ಮುಂದುವರಿದ ಸಿಐಟಿಯು ಮುಷ್ಕರ

7

ಮುಂದುವರಿದ ಸಿಐಟಿಯು ಮುಷ್ಕರ

Published:
Updated:

ಹಾಸನ: ಸೂಕ್ತ ವೇತನ ಸೇರಿದಂತೆ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆ 2ನೇ ದಿನವೂ ಮುಂದುವರಿದಿದೆ.ನಗರದ ಹೊರವಲಯದ ಕೈಗಾರಿಕ ಪ್ರದೇಶದ ಹರಿಯಾಣ ಪವರ ಸ್ಟೀಲ್ ಕಂಪೆನಿ ಕಾರ್ಮಿಕರನ್ನು ದಿನದ 12 ಗಂಟೆ ದುಡಿಸಿಕೊಂಡು ಕಡಿಮೆ ವೇತನ ನೀಡುತ್ತಿದೆ. 5 ವರ್ಷದಿಂದ ಬೇರೆ ರಾಜ್ಯದವರು ಸೇರಿದಂತೆ ಸಮಾರು 150ಕ್ಕೂ ಹೆಚ್ಚು ಕಾರ್ಮಿಕರು ದುಡಿಯುತ್ತಿದ್ದಾರೆ. ಕಾರ್ಮಿಕರಿಗೆ ಸಿಗಬೇಕಾದ ಯಾವುದೇ ಸೌಲಭ್ಯ ನೀಡುತ್ತಿಲ್ಲ ಎಂದು ಪ್ರತಿಭಟನಕಾರರು ದೂರಿದರು.ಇದನ್ನು ವಿರೋಧಿಸಿದ ಹಲವು ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ.  ಈ ಸಂಬಂಧ ಲೇಬರ್ ಕಮೀಷನ್‌ಗೂ ದೂರು ನೀಡಿದರೂ, ಯಾವುದೇ ಪ್ರಯೋಜನವಾಗಿಲ್ಲ. ಮುಂದೆ ನಮ್ಮ ಬೇಡಿಕೆ ಈಡೇರದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾ ಗುವುದು ಎಂದು ಪ್ರತಿಭಟನಾಕಾರರು ತಿಳಿಸಿದರು.ಪ್ರತಿಭಟನೆಯಲ್ಲಿ ಸಿಐಟಿಯು ಮುಖಂಡರಾದ ಧರ್ಮೇಶ್, ವಾಸುದೇವ್, ಅರವಿಂದ್ ಇತರರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry