡ ನಿರ್ಮಾಣ ಮಾಡುತ್ತಿರುವವರು ಇದರಿಂದ ತೊಂದರೆಗೆ ಸಿಲುಕಿ ಪರಿಪಾಟಲು ಅನುಭವಿಸುತ್ತಿದ್ದಾರೆ.

ಮರಳು ಸಾಗಣೆಗಾರರ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ, ವಿವಿಧ ಬೇಡಿಕೆಗಳನ್ನು ಈಡೇರಿ ಸುವಂತೆ ಒತ್ತಾಯಿಸಿ ಮರಳು ಲಾರಿ ಮಾಲೀಕರು ಮುಷ್ಕರ ಆರಂಭಿಸಿ 7 ದಿನಗಳು ಉರುಳಿದವು. ಆದರೆ ಸರ್ಕಾರ ಇನ್ನೂ ಒಕ್ಕೂಟದ ಮುಖಂಡರನ್ನು ಕರೆದು ಸಭೆ ಮಾಡಿ ಸಮಸ್ಯೆ ಪರಿಹರಿಸಲು ಮುಂದಾ ಗದ ಹಿನ್ನೆಲೆಯಲ್ಲಿ ಮರಳು ಸಾಗಣೆ ಸಮಸ್ಯೆ ಮತ್ತಷ್ಟು ಜಠಿಲವಾಗಿದೆ.ಪಟ್ಟು ಸಡಿಲಿಸದ ಲಾರಿ ಮಾಲೀಕರು ಮುಷ್ಕರ ವನ್ನು ಮುಂದುವರೆಸಿದ್ದಾರೆ. ಕಟ್ಟಡಕ್ಕೆ ಅಗತ್ಯವಾಗಿ ಬೇಕಾದ ಮರಳು, ಕಲ್ಲು, ಜಲ್ಲಿ ಹಾಗೂ ಇಟ್ಟಿಗೆ ಸರಬರಾಜು ಕಳೆದ 7 ದಿನಗಳಿಂದ ಪೂರ್ಣ ಸ್ಥಗಿತ ಗೊಂಡಿದೆ. ನಿರ್ಮಾಣ ಹಂತದಲ್ಲಿದ್ದ ಮನೆ ಮತ್ತು ಕಟ್ಟಡಗಳು ಅರ್ಧಕ್ಕೆ ನಿಂತಿವೆ. ಮತ್ತೆ ಕೆಲವರು ತರಾತುರಿಯಲ್ಲಿ ಮನೆ ಕಟ್ಟುವ ಸಲುವಾಗಿ ಹೆಚ್ಚು ವರಿ ಹಣ ನೀಡಿ ಮರಳು ಕೊಂಡು ಮನೆ ಕಟ್ಟು ತ್ತಿದ್ದಾರೆ. ಒಟ್ಟಾರೆ ಮನೆ, ಕಟ್ಟಡ ನಿರ್ಮಾಣ ಕಾರರಿಗೆ ಲಾರಿ ಮುಷ್ಕರದಿಂದ ಒಡೆತ ಬಿದ್ದಿದೆ.ಮರಳು ದರ ಭಾರ: ಸಾಮಾನ್ಯವಾಗಿ 1 ಲೋಡ್ ಮರಳು ರೂ.15 ಸಾವಿರಕ್ಕೆ ದೊರಕುತ್ತಿತ್ತು. ಆದರೆ ಮರಳು ಮುಷ್ಕರ ಆರಂಭವಾದ ದಿನ ದಿಂದ ಮರಳು ಮಾರಾಟ  ಸ್ಥಗಿತ ಗೊಂಡಿದೆ. ತುರ್ತಾಗಿ ಮನೆ ಕಟ್ಟುತ್ತಿರುವವರು ಮರಳು ಸಂಗ್ರಹಕಾರರಿಂದ ದುಬಾರಿ ಬೆಲೆ ತೆತ್ತು ಮರಳು ಖರೀದಿಗೆ ಮುಂದಾಗಿದ್ದಾರೆ. ಈಗ ಲೋಡ್ ಮರಳು ರೂ.20ರಿಂದ22 ಸಾವಿರಕ್ಕೆ ಹೆಚ್ಚಿದೆ.ಸಂಗ್ರಹಿಸಿದವರು ಬಚಾವ್: ಮರಳು ಸಂಗ್ರಹ ಮಾಡಿದ್ದವರು ಮನೆ ಮತ್ತು ಕಟ್ಟಡ ನಿರ್ಮಾ ಣವನ್ನು ನಿರಾತಂಕವಾಗಿ ಮುಂದುವರೆಸಿದ್ದಾರೆ. ಆದರೆ ಮರಳು ಮುಷ್ಕರ ಮುಂದುವರೆದಿರು ವುದರಿಂದ ಇವರಲ್ಲಿ ಆತಂಕ ಮನೆ ಮಾಡಿದೆ.ಕಾರ್ಮಿಕರ ಬವಣೆ: ನಗರದಲ್ಲಿ 1200 ಮರಳು ಲಾರಿಗಳು, 1 ಸಾವಿರ ಕಟ್ಟಡ ಸಾಮಗ್ರಿ ಸಾಗಣೆ ಲಾರಿಗಳು ಸೇರಿದಂತೆ ಒಟ್ಟು 2,200 ಲಾರಿಗಳು ಇವೆ. ಇವುಗಳನ್ನೇ ನಂಬಿ ನೂರಾರು ಕಾರ್ಮಿಕರು ಬದುಕು ಸಾಗಿಸುತ್ತಿದ್ದಾರೆ. ಆದರೆ ಒಂದು ವಾರದಿಂದ ಈಚೆಗೆ ಲಾರಿ ಮುಷ್ಕರ ನಡೆಯುತ್ತಿರುವುದರಿಂದ ಇವರ ಜೀವನ ದುಸ್ತರವಾಗಿದೆ.ಇಂದಲ್ಲ ನಾಳೆ ಮುಷ್ಕರ ಕೈಬಿಡಬಹುದು ಎಂಬ ಆಶಾಭಾವದಿಂದ ನಿತ್ಯ ಲಾರಿ ತಂಗುದಾಣಕ್ಕೆ ಅಲೆದಾಡುತ್ತಿದ್ದಾರೆ. ಮುಷ್ಕರ ಕೈಬಿಡದ ವಿಷಯ ತಿಳಿದು ಬರಿಗೈನಲ್ಲಿ ಹಿಂದಿರುಗುತ್ತಿದ್ದಾರೆ. ಕಟ್ಟಡ ಸಾಮಗ್ರಿಗಳ ಸಾಗಣೆ ಹೊರತುಪಡಿಸಿ ಬೇರಾವ ಕಸುಬು ಇವರಿಗೆ ಗೊತ್ತಿಲ್ಲ. ಹಾಗಾಗಿ ಲಾರಿ ಮುಷ್ಕರದ ಬಿಸಿ ಕಾರ್ಮಿಕರ ಮೇಲೂ ತಟ್ಟಿದೆ.`ಲಾರಿ ಮುಷ್ಕರ ಆರಂಭವಾಗಿ ವಾರ ಕಳೆದರೂ ಸರ್ಕಾರ ಇನ್ನೂ ಮಾತುಕತೆಗೆ ಕರೆದಿಲ್ಲ. ಮರಳು ಸಾಗಣೆಗಾರರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಬೇಡಿಕೆಗಳು ಈಡೇರುವವರೆಗೂ ಮುಷ್ಕರ ಮುಂದುವರೆಸಲಾಗುವುದು. ಮರಳು ನೀತಿ ಜಾರಿ ಮಾಡುವುದಾಗಿ ತಿಳಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವರು ಸಮಸ್ಯೆ ಬಗೆಹರಿಸಲು ಮುಂದಾಗಿಲ್ಲ~ ಎಂದು ಮೈಸೂರು ನಗರ ಸ್ಥಳೀಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಬಿ.ಕೋದಂಡರಾಮು ತಿಳಿಸಿದರು.`ಲಾರಿ ಮುಷ್ಕರದಿಂದಾಗಿ ಮರಳು ಸಾಗಣೆ ಸಂಪೂರ್ಣ ಸ್ಥಗಿತಗೊಂಡಿದೆ. ಮರಳು ತೆಗೆಯಲು ಟೆಂಡರ್ ಕರೆಯಲಾಗಿದೆ. ಸಮಸ್ಯೆ ಬಗೆಹರಿಸಲು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ. ಶೀಘ್ರವೇ ಸಮಸ್ಯೆಯನ್ನು ಬಗೆಹರಿಸಲಾಗುವುದು. ಮರಳು ಸಾಗಣೆದಾರರ ಬೇಡಿಕೆ ಈಡೇರಿಸುವ ಕುರಿತು ರಾಜ್ಯದಾದ್ಯಂತ ಮುಷ್ಕರ ನಡೆಸುತ್ತಿರುವುದರಿಂದ ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ~ ಎಂದು ಜಿಲ್ಲಾಧಿಕಾರಿ ಪಿ.ಎಸ್.ವಸ್ತ್ರದ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry